Advertisement

ರಸ್ತೆ ಕಾಮಗಾರಿಗೆ ಚಾಲನೆ; ರಾಜ್ಯ ಸರಕಾರ ನುಡಿದಂತೆ ನಡೆದಿದೆ :ವೀಣಾ

07:20 AM Aug 04, 2017 | Team Udayavani |

ಮಡಿಕೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ ನುಡಿದಂತೆ ನಡೆದಿದ್ದು, ಅನೇಕ ಜನಪರ ಭಾಗ್ಯಗಳನ್ನು ಘೋಷಿಸಿ ಅನುಷ್ಠಾನಗೊಳಿಸುವ ಮೂಲಕ ರಾಜ್ಯದ ಜನತೆಯನ್ನು ಭಾಗ್ಯಶಾಲಿಗಳನ್ನಾಗಿಸಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯರಾದ ವೀಣಾ ಅಚ್ಚಯ್ಯ ಬಣ್ಣಿಸಿದ್ದಾರೆ.

Advertisement

ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜ್‌ನಲ್ಲಿ ಬೆಟ್ಟಗೇರಿ ಪಂಚಾಯ್ತಿ ವ್ಯಾಪ್ತಿಯ ಗ್ರಾಮದ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಬೆಟ್ಟಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಭವನದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಕಾಂಗ್ರೆಸ್‌ ಕಾರ್ಯಕರ್ತರ ಕೋರಿಕೆಗೆ ಸ್ಪಂದಿಸುತ್ತಿರುವ ಮುಖ್ಯಮಂತ್ರಿಗಳು ವರ್ಷಕ್ಕೆ 50 ಕೋಟಿಯಂತೆ ಇಲ್ಲಿಯ ವರೆಗೆ ಒಟ್ಟು 200 ಕೋಟಿ ರೂ.ಗಳನ್ನು ಕೊಡಗಿನ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ನೀಡಿದ್ದಾರೆ. ಇದು ಮುಖ್ಯಮಂತ್ರಿಗಳಿಗೆ ಕೊಡಗು ಜಿಲ್ಲೆಯ ಮೇಲಿರುವ ಅಭಿಮಾನಕ್ಕೆ ಸಾಕ್ಷಿಯಾಗಿದೆ ಎಂದು ವೀಣಾ ಅಚ್ಚಯ್ಯ ಹೇಳಿದರು.
2016-17ರಡಿಯ ಅನುದಾನದಲ್ಲಿ ಬೆಟ್ಟಗೇರಿ ಪಂಚಾಯ್ತಿ ವ್ಯಾಪ್ತಿಯ ಅರ್ವತ್ತೋಕ್ಲು, ಬೆಟ್ಟಗೇರಿ, ಪಾಲೂರು, ಹೆರವನಾಡು ಮತ್ತು ಕಾರುಗುಂದ ಗ್ರಾಮಗಳ ರಸ್ತೆಗೆ ಭೂಮಿ ಪೂಜೆ ನೆರವೇರಿಸಿದರು.

ಅರುವತ್ತೋಕ್ಲುವಿನ ವಿಷ್ಣಪ್ಪ ದೇವಸ್ಥಾನ ರಸ್ತೆ, ತೆನ್ನಿರ ಕುಟುಂಬಸ್ಥರ ರಸ್ತೆ, ಮುಕ್ಕಾಟಿರ ಕುಟುಂಬಸ್ಥರ ರಸ್ತೆ. ಅರುವತ್ತೋಕ್ಲು ಮುಖ್ಯರಸ್ತೆ. ಜ್ಯೋತಿ ಹರಿಜನ ಕಾಲೋನಿ ರಸ್ತೆ. ಕಾರುಗುಂದ ಗ್ರಾಮದ ಬಿದ್ದಂಡ ಕುಟುಂಬಸ್ಥರ ರಸ್ತೆ. ಭಗವತಿ ದೇವಸ್ಥಾನ, ಮುಕ್ಕಾಟಿ ಪಾಣತ್ತಲೆ ರಸ್ತೆ, ಹೆರವನಾಡು ಗ್ರಾಮದ ಕೇಟೋಳಿ ನಂಬಂಡ ಕೊಲ್ಲಿ ರಸ್ತೆ,

