ಶಿರಸಿ: ತಾಲೂಕಿನಲ್ಲಿ ಕಾನೂನು ಸಾಕ್ಷರತಾ ರಥ ಮತ್ತು ಜನತಾ ನ್ಯಾಯಾಲಯ ಅಭಿಯಾನ ಕಾರ್ಯಕ್ರಮವನ್ನು ಇಲ್ಲಿನ ದಿವಾಣಿ ನ್ಯಾಯಾಲಯದಲ್ಲಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಲಾಯಿತು.
ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಪಂ, ಅರಣ್ಯ ಇಲಾಖೆ, ಕಾನೂನು ಮಹಾ ವಿದ್ಯಾಲಯ, ರಾಷ್ಟ್ರೀಯ ಮಜದೂರ ಕಾಂಗ್ರೆಸ್ ಸಮಿತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಮಿತಿ ಇವರ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬಳಿಕ ಇಟಗುಳಿ ಗ್ರಾಪಂ ಸಭಾಭವನದಲ್ಲಿ ಮಹಿಳೆ ಮತ್ತು ಕಾನೂನು ಎನ್ನುವ ವಿಷಯವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಗ್ರಾಪಂ ಅಧ್ಯಕ್ಷೆ ಗೀತಾ ಭೋವಿ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಾಧೀಶೆ ದಿವ್ಯಶ್ರೀ ಸಿ.ಎಂ. ಗಿಡಕ್ಕೆ ನೀರುಣಿಸಿ ಉದ್ಘಾಟಿಸಿ ಮಾತನಾಡಿದರು. ಇಟಗುಳಿ ಪಿಡಿಒ ಕುಮಾರ ವಾಸನ್ ಹಾಗೂ ಉಪನ್ಯಾಸಕರಾಗಿ ವಕೀಲರಾದ ಕವಿತಾ ನಾಯ್ಕ ಭಾಗವಹಿಸಿದ್ದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸ್ವಸಹಾಯ ಸಂಘ ಸಭಾಭವನದಲ್ಲಿ ಪೋಸ್ಕೋ ಕಾಯ್ದೆ ಕುರಿತು ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಎಸ್.ಎನ್. ನಾಯ್ಕ ಭಾಗವಹಿಸಿದ್ದರು. ನ್ಯಾ| ಶಾಂತವೀರ ಶಿವಪ್ಪ ಉದ್ಘಾಟಿಸಿದರು. ವಕೀಲ ಸಿ.ಎಫ್. ಈರೇಶ ಉಪನ್ಯಾಸ ನೀಡಿದ್ದರು.
Advertisement
ಕಾನೂನು ಮಹಾವಿದ್ಯಾಲಯದಲ್ಲಿ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಎನ್ನುವ ವಿಷಯವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಕಾನೂನು ಶಿಕ್ಷಣ ಕಾಲೇಜು ಅಧ್ಯಕ್ಷ ಎಂ.ಒ. ಹೆಗಡೆ ಕೊಡ್ಲಗದ್ದೆ ಅಧ್ಯಕ್ಷತೆ ವಹಿಸಿದ್ದರು. ದಿವ್ಯಶ್ರೀ ಸಿ.ಎಂ. ಶಂಕರ ರೆಡ್ಡಿ ಡಿ.ವಿ., ಸಂಘದ ಅಧ್ಯಕ್ಷ ಎಸ್.ಎನ್. ನಾಯ್ಕ, ಕಾರ್ಯದರ್ಶಿ ಈಶ್ವರ ಎಂ. ನಾಯ್ಕ, ಸಹಾಯಕ ಸರಕಾರಿ ಅಭಿಯೋಜಕಿ ಎಸ್.ಎಸ್. ಇನಾಮದಾರ ಹಾಗೂ ಉಪನ್ಯಾಸಕರಾಗಿ ವಕೀಲ ಜಿ.ಕೆ. ಹೆಗಡೆ ಬಿಸಲಕೊಪ್ಪ ಭಾಗವಹಿಸಿದ್ದರು.
Related Articles
Advertisement