ಬಂಟ್ವಾಳ : ಜಾನುವಾರುಗಳ ಕಾಲು ಬಾಯಿ ಜ್ವರ ಉಚಿತ ಲಸಿಕೆ ಕಾರ್ಯ ಕ್ರಮಕ್ಕೆ ಜೂ. 1ರಂದು ಪಶು ಸಂಗೋಪನ ಇಲಾಖೆ ಸಹಾಯಕ ನಿರ್ದೇಶಕ ಡಾ| ಹೆನ್ರಿ ಜೂ. 1ರಂದು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ತಾಲೂಕಿನಾದ್ಯಂತ ಉಚಿತ ಚಿಕಿತ್ಸೆ ನೀಡಲು ಒಟ್ಟು 5 ತಂಡ ರಚಿಸಲಾಗಿದೆ. ಮಾಣಿಯಲ್ಲಿ ಡಾ| ಪ್ರಸನ್ನ ಕುಮಾರ್, ಕಲ್ಲಡ್ಕದಲ್ಲಿ ಡಾ| ಹರೀಶ್, ವಗ್ಗದಲ್ಲಿ ಡಾ| ಅವಿನಾಶ್ ಭಟ್, ಬಂಟ್ವಾಳದ ಕೇಂದ್ರ ಬೆಂಜನಪದವಿನಲ್ಲಿ ಡಾ| ರವಿ ಕುಮಾರ್ ನೇತೃತ್ವದಲ್ಲಿ ಕಾರ್ಯಕ್ರಮ ಆರಂಭಿಸಿದೆ ಎಂದರು. ಪ್ರತೀ ತಂಡದಲ್ಲಿ ಹತ್ತು ಮಂದಿಯಂತೆ ಸಿಬಂದಿಯಿದ್ದು, ಪ್ರತೀ ಒಬ್ಬರಿಗೆ ಕನಿಷ್ಠ ಹತ್ತು ಜಾನುವಾರುಗಳಂತೆ ಗುರಿ ನೀಡಲಾಗಿದೆ ಎಂದರು.
ಸ್ಥಳೀಯ ಪಶುವೈದ್ಯಾಧಿಕಾರಿಗಳು ಹಾಗೂ ಪಶುಸಂಗೋಪನ ಇಲಾಖೆಯ ಇತರ ಸಿಬಂದಿ ಮತ್ತು ಕೆ.ಎಂ.ಎಫ್. ದ.ಕ. ಇದರ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಟ್ಟು 52 ಸಿಬಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಜೂ. 23ರಂದು ಈ ಸುತ್ತಿನ ಕಾರ್ಯ ಕ್ರಮವು ಅಂತ್ಯಗೊಳ್ಳುತ್ತದೆ. ಕಳೆದ ಹತ್ತು ವರ್ಷಗಳಿಂದ ಜಾನುವಾರುಗಳ ಕಾಲುಬಾಯಿ ಜ್ವರ ಲಸಿಕೆ ಕಾರ್ಯಕ್ರಮ ನಡೆಯು ತ್ತಿದ್ದು ಇಂದಿನಿಂದ ಆರಂಭವಾಗಿರುವ ಕಾರ್ಯಕ್ರಮವು 14ನೇ ಸುತ್ತಿನ ಕಾರ್ಯಕ್ರಮ ಈ ಕಾರ್ಯಕ್ರಮಕ್ಕೆ ಕೆ.ಎಂ. ಎಫ್. ದ.ಕ. ವತಿಯಿಂದ 5 ವಾಹನಗಳನ್ನು ಒದಗಿಸಲಾಗಿದ್ದು, ಭಾಗವಹಿಸುವ ಎಲ್ಲ ಸಿಬಂದಿಗೂ ಸರಕಾರದ ವತಿಯಿಂದ ಪ್ರೋತ್ಸಾಹಧನವನ್ನು ಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಬಳಿಕ ಕಾಲುಬಾಯಿ ಜ್ವರದ ಕುರಿತು ಸಮಗ್ರ ಮಾಹಿತಿ ನೀಡುವ ಕಾರ್ಯಕ್ರಮ ನಡೆಯಿತು.
ಸಂಪೂರ್ಣ ನಿಯಂತ್ರಣ ಗುರಿ
ತಾಲೂಕಿನ ಅಂದಾಜು 42 ಸಾವಿರ ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿದೆ. ಈ ಕಾರ್ಯಕ್ರಮವು ಪ್ರತೀ 6 ತಿಂಗಳಿಗೊಮ್ಮೆ ನಡೆಯುತ್ತಿದ್ದು, ಜಾನುವಾರುಗಳಲ್ಲಿ ಕಾಲು ಬಾಯಿ ಜ್ವರ ರೋಗವನ್ನು ಸಂಪೂರ್ಣವಾಗಿ ನಿಯಂತ್ರಿಸುವ ಗುರಿಯನ್ನು ಹೊಂದಲಾಗಿದೆ.
-
ಡಾ| ಹೆನ್ರಿ ,ಪಶು ಸಂಗೋಪನ
ಇಲಾಖೆ ಸಹಾಯಕ ನಿರ್ದೇಶಕರು