ಉಡುಪಿ: ವಿಶ್ವ ತೊನ್ನು ರೋಗ ದಿನಾಚರಣೆಯ ಅಂಗವಾಗಿ ರಾಜ್ಯಾದ್ಯಂತ ಸಾಗಲಿರುವ ತೊನ್ನುರೋಗ ಜಾಗೃತಿ ರಥಯಾತ್ರೆಗೆ ಗುರುವಾರ ಮಣಿಪಾಲ ಕೆಎಂಸಿ ವಠಾರದಲ್ಲಿ ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷಕ ಡಾ| ಪದ್ಮರಾಜ ಹೆಗ್ಡೆ ಚಾಲನೆ ನೀಡಿದರು.
ತೊನ್ನು ರೋಗದ ಬಗ್ಗೆ ಜಾಗೃತಿ ಅತ್ಯಂತ ಅಗತ್ಯವಾಗಿದ್ದು, ಜನರು ಇದರ ಪ್ರಯೋಜನ ಪಡೆಯಬೇಕೆಂದು ಡಾ| ಹೆಗ್ಡೆ ತಿಳಿಸಿದರು.
ಚರ್ಮರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ| ಶ್ರುತಕೀರ್ತಿ ಶೆಣೈ, ತೊನ್ನುರೋಗ ಶಾಪವಲ್ಲ. ಅಂಟು ರೋಗ ಅಲ್ಲ. ಇದನ್ನೂ ಗುಣಪಡಿಸಲು ಸಾಧ್ಯ ಈ ನಿಟ್ಟಿನಲ್ಲಿ ರಾಜ್ಯಚರ್ಮ ರೋಗತಜ್ಞರ ಸಂಘದ ಮೂಲಕ ಈ ರಥಯಾತ್ರೆಯು ನಡೆಯುತ್ತಿದೆ ಎಂದರು.
ಡಾ| ವರ್ಷಾ ಶೆಟ್ಟಿ, ಡಾ| ಮೇಘನಾ, ಡಾ| ಸ್ಮಿತಾ ಪ್ರಭು, ಡಾ| ಸುಧೀರ್ ಕಾಮತ್ ಮತ್ತು ವೈದ್ಯಕೀಯ ವಿದ್ಯಾರ್ಥಿ ಗಳು ಭಾಗವಹಿಸಿದ್ದರು.
ಮಾಧವ ಪೈ ಸ್ಮಾರಕ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿ ಗಳು ಜಾಥಾದಲ್ಲಿ ಭಾಗವ ಹಿಸಿದ್ದರು. ಈ ಸಂದರ್ಭದಲ್ಲಿ ವೈದ್ಯಕೀಯ ಪ್ರತಿನಿಧಿ ಸಂಘದ ಮಧುಸೂದನ್ ಹೇರೂರು, ರವಿರಾಜ್ ಎಚ್.ಪಿ., ಶ್ರೀನಾಥ್ ಕೋಟ, ಉಪನ್ಯಾಸಕ ಚಿರಂಜನ್ ಸೇರಿಗಾರ್ ಮತ್ತಿತರರಿದ್ದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.