Advertisement

ಅಮೀನಗಡ ಗ್ರಾಮದೇವತೆ ಜಾತ್ರೆಗೆ ಚಾಲನೆ

04:27 PM May 11, 2022 | Team Udayavani |

ಅಮೀನಗಡ: ಪಟ್ಟಣದಲ್ಲಿ ಐದು ವರ್ಷಕೊಮ್ಮೆ ಜರುಗುವ ಶ್ರೀ ಗ್ರಾಮದೇವತೆ ಜಾತ್ರಾ ಮಹೋತ್ಸವದ ನಿಮಿತ್ತ ನಡೆದ ಭಾವೈಕ್ಯತಾ ಭವ್ಯ ಮೆರವಣಿಗೆ ಭಕ್ತಿಭಾವದೊಂದಿಗೆ ಅದ್ಧೂರಿಯಾಗಿ ಸಡಗರ ಸಂಭ್ರಮದಿಂದ ಜರುಗಿತು.

Advertisement

ಬೆಳಿಗ್ಗೆ 9ಕ್ಕೆ ಪಟ್ಟಣದ ಹಾಲುಮತ ಸಮಾಜದ ಬಾವಿಯಲ್ಲಿ ಗ್ರಾಮದೇವತೆಯ ಸಮ್ಮುಖದಲ್ಲಿ ಗಂಗಾಪೂಜೆ ನೆರವೇರಿಸಲಾಯಿತು. ಶ್ರೀ ಗ್ರಾಮದೇವತೆ ಜಾತ್ರಾ ಮಹೋತ್ಸವ ನಿಮಿತ್ತ ನಡೆದ ಭಾವೈಕ್ಯತಾ ಭವ್ಯ ಮೆರವಣಿಗೆಗೆ ಮಾಜಿ ಸಚಿವ ಎಚ್‌.ವೈ. ಮೇಟಿ ಚಾಲನೆ ನೀಡಿದರು. ಸಾನ್ನಿಧ್ಯ ವಹಿಸಿದ್ದ ಶ್ರೀಪ್ರಭುಶಂಕರೇಶ್ವರ ಗಚ್ಚಿನಮಠದ ಶಂಕರರಾಜೇಂದ್ರಶ್ರೀಗಳು, ಕುರುಹಿನಶೆಟ್ಟಿ ಸಮಾಜ ನೀಲಕಂಠಮಠದ ಹಳೇಹುಬ್ಬಳ್ಳಿಯ ಶಂಕರ ಶಿವಾಚಾರ್ಯ ಶ್ರೀಗಳು ಪೂಜೆ ಸಲ್ಲಿಸಿದರು. ಪೂಜಾ ನೇತೃತ್ವವನ್ನು ಮನೋಹರ ಭಟ್ಟ ನೆರವೇರಿಸಿದರು.

ವಿವಿಧ ವಾಧ್ಯಮೇಳಗಳೊಂದಿಗೆ ಸುಮಂಗಲಿಯರಿಂದ ಆರತಿ ಸೇವೆ ಹಾಗೂ ಕುಂಭ ಮೇಳದೊಂದಿಗೆ ಶ್ರೀ ದೇವಿಯ ಮೆರವಣಿಗೆಯೂ ಪಟ್ಟಣದ ಸೂಳೇಬಾವಿ ಕ್ರಾಸ್‌ನಿಂದ ರಾಯಚೂರು-ಬೆಳಗಾವಿ ಮುಖ್ಯರಸ್ತೆಯ ಮೂಲಕ, ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನ, ಶ್ರೀಶಿವಾಚಾರ ದೇವಾಂಗ ಸಮಾಜದ ಬನಶಂಕರಿ ದೇವಸ್ಥಾನ, ನಾಡ ಕಾರ್ಯಾಲಯ, ಶ್ರೀ ಪ್ರಭುಂಶಂಕರೇಶ್ವರ ಗಚ್ಚಿನಮಠ, ಪಟ್ಟಣ ಪಂಚಾಯತಿ ಕಾರ್ಯಾಲಯ, ಚಿತ್ತರಗಿ ಕ್ರಾಸ್‌, ಪ್ರಾಥಮಿಕ ಆರೋಗ್ಯ ಕೇಂದ್ರ, ಜುಮ್ಮಾ ಮಸೀದಿ, ಅಗಸಿ ಬಾಗಿಲು, ಶ್ರೀ ಬಸವೇಶ್ವರ ದೇವಸ್ಥಾನ, ಸಂಗಮೇಶ್ವರ ತೇರಿನಮನೆ, ದೇವಾಂಗ ಸಮಾಜದ ಬನಶಂಕರಿ ದೇವಸ್ಥಾನ, ಕುರುಹಿನಶೆಟ್ಟಿ ಶ್ರೀ ಬಸವೇಶ್ವರ ದೇವಸ್ಥಾನ, ಹನುಮ ಓಕುಳಿಹೊಂಡದವರೆಗೂ ಭವ್ಯ ಮೆರವಣಿಗೆ ಜರುಗಿ ಪಾದಗಟ್ಟೆಯಲ್ಲಿ ಪ್ರತಿಷ್ಠಾಪನೆ ಸ್ಥಾಪಿಸಲಾಯಿತು.

ಭವ್ಯ ಮೆರವಣಿಗೆಯಲ್ಲಿ ಬಾಗಲಕೋಟೆ ಮತಕ್ಷೇತ್ರದ ಶಾಸಕ ಡಾ|ವೀರಣ್ಣ ಚರಂತಿಮಠ, ವಿಧಾನ ಪರಿಷತ್‌ ಸದಸ್ಯ ಪಿ.ಎಚ್‌. ಪೂಜಾರ್‌,ಬಾಗಲಕೋಟೆ ಪ್ರತಿಷ್ಠಿತ ವೈದ್ಯ ಡಾ| ಎಂ.ಎಸ್‌. ದಡ್ಡೇನವರ್‌, ಖ್ಯಾತ ಉದ್ಯಮಿ ರಾಜು ಬೋರಾ, ದೊಡ್ಡಣ್ಣವರ್‌ ಮೈನ್ಸ್‌ ಕಂಪೆನಿ ಉಪಾಧ್ಯಕ್ಷ ರಾಚಪ್ಪ ಸರಡಗಿ, ಜಾತ್ರಾ ಕಮಿಟಿ ಅಧ್ಯಕ್ಷ ಜಗದೀಶ ಬಿಸಲದಿನ್ನಿ, ಪಟ್ಟಣ ಪಂಚಾಯತಿ ಸದಸ್ಯರುಗಳು, ಶ್ರೀ ಗ್ರಾಮದೇವತೆ ಜಾತ್ರಾ ಸೇವಾ ಸಮಿತಿ ಅವರು, ವಿವಿಧ ಸಮಾಜಗಳ
ಗುರುಹಿರಿಯರು,ವಿವಿಧ ಸಂಘಟನೆಗಳ ಸಂಘಟಕರು, ವಿವಿಧ ಸಮಾಜಗಳ ಮುಖಂಡರು, ಯುವಕರು, ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿ ಮೆರವಣಿಗೆಗೆ ಕಳೆತಂದವು.

Advertisement

Udayavani is now on Telegram. Click here to join our channel and stay updated with the latest news.

Next