Advertisement

ಆಟೋ ಪ್ರಯಾಣ ದರ ಪರಿಷ್ಕರಣೆಗೆ ಚಾಲಕರ ಮನವಿ

02:55 PM Oct 07, 2019 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಹಲವು ವರ್ಷ ಗಳಿಂದ ಪರಿಷ್ಕರಣೆ ಆಗದೇ ನೆನಗುದಿಗೆ ಬಿದಿರುವ ಆಟೋ ಪ್ರಯಾಣ ದರವನ್ನು ಕೂಡಲೇ ಪರಿಷ್ಕರಿಸಿ ಆಟೋ ಚಾಲಕರ ಹಿತ ಕಾಯಬೇಕೆಂದು ಆಗ್ರಹಿಸಿ ತ್ರಿಚಕ್ರ ವಾಹನ ಚಾಲಕರ ಸಂಘದ ಪದಾಧಿಕಾರಿಗಳು ಇತ್ತೀ ಚೆಗೆ ಜಿಲ್ಲಾಧಿಕಾರಿ ಆರ್‌. ಲತಾಗೆ ಮನವಿ ಸಲ್ಲಿಸಿದರು.

Advertisement

ರಾಜ್ಯ ಆಟೋ ಚಾಲಕರ ಸಂಘದ ಕಾಯಾಧ್ಯಕ್ಷ ಕೆ.ವಿ.ಸುರೇಶ್‌ ಕುಮಾರ್‌, ಜಿಲ್ಲಾಧ್ಯಕ್ಷ ಡಾಂಬು ಶ್ರೀನಿವಾಸ್‌, ಕರವೇ ಜಿಲ್ಲಾಧ್ಯಕ್ಷ ಎಂ.ಆರ್‌.ಲೋಕೇಶ್‌ ಮತ್ತಿತರ ನಿಯೋಗ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಹಕ್ಕೋತ್ತಾಯಗಳನ್ನು ಈಡೇರಿಸುವಂತೆ ಕೋರಿ ಮನವಿ ಸಲ್ಲಿಸಿತು. ಕೇಂದ್ರ ಸರ್ಕಾರ ತಿದ್ದುಪಡಿ ಮೂಲಕ ಜಾರಿಗೆ ತಂದಿರುವ ಮೋಟಾರು ವಾಹನ ಕಾಯ್ದೆಯ ಬಗ್ಗೆ ಕೂಡಲೇ ಸಾರಿಗೆ ಇಲಾಖೆ ಅಧಿಕಾರಿಗಳಿಂದ ಆಟೋ ಚಾಲಕರಿಗೆ ಜಾಗೃತಿ ಮೂಡಿಸಬೇಕು. ಆಟೋ ಚಾಲಕರಿಗೆ ಸಂಬಂಧಿಸಿದ ಸಮಸ್ಯೆ ಗಳ ಚರ್ಚೆಗೆ ಜಿಲ್ಲಾ ಮಟ್ಟದ ಸಾರಿಗೆ ಪ್ರಾಧಿಕಾರ ಸಭೆ ಆಯೋಜಿಸಬೇಕು, ಅಧಿಕೃತ ಆಟೋಗಳ ನಿಲ್ದಾಣ ಹಾಗೂ ಆರ್‌ಟಿಒ ಇಲಾಖೆಯಿಂದ ಪರವಾನಿಗೆ ಪಡೆದು ಕೊಳ್ಳುವ ಬಗ್ಗೆ ಚಾಲಕರಲ್ಲಿ ಅರಿವು ಮೂಡಿಸ ಬೇಕೆಂದು ನಿಯೋಗ ಜಿಲ್ಲಾಧಿಕಾರಿಗಳನ್ನು ಕೋರಿತು.

ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಒಂದು ಬಾರಿ ಆಟೋ ಪ್ರಯಾಣ ದರ ಪರಿಷ್ಕರಣೆಗೊಂಡಿದ್ದು, ಬಳಿಕ ಸುಮಾರು ವರ್ಷ ಗಳಿಂದ ಪ್ರಯಾಣ ದರ ಏರಿಕೆ ಅಥವಾ ಪರಿಷ್ಕರಣೆಗೊಂಡಿಲ್ಲ. ಸದ್ಯ, ಆಟೋ ಚಾಲ ಕರು ಸಂಕಷ್ಟದಲ್ಲಿದ್ದು, ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಳವಾಗಿದೆ. ಆದ್ದರಿಂದ ಜಿಲ್ಲಾಡಳಿತ ಕೂಡಲೇ ಆಟೋ ಪ್ರಯಾಣ ದರ ಹೆಚ್ಚಿಸಲು ಪರಿಷ್ಕರಣೆ ಮಾಡಬೇಕೆಂದು ಕೋರಿ ದರು. ಬಹಳಷ್ಟು ನಗರ ಪಟ್ಟಣಗಳಲ್ಲಿ ಅಧಿ ಕೃತ ಆಟೋಗಳಿಗೆ ನಿಲ್ದಾಣ ಇಲ್ಲದೇ ಸಮಸ್ಯೆ ಇದ್ದು, ಕೂಡಲೇ ಜಿಲ್ಲಾಡಳಿತ ಆಟೋ ನಿಲ್ದಾಣ ಗಳಿಗೆ ಜಾಗ ಗುರುತಿಸಿ ನಿಲ್ದಾಣ ಗಳನ್ನು ಆಯಾ ನಗರಸಭೆಗಳ ಮೂಲಕ ನಿರ್ಮಿಸಿ ಕೊಡಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಆಟೋ ಚಾಲಕರ ಸಂಘದ ಪದಾಧಿಕಾರಿಗಳಾದ ಶಬ್ಬೀರ್‌, ಎಸ್‌.ಗೋಪಿ, ಎನ್‌. ವೆಂಕಟೇಶ್‌, ಫ‌ಕ್ರು ದ್ಧೀನ್‌ ಸೇರಿದಂತೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next