Advertisement

ನೆರೆ ಸಂತ್ರಸ್ತರ ಮನೆ ನಿರ್ಮಿಸುವ ಮೂಲಕ ಕಿತ್ತೂರು ಉತ್ಸವಕ್ಕೆ ಚಾಲನೆ

11:36 AM Oct 24, 2019 | sudhir |

ಬೆಳಗಾವಿ: ಪ್ರವಾಹ ಸಂಕಷ್ಟದಿಂದ ಇಡೀ ಉತ್ತರ ಕರ್ನಾಟಕವೇ ನಲುಗಿರುವ ಈ ಸಂದರ್ಭದಲ್ಲಿ ಸಂತ್ರಸ್ತರಿಗೆ ಅಭಯ ನೀಡುವ ನಿಟ್ಟಿನಲ್ಲಿ ಕಿತ್ತೂರು ಉತ್ಸವದ ಮುಖ್ಯ ವೇದಿಕೆಯಲ್ಲಿ ಸಾಂಕೇತಿಕವಾಗಿ ಮನೆ ನಿರ್ಮಾಣ ಮಾಡುವ ಮೂಲಕ ಉದ್ಘಾಟಿಸಿದ್ದು ವಿಶೇಷವಾಗಿತ್ತು.

Advertisement

ಐತಿಹಾಸಿಕ ಕಿತ್ತೂರು ಉತ್ಸವಕ್ಕೆ ಡಿಸಿಎಂ ಲಕ್ಷ್ಮಣ ಸವದಿ ಅವರು ವಿಭಿನ್ನವಾಗಿ ಚಾಲನೆ‌ ನೀಡಿದರು.‌ ಮನೆ ಕಳೆದುಕೊಂಡು ನಿರಾಶ್ರಿತರರಾಗಿರುವ ಸಂತ್ರಸ್ತರು ಧೃತಿಗೆಡಬಾರದು, ರಾಜ್ಯ ಸರ್ಕಾರ ತಮ್ಮ ಬೆನ್ನಿಗೆ ನಿಂತು ಕೆಲಸ ಮಾಡಲಿದೆ ಎಂದು ಉತ್ಸವದ ಮೂಲಕ ಭರವಸೆ ನೀಡಿದರು. ವೇದಿಕೆ ಮೇಲೆಯೇ ರಟ್ಟಿನ ಕಾಗದದ ಈ ಮನೆ ನಿರ್ಮಿಸಿ ಸರ್ಕಾರ ಸಂತ್ರಸ್ತರ ಬೆನ್ನಿಗೆ ಇದೆ ಎಂದು ತೋರಿಸಿ ಕೊಟ್ಟರು.

ಸಚಿವರಾದ ಜಗದೀಶ ಶೆಟ್ಟರ, ಸಿ.ಟಿ. ರವಿ, ಶಶಿಕಲಾ ಜೊಲ್ಲೆ ಭಾಗವಹಿಸಿದ್ದರು.‌ ಜತೆಗೆ ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಬಿಜೆಪಿಯ ಸಂಸದರಾದ ಅನಂತಕುಮಾರ ಹೆಗಡೆ, ಅಣ್ಣಾಸಾಹೇಬ ಜೊಲ್ಲೆ, ಶಾಸಕರಾದ ಮಹಾಂತೇಶ ದೊಡಗೌಡರ, ಮಹಾಂತೇಶ ಕೌಜಲಗಿ, ಮಹಾದೇವಪ್ಪ ಯಾದವಾಡ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next