Advertisement

ಡ್ರೈವಿಂಗ್‌ ಟೆಸ್ಟ್‌ ಇಲ್ಲದೆ ಚಾಲನ ಪರವಾನಿಗೆ ! ಕೇಂದ್ರ ಸಚಿವಾಲಯದಿಂದ ಕರಡು ಅಧಿಸೂಚನೆ

12:13 AM Feb 07, 2021 | Team Udayavani |

ಹೊಸದಿಲ್ಲಿ : ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಚಾಲಕ ತರಬೇತಿ ಕೇಂದ್ರಗಳ ಮಾನ್ಯತೆಗಾಗಿ ಶುಕ್ರವಾರ ಕರಡು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಇದರ ಅನ್ವಯ ಇನ್ನು ಮುಂದೆ ಮಾನ್ಯತೆ ಪಡೆದ ತರಬೇತಿ ಕೇಂದ್ರಗಳಿಂದ ಯಶಸ್ವಿಯಾಗಿ ತರಬೇತಿಯನ್ನು ಪೂರ್ಣಗೊಳಿಸಿದ ವ್ಯಕ್ತಿಯು ಆರ್‌ಟಿಒ ದಲ್ಲಿ ಚಾಲನ ಪರವಾನಿಗೆ ಅರ್ಜಿ ಸಲ್ಲಿಸುವಾಗ ಡ್ರೈವಿಂಗ್‌ ಟೆಸ್ಟ್‌ಗೆ ಒಳಪಡುವ ಅಗತ್ಯವಿರುವುದಿಲ್ಲ!

Advertisement

ಈ ಕ್ರಮವು ದೇಶದಲ್ಲಿ ಪರಿಣತ ಚಾಲಕರನ್ನು ಹೊಂದಲು ಸಹಾಯ ಮಾಡುತ್ತದೆ ಮತ್ತು ರಸ್ತೆ ಅಪಘಾತಗಳನ್ನು ಕಡಿಮೆ ಮಾಡುತ್ತದೆ ಎಂದು ಸರಕಾರ ಹೇಳಿದೆ.

ಯಾವ ಸಂಸ್ಥೆಗಳಿಗೆ ಮಾನ್ಯತೆ ?
ಲಘು ವಾಹನಗಳಿಗಾಗಿ ಸಿಮ್ಯುಲೇಟರ್‌, ಬಯೋಮೆಟ್ರಿಕ್‌ ಅಟೆಂಡೆನ್ಸ್‌, ಚಾಲನ ಟ್ರ್ಯಾಕ್‌ಗಳು, ತ್ವರಿತ ಆನ್‌ಲೈನ್‌ ಮೌಲ್ಯಮಾಪನ ಮತ್ತಿತರ ಮೂಲಸೌಕರ್ಯ ಹೊಂದಿರುವ ತರಬೇತಿ ಸಂಸ್ಥೆಗಳಿಗೆ ಮಾತ್ರ ಸ್ಥಳೀಯ ಸಾರಿಗೆ ಇಲಾಖೆ 5 ವರ್ಷಗಳ ವರೆಗೆ ಮಾನ್ಯತೆ ನೀಡುತ್ತದೆ. ಇಂಥ ಸಂಸ್ಥೆಗಳಲ್ಲಿ ಡ್ರೈವಿಂಗ್‌ ಕಲಿತವರು ಡ್ರೈವಿಂಗ್‌ ಟೆಸ್ಟ್‌ ನೀಡುವ ಅಗತ್ಯ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next