Advertisement
ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಕ್ರಿಯಾ ಯೋಜನೆ ಜಾರಿಗೊಳ್ಳಲಿದೆ. ಸಿವಿಲ್ ಸರ್ವಿಸ್‌ನಲ್ಲಿ ನೇಮಕಾತಿ ಪಡೆಯಲು ಹಂಬಲಿಸುತ್ತಿರುವ ಉದ್ಯೋಗಾರ್ಥಿಗಳಿಂದ ಈ ಸಂಬಂಧ ಅರ್ಜಿ ಕೋರಿ, ಅಭಿರುಚಿ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಇಂಟರ್ನ್ಸ್ಗಳನ್ನು ಆಯ್ಕೆ ಮಾಡಲಾಗಿದೆ. ಅತ್ಯುತ್ತಮ ಅಕಾಡೆಮಿಕ್ ಅರ್ಹತೆಯುಳ್ಳ ಅವರ ಮೂಲಕ ಯೋಜನೆಗಳನ್ನು ಅನುಷ್ಠಾನಗೊಳಿಸುವ, ಜಿಲ್ಲೆಗೆ ಮತ್ತು ಜಿಲ್ಲಾಡಳಿತಕ್ಕೆೆ ಪ್ರಯೋಜನಕಾರಿ ಬಳಕೆ ಈ ಮೂಲಕ ಸಾಧ್ಯವಾಗಿಸುವುದು ಇಲ್ಲಿನ ಗುರಿ.
Related Articles
Advertisement
ಬೇಕಲ ಪ್ರವಾಸೋದ್ಯಮ ಯೋಜನೆಯಲ್ಲಿ ಮೂಲಸೌಲಭ್ಯಗಳ ಅಭಿವೃದ್ಧಿ, ವಸತಿ ಸೌಲಭ್ಯ ವಿಸ್ತಾರಗೊಳಿಸುವಿಕೆ, ನೂತನ ಪ್ರವಾಸೋದ್ಯಮ ವಲಯಗಳ ಶೋಧನೆ ಇತ್ಯಾದಿ ಹೊಣೆಯನ್ನು ಕೆ. ಮನೀಷಾ ಅವರಿಗೆ ಒದಗಿಸಲಾಗಿದೆ.
ಮಂಜೇಶ್ವರ ತಾಲೂಕಿನಲ್ಲಿ 15 ಸಾವಿರ ಬಿದಿರು ಸಸಿ ನೆಡುವ, ನೀರು ಸಂರಕ್ಷಣೆ ಯೋಜನೆಗಳು, ಮಣ್ಣು ಸಂರಕ್ಷಣೆ ಯೋಜನೆಗಳು, ಬಿದಿರು ಕೇಂದ್ರಿತ ಉದ್ಯಮ ಸ್ಥಾಪನೆ ಇತ್ಯಾದಿಗಳ ಹೊಣೆ ಕೆ. ಭಾಗ್ಯಾ ಅವರಿಗೆ ನೀಡಲಾಗಿದೆ.
ಪೆರಿಯ ಏರ್‌ಸ್ಟ್ರಿಪ್ ಯೋಜನೆಯ ಹೊಣೆ ಪಿ. ಅರ್ಜುನನ್ ಅವರಿಗೆ, ಜಿಲ್ಲೆಯ ಕ್ರೀಡಾ ವಲಯದ ಅಭಿವೃದ್ಧಿಗೆ ಅವಕಾಶ ಸೃಷ್ಟಿಯ ಹೊಣೆ ಆತಿಷ್ ಎಂ. ನಾಯರ್ ಅವರಿಗೆ ನೀಡಲಾಗಿದೆ.
ರಾಜ್ಯದ ಕ್ರೀಡಾ ವಲಯದ ಅಭಿವೃದ್ಧಿ ಪಟ್ಟಿಯಲ್ಲಿ 13ನೇ ಸ್ಥಾನದಲ್ಲಿರುವ ಜಿಲ್ಲೆಯನ್ನು ಸೂಕ್ತ ತರಬೇತಿ ಒದಗಿಸಿ ಪ್ರಥಮ ಸ್ಥಾನದಲ್ಲಿ ನಿಲ್ಲುವಂತೆ ಮಾಡುವ, ಪರಿಶಿಷ್ಟ ಜಾತಿ-ಪಂಗಡದ ವಿದ್ಯಾರ್ಥಿಗಳನ್ನು ಕ್ರೀಡಾ ವಲಯದಲ್ಲಿ ಹೆಚ್ಚುವರಿ ತೊಡಗಿಸಿಕೊಂಡು ಗುಣಮಟ್ಟ ಹೆಚ್ಚಿಸುವ ಯೋಜನೆ ಈ ಮೂಲಕ ಜಾರಿಗೆ ಬರಲಿದೆ.
ಯೋಜನೆಗೆ ನಿಯೋಜನೆಆಯ್ಕೆಗೊಂಡಿರುವ ಇಂಟರ್ನ್ಸ್ ಗಳಿಗೆ ವಿವಿಧ ಯೋಜನೆಗಳ ಉಸ್ತುವಾರಿ ಹೊಣೆ ವಹಿಸಲಾಗಿದೆ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದ ಪಿ. ಅರ್ಜುನನ್, ಬಿ. ಅಮೃತಾ , ಬಿ.ಎ. ಮನಶಾÏಸ್ತ್ರ ಪದವೀಧರ ಆತಿಷ್ ಎಂ. ನಾಯರ್, ಜಿಯೋ ಟೆಕ್ನಿಕಲ್ ಎಂಜಿನಿಯರಿಂಗ್ ಪದವೀಧರೆ ಕೆ. ಭಾಗ್ಯಾ, ಎಂ.ಎಸ್.ಸಿ. ಸ್ಟಾಟಿಸ್ಟಿಕ್ಸ್ ಪದವೀಧರೆ ಕೆ.ಎಂ. ಮನಿಷಾ, ಎಂ.ಬಿ.ಎ. ಪದವೀಧರೆ ಪಿ. ಶ್ರೀಖಾ ಜಿಲ್ಲಾಧಿಕಾರಿಗಳ ಇಂಟರ್ನ್ಸ್ ಯೋಜನೆಯಲ್ಲಿದ್ದಾರೆ.