ಮುಖ್ಯರಸ್ತೆಯಿಂದ ಹೆರವನಾಡು ಶಾಲೆ ರಸ್ತೆ, ಪಾಲೂರು ಗ್ರಾಮದ ಬೈತಡ್ಕ ಕುಟುಂಬಸ್ಥರ ರಸ್ತೆ, ಪುದಿಯನೆರವನ ರಸ್ತೆ, ಬೆಟ್ಟಗೇರಿ ಗ್ರಾಮದ ಶಾಲಾ ಆಟದ ಮೈದಾನದಿಂದ ಕಲ್ಲಂಬಿ ಮನೆ ರಸ್ತೆ. ಕುಂಬಾರ ಕೊಪ್ಪಲು ರಸ್ತೆ ಸೇರಿದಂತೆ ಒಟ್ಟು 62 ಲಕ್ಷ ರೂ.ಗಳ ಕಾಮಗಾರಿಗೆ ವೀಣಾಅಚ್ಚಯ್ಯ ಚಾಲನೆ ನೀಡಿದರು.

Advertisement

ರಾಜ್ಯ ರೇಷ್ಮೆ ಮಾರುಕಟ್ಟೆ ನಿಗಮದ ಅಧ್ಯಕ್ಷ ಟಿ.ಪಿ. ರಮೇಶ್‌. ಅರೆಭಾಷೆ ಸಾಹಿತ್ಯ ಅಕಾಡಮಿ ಅಧ್ಯಕ್ಷ ಕೊಲ್ಯದ ಗಿರೀಶ್‌. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿ ಯಂಡ ಹರೀಶ್‌ ಬೋಪಣ್ಣ. ರಾಜೀವ್‌ ಗಾಂಧಿ ಪಂಚಾಯತ್‌ ರಾಜ್‌ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರ ಮೈನಾ, ವಲಯ ಕಾಂಗ್ರೆಸ್‌ ಅಧ್ಯಕ್ಷರಾದ ನಾಪಂಡ ಗಣೇಶ್‌, ಮಾಜಿ ವಲಯಾಧ್ಯಕ್ಷ‌ ಕೇಟೋಳಿ ಮೋಹನ್‌ ರಾಜ್‌,  ಡಿಸಿಸಿ ಸದಸ್ಯೆ ಬಿದ್ದಂಡ ಸುಮಿತಾ ಮಾದಪ್ಪ, ಮಾಜಿ ಮಂಡಲ ಪ್ರಧಾನ ಚಿಕ್ಕು ಕಾರ್ಯಪ್ಪ, ಹಿರಿಯರಾದ ನೈಯಣಿರ ಗೋಪಾಲ. ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರಾದ ಹನೀಫ್ ಸಂಪಾಜೆ, ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ಶಾಂತಿ, ಸದಸ್ಯರಾದ ತೆನ್ನೀರ ರಮೇಶ್‌ ಸರಸ್ವತಿ. ಮಂಡೇಡ ಮನು, ಕೊಡಗನ ತೀರ್ಥ ಪ್ರಸಾದ್‌. ಹಿರಿಯರಾದ ಪೂಜಾರಿರ ಮಾದಪ್ಪ. ಮುಂಜಾಂದಿರ ಸುಬ್ಬಯ್ಯ. ಬೊಳªಂಡ ನಾಚಪ್ಪ, ಪಿ.ಎ.ಮೊಹಮ್ಮದ್‌ ಕುಜ್ಞ, ಮೊಯ್ದು ಬೆಟ್ಟಗೇರಿ, ಕರಿಕೆ ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ಬಾಲಚಂದ್ರ ನಾಯರ್‌, ಮುಕ್ಕಾಟಿರ ಕುಂಜ್ಞಪ್ಪ, ಶಾಂತಿ ನಮ್ಮುಣಿ. ಪುತ್ತೇರಿರ ಸೋಮಣ್ಣ. ತೆನ್ನೀರ ಮಿಟ್ಟು ಪೆಮ್ಮಯ್ಯ. ಮುಂಜಾಂದಿರ ಸತ್ಯ ಬೋಪಯ್ಯ, ರಮೇಶ್‌. ಪಿ.ಎಂ.ಪ್ರದೀಪ್‌ ಕುಮಾರ್‌, ಪುದಿಯನೆರವನ ಆಶಾ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಅಗಲಿದ ಮಾಜಿ ಮುಖ್ಯಮಂತ್ರಿ ಧರಂಸಿಂಗ್‌ ಅವರಿಗೆ ಸಭೆ ಸಂತಾಪ ಸೂಚಿಸಿತು. ವಲಯ ಕಾಂಗ್ರೆಸ್‌ ಅಧ್ಯಕ್ಷ ನಾಪಂಡ ಗಣೇಶ್‌ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ತೆನ್ನಿರ ಮೈನಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ತೆನ್ನಿರ ರಮೇಶ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next