Advertisement
ಬೆಂಗಳೂರು ಕೃಷಿ ವಿದ್ಯಾಲಯ, ಗಾಂಧಿ ಕೃಷಿ ವಿಜ್ಞಾನ ಕೇಂದ್ರಗಳ (ಜಿಕೆವಿಕೆ) ಆಯೋಜಿಸಿರುವ ಕೃಷಿ ಮೇಳಕ್ಕೆ ಬೆಳಗ್ಗೆ 11 ಗಂಟೆಗೆ ರಾಜ್ಯಪಾಲ ವಜುಭಾಯಿ ವಾಲಾ ಚಾಲನೆ ನೀಡಲಿದ್ದು, ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೈತರಿಗೆ ಮಧ್ಯಾಹ್ನ 2.30ಕ್ಕೆ ವಿವಿಧ ಪ್ರಶಸ್ತಿ ಪ್ರದಾನ ನಡೆಯಲಿದೆ.ಸಚಿವರಾದ ಎನ್.ಎಚ್.ಶಿವಶಂಕರ ರೆಡ್ಡಿ, ಕೃಷ್ಣಬೈರೇಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್,
ಅಧಿಕಾರಿಗಳಾದ ಎಂ.ಮಹೇಶ್ವರ್ ರಾವ್, ಐಎಸ್ ಎನ್ ಪ್ರಸಾದ್, ಡಾ.ವಂದಿತಾ ಶರ್ಮ, ಡಾ.ಕೆ.ಜಿ.ಜಗದೀಶ್, ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯ ಕುಲಪತಿ ಡಾ.ಎಸ್.ರಾಜೇಂದ್ರ ಪ್ರಸಾದ್ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ.
Related Articles
Advertisement
ವಿಶೇಷ ಬಸ್ ವ್ಯವಸ್ಥೆ ಬಸ್‌ಗಳಲ್ಲಿ ಜಿಕೆವಿಕೆಗೆ ಬರುವವರ ಅನುಕೂಲಕ್ಕಾಗಿ ಬೆಂಗಳೂರು ಕೃಷಿ ವಿದ್ಯಾಲಯದ ಬಸ್‌ಗಳನ್ನು ನಿಯೋಜಿಸಲಾಗಿದೆ. ಜಿಕೆವಿಕೆ ಗೇಟ್‌ನಿಂದ ಮೇಳದ ಜಾಗದವರೆಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಿರುವುದರಿಂದ ಸುಲಭವಾಗಿ ಜನರು ಮೇಳದ ಜಾಗಕ್ಕೆ ತಲುಪಬಹುದಾಗಿದೆ. ಅದೇ ರೀತಿ ಮೇಳದ ಜಾಗದಿಂದಲೂ ಗೇಟಿಗೆ ಬರಲು ಬಸ್ ವ್ಯವಸ್ಥೆಯಿದೆ. ಇದರೊಂದಿಗೆ ಮೇಳದ ಕುರಿತು ಮಾಹಿತಿ ಹಾಗೂ ಮಾರ್ಗದರ್ಶನ ನೀಡಲು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಕೃಷಿ ಮೇಳಕ್ಕೆಯಾವ ಬಸ್?ಮೆಜೆಸ್ಟಿಕ್‌ನಿಂದ ಹೊರಡುವ ಬಿಎಂಟಿಸಿ ಬಸ್‌ಗಳ ಸಂಖ್ಯೆ: 277, 280, 281, 282, 283, 284, 284ಎ, ಬಿ, ಸಿ ಮತ್ತು ಡಿ, 285, 286ಎ, 289, 289ಎ, 402, 298ಎಂ, 299 ಹಾಗೂ ಸುವರ್ಣ ಸಾರಿಗೆ ಮೂಲಕ ರೈತರು ಮೇಳದ ಸ್ಥಳ ತಲುಪಬಹುದು. ಕೃಷಿ ಆಧುನಿಕ ಖುಷಿ ಜೀವನ ಸಾವಯವ ಕೃಷಿ, ಮನೆಯಲ್ಲಿ ಬೆಳೆಯುವಂತಹ ತರಕಾರಿಗಳು ಸೇರಿದಂತೆ ಒಟ್ಟು 750
ಮಳಿಗೆಗಳು ತಲೆಯೆತ್ತಲಿವೆ. ಪ್ರಸಕ್ತ ಸಾಲಿನ ಕೃಷಿ ಮೇಳಕ್ಕೆ 12 ಲಕ್ಷ ಜನರು ಬರುವ ನಿರೀಕ್ಷೆಯನ್ನು ಹೊಂದಲಾಗಿದೆ. ಅದರಂತೆ ರೈತರು, ಸಾರ್ವಜನಿಕರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೂ ಉಚಿತ ಪ್ರವೇಶವಿದೆ. ಜತೆಗೆ ಮೇಳಕ್ಕೆ ದೂರದ ಊರುಗಳಿಂದ ಬರುವವರಿಗೆ ಮಾಹಿತಿ ನೀಡುವ ಉದ್ದೇಶದಿಂದ ವಿಶೇಷವಾದ ಆ್ಯಪ್ ಅಭಿವೃದ್ಧಿಪಡಿಸಲಾಗಿದ್ದು, ಕೃಷಿ ಮೇಳಕ್ಕೆ ಹೇಗೆ ಬರಬೇಕು, ಪ್ರದರ್ಶನದಲ್ಲಿನ ಈ ಬಾರಿಯ ವಿಶೇಷತೆಗಳು, ಕಾರ್ಯಕ್ರಮ ಹಾಗೂ ಸಂವಾದ ವಿವರಗಳು ಸೇರಿದಂತೆ ಸಮಗ್ರ ಮಾಹಿತಿ “ಕೃಷಿ ಮೇಳ -2018′ ಆ್ಯಪ್‌ನಲ್ಲಿ ದೊರೆಯಲಿವೆ. ಕೃಷಿ ಪ್ರದರ್ಶನದಲ್ಲಿ 750 ಮಳಿಗೆಗಳಿದ್ದು, ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು, ಭಾರತೀಯ ಕೃಷಿ ಅನುಸಂಧಾನ ಪರಿಷತ್ ಅಂಗ ಸಂಸ್ಥೆಗಳು, ರಾಜ್ಯ ಸರ್ಕಾರದ ಕೃಷಿ, ಜಲಾನಯನ ಅಭಿವೃದ್ಧಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶುಸಂಗೋಪನೆ, ಮೀನುಗಾರಿಕೆ, ಕೃಷಿ ಮಾರುಕಟ್ಟೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಾಲು ಮಹಾಮಂಡಳಿ, ಕೃಷಿ ಪರಿಕರ ಸಂಸ್ಥೆ, ಸ್ವಯಂ ಸೇವಾ ಸಂಸ್ಥೆಗಳು, ಸ್ವ-ಸಹಾಯ ಸಂಸ್ಥೆಗಳು ಭಾಗವಹಿಸಿ ಮಳಿಗೆ ಹಾಕಲಿವೆ. ಕೃಷಿ ಮೇಳಕ್ಕೆಯಾವ ಬಸ್?
ಮೆಜೆಸ್ಟಿಕ್ ನಿಂದ ಹೊರಡುವ ಬಿಎಂಟಿಸಿ ಬಸ್‌ಗಳ ಸಂಖ್ಯೆ: 277, 280, 281, 282, 283, 284, 284ಎ, ಬಿ, ಸಿ ಮತ್ತು ಡಿ, 285, 286ಎ, 289, 289ಎ, 402, 298ಎಂ, 299 ಹಾಗೂ ಸುವರ್ಣ ಸಾರಿಗೆ ಮೂಲಕ ರೈತರು ಮೇಳದ ಸ್ಥಳ ತಲುಪಬಹುದು.