Advertisement

ನ್ಯಾಯಬೆಲೆ ಅಂಗಡಿಗೆ ಚಾಲನೆ

12:59 PM Oct 25, 2017 | Team Udayavani |

ಕೆಂಗೇರಿ: ಹೇರೋಹಳ್ಳಿ ವಾರ್ಡ್‌ ಭಾಗದ ನಾಗರಿಕರ ಮನವಿ ಮೇರೆಗೆ ಸರ್ಕಾರಿ ನ್ಯಾಯಬೆಲೆ ಅಂಗಡಿ ಪ್ರಾರಂಭಿಸಿರುವುದಾಗಿ ಶಾಸಕ ಎಸ್‌.ಟಿ.ಸೋಮಶೇಖರ್‌ ತಿಳಿಸಿದರು.

Advertisement

ನಾಗರಿಕರಿಗೆ ಪಡಿತರ ವಿತರಿಸುವ ಮೂಲಕ ಬಿಳೇಕಲ್‌ನಲ್ಲಿ ಸರ್ಕಾರಿ ನ್ಯಾಯಬೆಲೆ ಅಂಗಡಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರ ಅನ್ನಭಾಗ್ಯ ಸೇರಿ ಹಲವು ಪಿಂಚಣಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಎಲ್ಲ ಸೌಲಭ್ಯಗಳ ಸದುಪಯೋಗ ಪಡೆಯಬೇಕು ಎಂದರು. 

ಹೇರೋಹಳ್ಳಿ ವಾರ್ಡ್‌ನ ಪಾಲಿಕೆ ಸದಸ್ಯ ರಾಜಣ್ಣ, ಯಶವಂತಪುರ ವಿಧಾನಸಭಾ ಕ್ಷೇತ್ರ ಬಸವ ಬಳಗದ ಅಧ್ಯಕ್ಷ ಓಂಕಾರ್‌ ಮೂರ್ತಿ, ಜಿಲ್ಲಾ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸದಸ್ಯ ಪ್ರಕಾಶ್‌, ಮುಖಂಡರಾದ ಅಂಜನ್‌ ಕುಮಾರ್‌, ಸಿದ್ದು, ಬಾಬು, ಮಾದೇಶ, ನಾಗರಾಜ್‌, ನಿಖೀಲ್‌ ಮತ್ತಿತರರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next