Advertisement
ಜಿಲ್ಲಾಧಿಕಾರಿ ಕಚೇರಿ ಮೊದಲ ಮಹಡಿಯಲ್ಲಿ ಪ್ರಾರಂಭವಾದ ನೂತನ ಕಚೇರಿಯನ್ನು ಅವರು ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಖಜಾನೆ ರಾಜ್ಯದಲ್ಲಿಯೇ ಮಾದರಿಯಾಗಿದೆ. ಇದೀಗ ಜಿಲ್ಲಾಧಿಕಾರಿ ಕಚೇರಿಯಲ್ಲೇ ತರಬೇತಿ ಕೇಂದ್ರ ಆರಂಭವಾಗಿರುವ ಕಾರಣ ಖಜಾನೆ-2ರಲ್ಲಿ ವ್ಯವಹರಿಸುವವರಿಗೆ ಅನುಕೂಲವಾಗಲಿದೆ. ರಾಜ್ಯದಲ್ಲಿಯೇ ಪ್ರಥಮವಾಗಿ ಸೌಕರ್ಯ ಮತ್ತು ತರಬೇತಿ ಕೇಂದ್ರ ಕಾರವಾರದಲ್ಲಿ ಆರಂಭವಾದಂತಾಗಿದೆ ಎಂದರು.
ಉಪನಿರ್ದೇಶಕ ಸುನೀಲ್ ವಿಶ್ವನಾಥ್ ಮೂಗಿ ಹೇಳಿದರು. ಖಜಾನೆ-2ರಲ್ಲಿ ಹಣಕಾಸಿನ ವ್ಯವಹಾರಗಳನ್ನು ಮಾಡುವ ಇಲಾಖೆಗಳಲ್ಲಿ ಕಂಪ್ಯೂಟರ್ ಸಮಸ್ಯೆ, ಮುದ್ರಣ ಯಂತ್ರದ ಸಮಸ್ಯೆ ಅಥವಾ ಜ್ಞಾನದ ಸಮಸ್ಯೆಯಿಂದ ಒಂದಿಲ್ಲೊಂದು ಸಮಸ್ಯೆಯಿಂದ ವಿಳಂಬಕ್ಕೆ ಕಾರಣವಾಗುತ್ತಿತ್ತು. ದಾಖಲೆಗಳು ಸರಿಯಿದ್ದರೂ ಮಾಡುವ ವಿಧಾನದಲ್ಲಿ ತಪ್ಪಾಗಿ ಖಜಾನೆಯಿಂದ ಆಕ್ಷೇಪಣೆಗೆ ಕಾರಣವಾಗುತ್ತಿತ್ತು. ಆ ಕಾರಣದಿಂದಲೇ ಈ ಸೌಲಭ್ಯ ಮತ್ತು ತರಬೇತಿ ಕೇಂದ್ರ ಸ್ಥಾಪಿಸಲಾಗಿದ್ದು ಇಲ್ಲಿ ಕಂಪ್ಯೂಟರ್‌ಗಳು, ಮುದ್ರಣ ಯಂತ್ರಗಳು ಹಾಗೂ ಮೂರು ಮಂದಿ ಕಂಪ್ಯೂಟರ್ ಎಂಜಿನಿಯರ್‌ಗಳನ್ನು ನಿಯೋಜಿಸಲಾಗಿದೆ. ಸಮಸ್ಯೆಯಿರುವ ಇಲಾಖೆ ಅಧಿಕಾರಿಗಳು ಈ ಕೇಂದ್ರದ ಉಪಯೋಗವನ್ನು ಸಂಪೂರ್ಣ ಉಚಿತವಾಗಿ ಪಡೆಯಬಹುದಾಗಿದೆ. ಅಲ್ಲದೆ ಸರ್ಕಾರದ ಇಲಾಖೆಗೆ ಸಾರ್ವಜನಿಕರು ಖಜಾನೆ-2ರಲ್ಲಿ ಡಿಡಿ ಚಲನ್ ತೆಗೆಯಲೂ ಈ ಕೇಂದ್ರವನ್ನು ಪಯೋಗಿಸಿಕೊಳ್ಳಬಹುದಾಗಿದೆ ಎಂದು ಸುನೀಲ್ ಮೂಗಿ ಹೇಳಿದರು. ಜಿಪಂ ಸಿಇಒ ಎಂ.ರೋಷನ್, ಎಸ್ಪಿ ವಿನಾಯಕ್ ಪಾಟೀಲ್ ಉಪಸ್ಥಿತರಿದ್ದರು.