ಹನೂರು: ಲೋಕೋಪಯೋಗಿ ಇಲಾಖಾ ವತಿಯಿಂದ ವಿವಿಧ ರಸ್ತೆಗಳಲ್ಲಿ ಸಂಚರಿಸುವ ವಾಹನಗಳ ಎರಡು ದಿನಗಳ ಸಮೀಕ್ಷೆಗೆ ಬುಧವಾರ ಚಾಲನೆ ನೀಡಲಾಯಿತು. ಬುಧವಾರ ಬೆಳಗ್ಗೆ 6 ಗಂಟೆಯಿಂದ ಸಮೀಕ್ಷೆ 23ರ ಶುಕ್ರವಾರ ಬೆಳಗ್ಗೆ 6 ಗಂಟೆ ಯವರೆಗೆ ಜರುಗಲಿದೆ. ಪಟ್ಟಣದ 5 ಕಡೆ ಸಮೀಕ್ಷಾ ಕೇಂದ್ರವನ್ನು ತೆರೆಯಲಾಗಿದೆ.
ಪಟ್ಟಣದ ಸೆಸ್ಕ್ ಕಚೇರಿ ಮುಂಭಾಗ ಹನೂರು – ಮಲೆ ಮಹದೇಶ್ವರ ಬೆಟ್ಟ ಮಾರ್ಗದ ವಾಹನಗಳ ಸಮೀಕ್ಷೆ ಮಾಡಲಾಗುತ್ತಿದೆ. ಜಿ.ವಿ.ಗೌಡ ಕಾಲೇಜು ಸಮೀಪದ ತೆರೆದಿರುವ ಸಮೀಕ್ಷಾ ಕೇಂದ್ರದಲ್ಲಿ ಚಿಂಚಳ್ಳಿ – ಅಲಗು
ಮೂಲೆ ಮಾರ್ಗದ ವಾಹನಗಳು ಮತ್ತು ಬಂಡಳ್ಳಿ ಮಾರ್ಗವಾಗಿ ಸಂಚರಿಸುವ ವಾಹನಗಳ ಸಮೀಕ್ಷೆ ನಡೆಯುತ್ತಿದೆ.
ಇನ್ನುಳಿದಂತೆ ಲೊಕ್ಕನಹಳ್ಳಿ ಮಾರ್ಗದಲ್ಲಿ ತೆರೆದಿರುವ ಕೇಂದ್ರದಲ್ಲಿ ಹನೂರು – ಲೊಕ್ಕನಹಳ್ಳಿ ಮತ್ತು ಉದ್ದನೂರು ರಸ್ತೆಯಲ್ಲಿ ತೆರೆದಿರುವ ಕೇಂದ್ರದಲ್ಲಿ ಹನೂರು- ಉದ್ದ ನೂರು ಮಾರ್ಗವಾಗಿ ಸಂಚರಿಸುವ ವಾಹನಗಳ ಗಣತಿ ಕಾರ್ಯ ನಡೆಯುತ್ತಿದೆ. ಈ ಸಂಬಂಧ ಪತ್ರಿಕೆಯೊಂದಿಗೆ ಮಾತನಾ ಡಿದ ಪಿಡಬ್ಲೂಡಿ ಅಭಿಯಂತರ ರಮೇಶ್ ಕುಮಾರ್, ರಸ್ತೆಗಳ ಉನ್ನತೀಕರಣ, ವಿಸ್ತರಣೆ ದೃಷ್ಟಿಯಿಂದ ಈ ಸಮೀಕ್ಷೆ ಅತ್ಯವಶ್ಯಕವಾಗಿದೆ.
ಈ ಸಮೀಕ್ಷೆಯ ಆಧಾರದ ಮೇಲೆಯೇ ಯಾವುದೇ ಒಂದು ರಸ್ತೆಯನ್ನು ಅಗಲೀಕರಣ ಗೊಳಿಸುವುದು, ಉನ್ನತೀಕರಣಗೊಳಿಸುವ ಕಾರ್ಯಗಳು ನಡೆಯಲಿದೆ ಎಂದು ಹೇಳಿದರು. ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಗಳ ಸಂಖ್ಯೆ, ಕಾರು, ಬಸ್, ಭಾರೀ ವಾಹನಗಳ ಸಂಖ್ಯೆ ಪ್ರತ್ಯೇಕವಾಗಿ ಸಮೀಕ್ಷೆ ನಡೆಸು ವುದರಿಂದ ರಸ್ತೆಯ ಸಾಂದ್ರತೆ ತಿಳಿಯಲಿದೆ.