Advertisement

Driver ಹತ್ಯೆ: 4 ಭಾರತೀಯರಿಗೆ ಒಟ್ಟು 122 ವರ್ಷ ಜೈಲು ಶಿಕ್ಷೆ

01:11 AM Apr 14, 2024 | Team Udayavani |

ಲಂಡನ್‌: ಭಾರತೀಯ ಮೂಲದ ಡೆಲಿವರಿ ಡ್ರೈವರ್‌ನ ಹತ್ಯೆ ಸಂಬಂಧ ಭಾರತ ಮೂಲದ ನಾಲ್ವರಿಗೆ ಬ್ರಿಟನ್‌ನ ಕೋರ್ಟ್‌ 122 ವರ್ಷಗಳವರೆಗಿನ ಜೈಲು ಶಿಕ್ಷೆ ವಿಧಿಸಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಔರ್ಮನ್‌ ಸಿಂಗ್‌ ಎಂಬ ಚಾಲಕನನ್ನು ಪಶ್ಚಿಮ ಇಂಗ್ಲೆಂಡ್‌ನ‌ಲ್ಲಿ ಕೊಡಲಿ, ಹಾಕಿ ಸ್ಟಿಕ್‌ ಸೇರಿದಂತೆ ಅಪಾಯಕಾರಿ ಶಸ್ತ್ರಗಳನ್ನು ಬಳಸಿ ದಾರುಣವಾಗಿ ಹತ್ಯೆಗೈಯ್ಯಲಾಗಿತ್ತು. ಈಗ ಪ್ರಕರಣದ ವಿಚಾರಣೆ ಪೂರ್ಣಗೊಂಡು, ಆರೋಪಿಗಳಾದ ಅರ್ಶದೀಪ್‌ ಸಿಂಗ್‌, ಜಗದೀಪ್‌ ಸಿಂಗ್‌, ಶಿವದೀಪ್‌ ಸಿಂಗ್ರ , ಮನ್‌ಜೋತ್‌ ಸಿಂಗ್‌ಗೆ ತಲಾ ಕನಿಷ್ಠ 28 ವರ್ಷಗಳ ಜೀವಾವಧಿ ಶಿಕ್ಷೆ ವಿಧಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next