Advertisement
ಜನಪದ ಕಲಾವಿದರ ಬಳಗ, ಅಖೀಲ ಕರ್ನಾಟಕಕಲಾವಿದರ ಒಕ್ಕೂಟ ಹಾಗೂ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ನಗರದ ರಂಗಮಂದಿರದಲ್ಲಿ ಹಮ್ಮಿಕೊಂಡಿರುವ ನಾಲ್ಕು ದಿನಗಳ ರಾಜ್ಯ ನಾಟಕೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
Related Articles
Advertisement
ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ ಪ್ರಾಸ್ತಾವಿಕ ಮಾತನಾಡಿ, ಜಿಲ್ಲೆಯಲ್ಲಿ ಜನಪದಕಲಾವಿದರನ್ನು ಗುರುತಿಸಿ- ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಕರುನಾಡು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಗೌರವಾಧ್ಯಕ್ಷ ಡಾ| ಸಂಜೀವಕುಮಾರ ಅತಿವಾಳೆ,ಸಾಹಿತಿ ರೂಪಾ ಪಾಟೀಲ, ಜಾನಪದ ಕಲಾವಿದ ಶಂಭುಲಿಂಗ ವಾಲ್ಖೋಡ್ಡಿ, ಸಾಣೇಹಳ್ಳಿಯ ಶಿವ ಸಂಚಾರ ತಂಡದ ಜೀವನಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ ಇದ್ದರು. ಭಕ್ತಕುಂಬಾರ ನಿರೂಪಿಸಿದರು.
ನಾಟಕ ಪ್ರದರ್ಶನ ಇಂದು: ಫೆ.6ರಂದು ಸಂಜೆ 5 ಗಂಟೆಗೆ ಬಳ್ಳಾರಿ ಜಿಲ್ಲೆಯ ಪುರುಷೋತ್ತಮ ಹಂದ್ಯಾಳ ಮತ್ತು ತಂಡದಿಂದ “ದನ ಕಾಯುವವರ ದೊಡ್ಡಾಟ’ ನಾಟಕ ಪ್ರದರ್ಶನವಾಗಲಿದೆ. ಕೆವಿಕೆ ಮುಖ್ಯಸ್ಥಸುನೀಲಕುಮಾರ ಎನ್.ಎಂ. ಉದ್ಘಾಟಿಸುವರು.ಹಿರಿಯ ರಂಗ ಕಲಾವಿದ ಸಂಗಮೇಶ ನಾಶೀಗಾರ ಅಧ್ಯಕ್ಷತೆ ವಹಿಸುವರು. ಕನ್ನಡಾಂಬೆ ಗೆಳೆಯರಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ, ಎನ್‌ಎಸ್ ಎಸ್‌ಕೆ ನಿರ್ದೇಶಕ ವೀರಶೆಟ್ಟಿ ಪಟ್ನೆ, ಕರುಣಾಮಯ ಯುವಕ ಸಂಘದ ಅಧ್ಯಕ್ಷ ರಾಜಕುಮಾರ ಹೆಬ್ಟಾಳೆ,ಸಾಹಿತಿ ಭಾರತಿ ವಸ್ತ್ರದ, ಜಾನಪದ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷೆ ಮಲ್ಲಮ್ಮಾ ಸಂತಾಜಿ, ಜೈ ಕರವೇ ಜಿಲ್ಲಾಧ್ಯಕ್ಷ ಶ್ರೀಮಂತ ಸಪಾಟೆ, ಉದ್ಯಮಿ ದಯಾನಂದ ಶೆಟ್ಟಿ ಅತಿಥಿಗಳಾಗಿ ಪಾಲ್ಗೊಳ್ಳುವರು.