ಬೆಂಗಳೂರು: ಡ್ರೋನ್ ಆಧಾರಿತ ಜಮೀನುಗಳ ಮತ್ತು ಆಸ್ತಿಗಳ ಮರು ಭೂಮಾಪನ ಕಾರ್ಯಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು ಭಾರತೀಯ ಸರ್ವೇ ಕ್ಷಣಾ ಸಂಸ್ಥೆ ಜತೆ ಒಪ್ಪಂದ ಮಾಡಿ ಕೊಂಡಿದೆ.
ಡ್ರೋನ್/ಯು ವಿಎ (ಅನ್ ಮ್ಯಾನ್ ಏರಿಯಲ್ ವೆಹಿಕಲ್) ಬಳಸಿ ಜಮೀನು ಮತ್ತು ಆಸ್ತಿಗಳ ಭೂ ಮಾಪನ ಮಾಡಿ ಮಾನವ ನಿರ್ಮಿತ ಲೋಪ ದೋಷ ರಹಿತ ಜಮೀನು ಹಾಗೂ ಆಸ್ತಿಗಳ ಗಡಿ
ಗುರುತಿಸುವುದು ಇದರ ಉದ್ದೇಶ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಡ್ರೋನ್ ಆಧಾರಿತ ಭೂಮಿ ಮತ್ತು ಆಸ್ತಿ ಸರ್ವೇ ಯೋಜನೆ ಪ್ರಾಯೋಗಿಕವಾಗಿ ಬೆಂಗಳೂರಿನ ಜಯನಗರ 4 ನೇ ವಾರ್ಡ್ ಮತ್ತು ರಾಮ ನಗರದ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕೈಗೊಂಡಿದ್ದು ಅದು ಯಶಸ್ವಿಯಾಗಿದೆ ಎಂದರು.
ಮೊದಲ ಹಂತದಲ್ಲಿ ತುಮಕೂರು,ಹಾಸನ, ಉತ್ತರ ಕನ್ನಡ, ಬೆಳಗಾವಿ, ರಾಮನಗರ ಹಾಗೂ ಬೆಂಗಳೂರು ನಗರದಲ್ಲಿ ಕೈಗೊಂಡು 2 ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದರು.