Advertisement

ಚಾಲಕರ ಅಸಡ್ಡೆಯಿಂದ ದುರ್ಘ‌ಟನೆ

12:24 PM Feb 07, 2022 | Team Udayavani |

ಬೆಂಗಳೂರು: “ನಮ್ಮ ಮನೆಯಲ್ಲಿ ಆದ ನಷ್ಟ ಬೇರೆ ಯಾರ ಮನೆಯಲ್ಲಿ ಆಗಬಾರದು. ಸರ್ಕಾರದ ಆದೇಶವನ್ನು ಸಂಬಂಧಪಟ್ಟ ಇಲಾಖೆಯವರು ಕಟ್ಟುನಿಟ್ಟಾಗಿ ಪಾಲಿಸಬೇಕು. ಜತೆಗೆ ಭಾರೀ ವಾಹನಗಳ ಚಾಲಕರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು.’

Advertisement

ಜ.13ರಂದು ಕನಕಪುರ ಮುಖ್ಯರಸ್ತೆಯಲ್ಲಿ ಟಿಪ್ಪರ್‌ ಲಾರಿ ಡಿಕ್ಕಿ ಹೊಡೆದು ಮೃತಪಟ್ಟ ಖಾಸಗಿ ವಾಹಿನಿಯ ರಿಯಾಲಿಟಿ ಶೋ ಸ್ಪರ್ಧಿ ಸಮನ್ವಿ ಅವರ ತಾಯಿ, ಕಿರುತೆರೆ ನಟಿ ಅಮೃತಾ ಅವರ ಆಕ್ರೋಶದ ಮನವಿ.

“ವೇಗವಾಗಿ ಬಂದ ಟಿಪ್ಪರ್‌ ಲಾರಿ ಚಾಲಕ ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದ್ದ. ಕನಿಷ್ಠ ಸ್ಥಳಕ್ಕೆ ಬಂದು ನೆರವು ನೀಡಬೇಕಿತ್ತು. ಮಾನವಿಯತೆ ಇಲ್ಲದೆ ವಾಹನ ಚಾಲನೆ ಮಾಡುತ್ತಾರೆ. ಅಂತಹ ಲಾರಿ ಮಾಲೀಕರು, ಚಾಲಕರಿಗೆ ಸಂಚಾರ ಪೊಲೀಸರು ಮತ್ತು ಸರ್ಕಾರ ದಯ ದಾಕ್ಷಿಣ್ಯ ತೋರಬಾರದು. ಕಠಿಣ ಶಿಕ್ಷೆಗೆ ಗುರಿ ಮಾಡಬೇಕು’ ಎಂದು ಅಗ್ರಹಿಸುತ್ತಾರೆ. “ಈಗಲು ಕನಕಪುರ ಮುಖ್ಯರಸ್ತೆಯಲ್ಲಿ ಭಾರೀ ವಾಹನಗಳು ಓಡಾಡುತ್ತಿವೆ. ಅವುಗಳ ವೇಗ ನೋಡಿದರೆ ರಸ್ತೆ ವಾಹನ ತರಲು ಭಯವಾಗುತ್ತದೆ. ದೊಡ್ಡ ಗಾತ್ರದ ವಾಹನಗಳು ಓಡಾಡುವ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಓಡಾಡುವುದೇ ದುಸ್ತರವಾಗಿದೆ.

ಹೀಗಾಗಿ ದ್ವಿಚಕ್ರ ವಾಹನಗಳಿಗೆ ಸರ್ವೀಸ್‌ ರಸ್ತೆಯನ್ನು ಪ್ರತ್ಯೇಕವಾಗಿ ಮಾಡಿಕೊಡಲಿ. ಇಲ್ಲವಾದರೆ ಭಾರೀ ವಾಹನಗಳ ವೇಗಮಿತಿಯನ್ನು ನಿರ್ಧರಿಸಲಿ.””ಮಗಳನ್ನು ಕಳೆದುಕೊಂಡಿರುವ ನೋವು ಶಾಶ್ವತ. ಆದರೆ, ಕೆಲ ಸಂದರ್ಭದಲ್ಲಿ ಇಡೀ ಕುಟುಂಬದ ಜವಾಬ್ದಾರಿ ಹೊತ್ತಿದ್ದ ವ್ಯಕ್ತಿಯೇ ರಸ್ತೆ ಅಪಘಾತಕ್ಕೆ ಬಲಿಯಾದರೆ ಯಾರು ಹೊಣೆ? ಆ ಮನೆ ಸದಸ್ಯರು ಏನೇಲ್ಲ ಸಮಸ್ಯೆ ಅನುಭವಿಸಬೇಕಾಗುತ್ತದೆ. ಚಾಲಕರ ಅಸಡ್ಡೆಯೇ ಇಂತಹ ದುರ್ಘ‌ಟನೆಗೆ ಕಾರಣ ಎಂದು ಹೇಳುತ್ತಾರೆ.

ಪೊಲೀಸ್‌ ವ್ಯವಸ್ಥೆ ವಿರುದ್ಧ ಆಕ್ರೋಶ: ಇನ್ನು ಇತ್ತೀಚೆಗೆ ಭಾರೀ ವಾಹನದ ಅಡಿಯಲ್ಲಿ ಸಿಲುಕಿ ಮೃತ ಪಟ್ಟ ಪತ್ರಕರ್ತ ಗಂಗಾಧರ್‌ ಮೂರ್ತಿ ಅವರ ಪತ್ನಿ ನೇತ್ರಾವತಿ ಕೂಡ ಭಾರೀ ವಾಹನ ಚಾಲಕರು ಹಾಗೂ ಸಂಚಾರ ಪೊಲೀಸ್‌ ವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

“ಮಧ್ಯಾಹ್ನ 3.598ಕ್ಕೆ ಕರೆ ಮಾಡಿ, ಮಗಳ ಆನ್‌ ಲೈನ್‌ ಹೋಮ್‌ವರ್ಕ್‌ ಮಾಡಿ, ವಾಪಸ್‌ ಕಳುಹಿಸು ಎಂದು ಫೋನ್‌ ಮಾಡಿದ್ದರು. ಆದಾದ ಕೆಲವೇ ಕ್ಷಣಗಳಲ್ಲಿ ರಸ್ತೆ ಅಪಘಾತದಲ್ಲಿ ಅವರು ನಮ್ಮನ್ನ ಬಿಟ್ಟು ಹೋಗಿದ್ದಾರೆ ಎಂಬ ಸುದ್ದಿ ಕೇಳಿ ಆಘಾತವಾಯಿತು. ಅಂತಹ ಚಾಲಕರ ವಿರುದ್ಧ ಪೊಲೀಸರು ಏನು ಕ್ರಮಕೈಗೊಳ್ಳುತ್ತಿದ್ದಾರೆ.’ ಎಂದು ಕಣ್ಣಿರು ಹಾಕಿದರು.

ನಗರ ಪ್ರವೇಶಿಸದಂತೆ ಕ್ರಮಕೈಗೊಳ್ಳಿ :

ನಗರದಲ್ಲಿ ಭಾರೀ ವಾಹನಗಳ ಓಡಾಟ ಇಲ್ಲ ಎಂದು ಹೇಳುತ್ತಾರೆ. ಹಾಗಾದರೆ ಅವುಗಳುಯಾವ ಮಾನದಂಡದಲ್ಲಿ ಸಂಚರಿಸುತ್ತಿವೆ. ನಗರಪ್ರವೇಶಿಸದಂತೆ ಸರ್ಕಾರ ಹೊಸ ನಿಯಮಜಾರಿಗೆ ತರಲಿ. ಇಲ್ಲವಾದರೆ ಜಾರಿಯಲ್ಲಿರುವ ನಿರ್ದಿಷ್ಟ ಸಮಯದಲ್ಲೇ ಅವುಗಳ ಸಂಚಾರಕ್ಕೆಅವಕಾಶ ಮಾಡಿಕೊಡಲಿ. ಅದನ್ನು ಸರಿಯಾಗಿಪಾಲಿಸದ ವಾಹನಗಳ ಮಾಲೀಕರು, ಚಾಲಕರಿಗೆವಿನಾಯಿತಿ ನೀಡದೆ ಕಠಿಣ ಶಿಕ್ಷೆ ವಿಧಿಸಬೇಕು.ಆಗ ಮಾತ್ರ ಇಂತಹ ಅನಾಹುತಗಳ ಕಡಿಮೆ ಆಗುತ್ತವೆ ಎಂದು ಭಾವಕರಾದರು ಅಮೃತಾ.

ಚಾಲಕರ ನಿರ್ಲಕ್ಷ್ಯಕ್ಕೆ ಕುಟುಂಬ ಅನಾಥ :

“ಇಡೀ ಮನೆಯ ಜವಾಬ್ದಾರಿಯನ್ನು ಅವರೇ ನೋಡಿಕೊಳ್ಳುತ್ತಿದ್ದರು. ನಾನು ಕೂಡ ಕೆಲಸಕ್ಕೆ ಹೋಗುತ್ತಿರಲಿಲ್ಲ. ಇಬ್ಬರು ಪುಟ್ಟ ಹೆಣ್ಣು ಮಕ್ಕಳ ಜತೆ ಹೇಗೆ ಜೀವನನಡೆಸಬೇಕು. ಅವರ ಭವಿಷ್ಯ ಹೇಗೆ ರೂಪಿಸಬೇಕುಎಂಬುದೇ ದೊಡ್ಡ ಚಿಂತೆಯಾಗಿದೆ. ಬದುಕಲುಮುಂದಿನ ದಾರಿಯೇ ಕಾಣುತ್ತಿಲ್ಲ. ಲಾರಿ ಚಾಲಕನ ನಿರ್ಲಕ್ಷ್ಯಕ್ಕೆ ನಮ್ಮ ಕುಟುಂಬ ಅನಾಥವಾಗಿದೆ. ಜತೆಗೆಚಾಲಕ ಕುಡಿದು ವಾಹನ ಚಾಲನೆ ಮಾಡಿದ ಎಂದುಹೇಳುತ್ತಿದ್ದಾರೆ. ಹಾಗಾದರೆ ಪೊಲೀಸರು ಏನು ಕ್ರಮಕೈಗೊಂಡಿದ್ದಾರೆ. ಎಷ್ಟು ವರ್ಷ ಜೈಲು ಶಿಕ್ಷೆಯಾಗಿದೆ ಎಂದು ಪ್ರಶ್ನಿಸಿದರು ನೇತ್ರಾವತಿ ಗಂಗಾಧರಮೂರ್ತಿ.

-ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next