Advertisement

Ashoka Chakra ಅವಹೇಳನ‌: ಮಾಲ್ದೀವ್ಸ್‌ ಮಾಜಿ ಸಚಿವೆ ಕ್ಷಮೆಯಾಚನೆ

12:29 PM Apr 09, 2024 | Team Udayavani |

ಮಾಲೆ: ಮಾಲ್ದೀವ್ಸ್‌ನ ವಿಪಕ್ಷ ಮಾಲ್ದೀವಿಯನ್‌ ಡೆಮಾಕ್ರಟಿಕ್‌ ಪಾರ್ಟಿ(ಎಂಡಿಪಿ)ಯನ್ನು ಟೀಕಿಸುವ ಭರದಲ್ಲಿ ಭಾರತದ ರಾಷ್ಟ್ರಧ್ವಜದಲ್ಲಿನ ಅಶೋಕ ಚಕ್ರವನ್ನು ಅವಮಾನಿಸಿದ್ದ ಮಾಜಿ ಸಚಿವೆ ಮರಿಯಮ್‌ ಶಿಯುನಾ ಈಗ ತಪ್ಪೊಪ್ಪಿಕೊಂಡು ಕ್ಷಮೆಯಾಚಿಸಿದ್ದಾರೆ.

Advertisement

“ನನ್ನ ಇತ್ತೀಚಿನ ಪೋಸ್ಟ್‌ನಿಂದ ಉಂಟಾದ ಗೊಂದಲ ಅಥವಾ ಅಪರಾಧಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ಪ್ರತೀಪಕ್ಷವನ್ನು ಟೀಕಿಸಲು ಬಳಸಿದ ಚಿತ್ರವು ಭಾರತದ ಧ್ವಜವನ್ನು ಹೋಲುತ್ತದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಇದು ಉದ್ದೇಶಪೂರ್ವಕವಲ್ಲ. ತಪ್ಪು ತಿಳಿವಳಿಕೆಗೆ ವಿಷಾದಿಸುತ್ತೇನೆ’ ಎಂದು ಮರಿಯಮ್‌ ಟ್ವೀಟ್‌ ಮಾಡಿದ್ದಾರೆ.

ಭಾರತದೊಂದಿಗೆ ಮಾಲ್ದೀವ್ಸ್‌ ತನ್ನ ಸಂಬಂಧವನ್ನು ಆಳವಾಗಿ ಗೌರವಿಸುತ್ತದೆ. ಭವಿಷ್ಯದಲ್ಲಿ ನಾನು ಅಂತಹ ಮೇಲ್ವಿಚಾರಣೆಗಳನ್ನು ತಡೆಯಲು ನಾನು ಹಂಚಿಕೊಳ್ಳುವ ವಿಷಯವನ್ನು ಪರಿಶೀಲಿಸುವಲ್ಲಿ ಹೆಚ್ಚು ಜಾಗರೂಕಳಾಗಿರುತ್ತೇನೆ, ”ಎಂದು ಅವರು ಹೇಳಿದ್ದಾರೆ.

ವಿಷಾದ ವ್ಯಕ್ತಪಡಿಸಿದ್ದರೂ, ಭಾರತೀಯ ಸಾಮಾಜಿಕ ಮಾಧ್ಯಮ ಬಳಕೆದಾರರು ಆಕ್ರೋಶ ಮುಂದುವರೆಸಿದ್ದಾರೆ.

ಶನಿವಾರದಂದು ಭಾರತ ವ್ಯಾಪಾರ ಕೋಟಾವನ್ನು ದ್ವೀಪ ರಾಷ್ಟ್ರಕ್ಕೆ ಕೆಲವು ಪ್ರಮಾಣದ ಅಗತ್ಯ ವಸ್ತುಗಳ ರಫ್ತಿಗೆ ಅವಕಾಶ ಮಾಡಿಕೊಟ್ಟಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next