ವಿದ್ಯಾನಗರ : ಕಾಸರಗೋಡಿಗೆ ಡ್ರೈವಿಂಗ್ ಟೆಸ್ಟ್ ಸ್ಟೇಷನ್ ಸ್ಥಾಪಿಸಬೇಕೆಂಬ ದೀರ್ಘ ಕಾಲದ ಬೇಡಿಕೆ ಕೊನೆಗೂ ಸಕ್ಷಾತ್ಕಾರಗೊಳ್ಳುವ ದಿನ ಅಗತವಾಗಿದೆ. ಸೀತಾಂಗೋಳಿ ಸಮೀಪದ ಬೇಳದಲ್ಲಿ ಮೋಟಾರು ವಾಹನ ಇಲಾಖೆಯ ಆಧುನಿಕ ಡ್ರೈವಿಂಗ್ ಟೆಸ್ಟ್ ಸ್ಟೇಷನ್ ನಿರ್ಮಾಣವಾಗುತ್ತಿದ್ದು ಮುಂದಿನ ತಿಂಗಳಲ್ಲಿ ಉದ್ಘಾಟನೆಗೊಳ್ಳುವ ಸಾಧ್ಯತೆಯಿದೆ. ಕಂಪ್ಯೂಟರೀಕೃತ ವಾಹನ ಪರಿಶೀಲನೆಗೂ ಇಲ್ಲಿ ಅಗತ್ಯ ಸೌಕರ್ಯ ಏರ್ಪಡಿಸಲಾಗುತ್ತಿದೆ.
ಒಂದೂವರೆ ಎಕರೆ ಸ್ಥಳದಲ್ಲಿ ನೂತನ ಸುಸಜ್ಜಿತ ತರಬೇತಿ ಕೇಂದ್ರ: ನೀರ್ಚಾಲು ಸಮೀಪದ ಬೇಳದಲ್ಲಿ ಸರಕಾರ ಒದಗಿಸಿರುವ ಒಂದೂವರೆ ಎಕರೆಯಲ್ಲಿ ಮೋಟಾರು ವಾಹನ ಇಲಾಖೆಯ ಸುಸಜ್ಜಿತ ವಾಹನ ಚಾಲನೆ ತರಬೇತಿ ಕೇಂದ್ರ ನಿರ್ಮಾಣವಾಗುತ್ತಿದ್ದು, ತರಬೇತಿ ಹಾಗೂ ಪರಿಶೀಲನೆಗಳಿಗೆ ಅಗತ್ಯವಿರುವ ಟ್ರ್ಯಾಕ್ ಮತ್ತು ಕಟ್ಟಡಗಳ ನಿರ್ಮಾಣ ಈಗಾಗಲೇ ಪೂರ್ಣಗೊಂಡಿದೆ. ಈರಾಳುಂಗಲ್ ಲೇಬರ್ ಸಹಕಾರಿ ಸೊಸೈಟಿ ನಿರ್ಮಾಣದ ಗುತ್ತಿಗೆ ವಹಿಸಿದೆ.
ಬೇಳದಲ್ಲಿ ನಿರ್ಮಾಣವಾಗುತ್ತಿರುವ ವಾಹನ ಚಾಲನೆ ತರಬೇತಿ ಮತ್ತು ಪರಿಶೀಲನ ಕೇಂದ್ರದಿಂದ ಮಂಜೇಶ್ವರ ಹಾಗೂ ಕಾಸರಗೋಡು ತಾಲೂಕು ವ್ಯಾಪ್ತಿಯ ಜನರಿಗೆ ಭಾರಿ ಉಪಯೋಗವಾಗಲಿದೆ. ಈ ಹಿಂದೆ ಮಂಜೇಶ್ವರ, ಕಾಸರಗೋಡಿನ ಜನರು ವಾಹನ ಚಾಲನೆ ಪರಿಶೀಲನೆಗಾಗಿ ಕಾಸರಗೋಡಿನ ಪ್ರಧಾನ ಕಾರ್ಯಲಯವನ್ನೇ ಅವಲಂಬಿಸಬೇಕಿತ್ತು. ಜಿಲ್ಲೆಯ ಇತರ ತಾಲೂಕುಗಳ ಜನರಿಗೂ ಇದೇ ಕೇಂದ್ರವಾಗಿ ಬಳಕೆಯಾಗುತ್ತಿದ್ದುದರಿಂದ ತೀವ್ರ ಜನ ದಟ್ಟಣೆ ಕಂಡುಬರುತ್ತಿತ್ತು. ಜನ ಸಾಮಾನ್ಯರು ವಾಹನ ಚಾಲನೆ ಪರವಾನಿಗೆಗೆ ದಿನಪೂರ್ತಿ, ಕೆಲವೊಮ್ಮೆ ವಾರಗಳಷ್ಟು ಕಾಲ ಕಾಯುವ ಸ್ಥಿತಿ ಉಂಟಾಗುತ್ತಿತ್ತು. ಆದರೆ ಈಗ ಬೇಳದಲ್ಲಿ ಪರಿಶೀಲನಾ ಕೇಂದ್ರ ರ್ಮಾಣವಾಗುತ್ತಿರುವುದರಿಂದ ಜನರಿಗೆ ಸಮಯ, ದೂರಗಳನ್ನು ಉಳಿಸಿ ಶೕಘ್ರದಲ್ಲಿ ಕೆಲಸ ಕಾರ್ಯಗಳನ್ನು ಪೂರೈಸಲು ಸಹಕಾರಿಯಾಗಲಿದೆ.
ಕಾಸರಗೋಡಿನಿಂದ ಮಧೂರು ದೇವಸ್ಥಾನದ ಬಳಿಯಿಂದ ನೀರ್ಚಾಲಿಗೆ ಹಾದುಹೋಗುವ ರಸ್ತೆಯ ಮೂಲಕವೂ ಕುಂಬಳೆಯಿಂದ ನೀರ್ಚಾಲು ಮೂಲ
– ವಿದ್ಯಾಗಣೇಶ್ ಆಣಂಗೂರು