Advertisement

ತಂತ್ರಜ್ಞಾನ ಆಧಾರಿತ ಶೈಕ್ಷಣಿಕ ಬೋಧನೆಗೆ ಚಾಲನೆ

12:25 PM Jan 31, 2017 | Team Udayavani |

ದಾವಣಗೆರೆ: ವಿದ್ಯಾರ್ಥಿಗಳು ಇಂದಿನ ಆಧುನಿಕ ತಂತ್ರಜ್ಞಾನ ಯುಗದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಡೆಪ್ಯಟಿ ಮೇಯರ್‌ ಬಿ. ನಾಗರಾಜಪ್ಪ ಸಲಹೆ ನೀಡಿದ್ದಾರೆ. ಮಂಗಳವಾರ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಜ್ಞಾನಸಂಗಮ ಮತ್ತು ಐಸಿಟಿ ಆಧಾರಿತ ಶೈಕ್ಷಣಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Advertisement

ಈಚೆಗೆ ಹೆಚ್ಚಾಗುತ್ತಿರುವ ತಂತ್ರಜ್ಞಾನ ಸೌಲಭ್ಯಗಳ ಮೇಲೆ ನಾವೆಲ್ಲರೂ ಅವಲಂಬಿತರಾಗಿದ್ದೇವೆ. ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಒಳ್ಳೆಯ ಜೀವನ  ಕಟ್ಟಿಕೊಳ್ಳಲು ಬಳಸಬೇಕು ಎಂದರು. ಈಗ ಪೆನ್ನು. ಪುಸ್ತಕಗಳ ಜಾಗದಲ್ಲಿ ಕಂಪ್ಯೂಟರ್‌, ಮೌಸ್‌, ಲ್ಯಾಪ್‌ಟಾಪ್‌, ಟ್ಯಾಬ್‌ ಕಂಡು ಬರುತ್ತಿವೆ. ಶಾಲಾ-ಕಾಲೇಜು ಕೊಠಡಿಗಳ ವಾತಾವರಣವೇ ಬದಲಾಗಿದೆ.

ಕುಳಿತಲ್ಲಿಯೇ ಜಗತ್ತಿನ ಮೂಲೆ ಮೂಲೆ ಯಲ್ಲಿನ ವಿಚಾರ, ವಿದ್ಯಮಾನದ ಬಗ್ಗೆ ಮಾಹಿತಿ ಪಡೆಯಬಹುದು. ಅದನ್ನು ಒಳ್ಳೆಯ  ಕಾರ್ಯಕ್ಕೆ ಬಳಸಬೇಕು ಎಂದು ತಿಳಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ, ಇಂದು ಇಡೀ ವಿಶ್ವವೇ ತಂತ್ರಜ್ಞಾನದ  ಬಳಕೆಯಲ್ಲಿದೆ.

ಸರ್ಕಾರಿ ಕಾಲೇಜಿನಲ್ಲಿ ತಂತ್ರಜ್ಞಾನ ಆಧಾರಿತ ಶಿಕ್ಷಣ ನೀಡುತ್ತಿರುವುದು ಸಂತೋಷದ ವಿಚಾರ ಎಂದು ತಿಳಿಸಿದರು. ಕಾಲೇಜು ಪ್ರಾಚಾರ್ಯ ಡಾ| ದಾದಾಪೀರ್‌  ನವಿಲೇಹಾಳ್‌ ಮಾತನಾಡಿ, ಉನ್ನತ ಶಿಕ್ಷಣ ಅಭಿವೃದ್ಧಿ ಯೋಜನೆಯಡಿ 412 ಸರ್ಕಾರಿ ಪದವಿ ಕಾಲೇಜುಗಳ ಪೈಕಿ 98 ಕಾಲೇಜುಗಳಲ್ಲಿ ಜ್ಞಾನಸಂಗಮ ಮತ್ತು ಐಸಿಟಿ  ಆಧಾರಿತ ಶೈಕ್ಷಣಿಕ ಕಾರ್ಯಕ್ರಮ ಅಳವಡಿಸಲಾಗಿದೆ. ಪ್ರತಿ ಕಾಲೇಜಿಗೆ 2 ಕೋಟಿ ಅನುದಾನ ನೀಡಲಾಗಿದೆ.

70 ಲಕ್ಷ ಅನುದಾನದಲ್ಲಿ 4 ಕೊಠಡಿ ನಿರ್ಮಿಸಲಾಗಿದೆ.  ಉಪನ್ಯಾಸಕರಿಗೆ 15 ಲ್ಯಾಪ್‌ಟಾಪ್‌ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಪ್ರಾರಂಭವಾಗಲಿದೆ ಎಂದು ತಿಳಿಸಿದರು. ಡಾ| ಕನ್ನಕಟ್ಟೆ ಜಯಣ್ಣ, ಡಾ| ಕಾವ್ಯಶ್ರೀ,  ಬಿ.ಎಲ್‌. ಶಿವಮೂರ್ತಿ, ಕೆ.ಎ. ಬಾಬು. ಕೆ.ಎಂ. ರುದ್ರಪ್ಪ, ಕೆ.ವಿ. ಸುನೀತಾ ಇತರರು ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next