Advertisement

ಮರಗಳ ಸ್ಥಳಾಂತರ ಕಾರ್ಯಕ್ಕೆ ಚಾಲನೆ

08:43 PM Jul 13, 2021 | Team Udayavani |

ಗಜೇಂದ್ರಗಡ: ರಸ್ತೆ ಅಗಲೀಕರಣಕ್ಕಾಗಿ ಮರಗಳನ್ನು ನಾಶಮಾಡುವ ಬದಲು ಬುಡಸಮೇತ ಮರ ಸ್ಥಳಾಂತರಿಸುವ ಕಾರ್ಯಕ್ಕೆ ಅರಣ್ಯ ಇಲಾಖೆ ಸೋಮವಾರ ಚಾಲನೆ ನೀಡಿದೆ.

Advertisement

ರಾಮಾಪುರ ಗ್ರಾಮಕ್ಕೆ ತೆರಳುವ ರಸ್ತೆ ಮಧ್ಯದಲ್ಲಿನ 52 ಬೃಹತ್‌ ಅರಳಿ, ಆಲ ಮತ್ತು ಹತ್ತಿ ಮರಗಳು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂದರ್ಭದಲ್ಲಿ ಕತ್ತರಿಸಲಾಗುತ್ತಿತ್ತು. ಅದನ್ನು ತಪ್ಪಿಸುವ ಉದ್ದೇಶದಿಂದ ಅರಣ್ಯ ಇಲಾಖೆ ಮರಗಳ ಸ್ಥಳಾಂತರಕ್ಕೆ ಮುಂದಾಗಿದ್ದು, ಈಗಾಗಲೇ ಮರಗಳ ಸ್ಥಳಾಂತರ ಕಾರ್ಯ ಪ್ರಾರಂಭಿಸಲಾಗಿದೆ.

ಜಿಲ್ಲಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಿಮಳಾ ಎಚ್‌. ಸುದ್ದಿಗಾರರೊಂದಿಗೆ ಮಾತನಾಡಿ, ಗಜೇಂದ್ರಗಡದಲ್ಲಿ ಪ್ರಾರಂಭವಾಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಸಮೃದ್ಧವಾಗಿ ಬೆಳೆದಿರುವ ಮರಗಳು ನಾಶವಾಗುತ್ತಿದ್ದವು. ಶಾಸಕರು ಮತ್ತು ಸ್ಥಳೀಯ ಆಡಳಿತ ಸಹಕಾರದಿಂದ ಪಟ್ಟಣದ ಗುಡ್ಡದ ಕೆಳಭಾಗದಲ್ಲಿನ ಕೆರೆಯಲ್ಲಿ ಮರ ಸ್ಥಳಾಂತರಿಸಲು ಅವಕಾಶ ದೊರೆತಿದೆ. ಹೀಗಾಗಿ 48 ಮರಗಳ ಸ್ಥಳಾಂತರ ಕಾರ್ಯಾಚರಣೆ ಆರಂಭವಾಗಿದೆ.

ಮರಗಳ ಸ್ಥಳಾಂತರಕ್ಕೆ ಕ್ರೇನ್‌, ಹಿಟ್ಯಾಚಿ, ಜೆಸಿಬಿ ಮತ್ತು ಲಾರಿಗಳ ಬಳಕೆ ಮಾಡಲಾಗುತ್ತಿದೆ. ಈಗಾಗಲೇ ಕೆರೆಯಲ್ಲಿ ಮರಗಳ ಸ್ಥಳಾಂತರಕ್ಕೆ ಗುಂಡಿ ತೋಡಲಾಗಿದ್ದು, ಮರಗಳ ಬೇರುಗಳಿಗೆ ತೊಂದರೆಯಾದಂತೆ ಕೊಂಡೊಯ್ಯಲಾಗುತ್ತಿದೆ ಎಂದರು. ಸ್ಥಳಕ್ಕೆ ಶಾಸಕರ ಭೇಟಿ: ಪಟ್ಟಣದ ಗುಡ್ಡದ ಕೆಳಭಾಗದಲ್ಲಿರುವ ಮರಗಳ ಸ್ಥಳಾಂತರ ಪ್ರದೇಶಕ್ಕೆ ಶಾಸಕ ಕಳಕಪ್ಪ ಬಂಡಿ ಭೇಟಿ ನೀಡಿ, ಪರಿಶೀಲಿಸಿ, ಮರಗಳ ಪುನರ್‌ ಸ್ಥಾಪನೆಗೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದರು.

ಈ ವೇಳೆ ವಲಯ ಅರಣ್ಯಾ ಧಿಕಾರಿ ರಾಜು ಗೋಂಧಕರ, ಅರಣ್ಯಾಧಿ ಕಾರಿ ಅನ್ವರ್‌ ಕೊಲ್ಹಾರ, ತಾಪಂ ಇಒ ಸಂತೋಷ ಪಾಟೀಲ, ಪುರಸಭೆ ಅಧ್ಯಕ್ಷ ವೀರಣ್ಣ ಪಟ್ಟಣಶೆಟ್ಟಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next