ಬೆಂಗಳೂರು: ನಗರದ ಹಾಸ್‌ಮ್ಯಾಟ್ ಆಸ್ಪತ್ರೆ ಈ ವರ್ಷದ ಹಾಸ್ ಮ್ಯಾಟ್ ಪರೋಪಕಾರಿ ಪ್ರಶಸ್ತಿ ಪ್ರಕಟಿಸಿದ್ದು ಅಪಘಾತದಲ್ಲಿ ಗಾಯಗೊಂಡು ರಸ್ತೆ ಬದಿ ಬಿದ್ದಿದ್ದ ಗಾಯಾಳುವನ್ನು ಸಕಾಲಕ್ಕೆ ಆಸ್ಪತೆಗೆ ಸೇರಿಸಿ ಮಾನವೀಯತೆ ಮೆರೆದ ಬಿಎಂಟಿಸಿ ಬಸ್ ಚಾಲಕ ವೈ.ಎನ್.ಗಂಗಾಧರ್ ಮತ್ತು ನಿರ್ವಾಹಕ ಟಿ.ಶ್ರೀನಿವಾಸ್ ಉತ್ತಮ ಪರೋಪಕಾರಿ ಪ್ರಶಸ್ತಿಗೆ ಭಾಜನರಾದರು.
ನಗರದಲ್ಲಿ ಹಾಸ್‌ಮ್ಯಾಟ್ ಆಸ್ಪತ್ರೆ ವತಿಯಿಂದ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಹಾಗೂ ಆಥೋìಪೆಡಿಕ್ ವಿಭಾಗದ ಮುಖ್ಯಸ್ಥ ಡಾ. ಥಾಮಸ್ ಚ್ಯಾಂಡಿ, ಗಂಗಾಧರ್ ಮತ್ತು ಶ್ರೀನಿವಾಸ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಥಾಮಸ್ ಚ್ಯಾಂಡಿ, ರಸ್ತೆಗಳಲ್ಲಿ ನಿತ್ಯ ಒಂದಲ್ಲಾ ಒಂದು ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಅಂತಹ ಸಂದರ್ಭದಲ್ಲಿ ಗಾಯಾಳುಗಳಿಗೆ ತುರ್ತು ಚಿಕಿತ್ಸೆಯ ಅಗತ್ಯವಿರುತ್ತದೆ. ಆದರೆ ಅದರಿಂದ ನಮಗೆ ಸಮಸ್ಯೆ ಆಗುತ್ತದೆ ಎಂದು ಕಂಡರೂ ಕಾಣದಂತೆ ಹೋಗುವವರಿದ್ದಾರೆ.ಆದರೆ ಗಾಯಾಳುವನ್ನು ನೋಡುತ್ತಲೇ ಆತನನ್ನು ಆಸ್ಪತ್ರೆಗೆ ಸೇರಿಸಿ ತುರ್ತು ಚಿಕಿತ್ಸೆ ಕೊಡಿಸುವ ಮೂಲಕ ಜೀವ ಉಳಿಸುವ ಕಾರ್ಯ ಮಾಡಿದ ಈ ಇಬ್ಬರು ಮಾನವೀಯ ಗುಣಕ್ಕೆ ಸಾಕ್ಷಿಯಾಗಿದ್ದಾರೆ ಎಂದು ಶ್ಲಾ ಸಿದರು.
ಮಾನವೀಯ ಸೇವೆ: ಕಳೆದ ಡಿ. 28ರ ರಾತ್ರಿ 8 ಗಂಟೆ ಕೆಲಸ ಮುಗಿಸಿಕೊಂಡು ಹೋಗುವಾಗ ಯಲಹಂಕ – ನೆಲಮಂಗಲ ಮಾರ್ಗದಲ್ಲಿ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದ ಪೇದೆ ಸಿದ್ದರಾಜು ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ರಸ್ತೆ ಬದಿ ರಕ್ತದ ಮಡುವಿನಲ್ಲಿ ನೋವಿನಿಂದ ನರಳುತ್ತಿದ್ದ ಅವರನ್ನು ಜನರು ನೋಡಿಕೊಂಡು ಹೋಗುತ್ತಿದ್ದರು ಆದರೆ ಯಾರೂ ನೆರವಿಗೆ ಧಾವಿಸಲಿಲ್ಲ.
ಈ ಸಮಯದಲ್ಲಿ ರೂಟ್ ನಂ. 407 ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗಂಗಾಧರ್ ಮತ್ತು ಶ್ರೀನಿವಾಸ್ ಸಿದ್ದರಾಜು ಸ್ಥಿತಿ ನೋಡಿ, ಬಸ್‌ನಲ್ಲಿಯೇ ಸಿದ್ದರಾಜುರ ಅವರನ್ನು ಆಸ್ಪತ್ರೆಗೆ ಕರೆದು ಸಕಾಲಕ್ಕೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದರು.