Advertisement

ರಾಮರಾಜ್ಯ ರಥಯಾತ್ರೆಗೆ ಚಾಲನೆ

09:26 AM Feb 14, 2018 | Team Udayavani |

ಲಕ್ನೋ: ಆರೆಸ್ಸೆಸ್‌ನ ಅಂಗಸಂಸ್ಥೆಗಳಾದ ವಿಶ್ವ ಹಿಂದೂ ಪರಿಷತ್‌(ವಿಎಚ್‌ಪಿ) ಹಾಗೂ ಮುಸ್ಲಿಂ ರಾಷ್ಟ್ರೀಯ ಮಂಚ್‌(ಎಂಆರ್‌ಎಂ) ಹಮ್ಮಿಕೊಂಡಿರುವ ರಾಮರಾಜ್ಯ ರಥಯಾತ್ರೆಗೆ ಅಯೋಧ್ಯೆಯಲ್ಲಿ ಮಂಗಳ ವಾರ ಚಾಲನೆ ಸಿಕ್ಕಿದೆ. 2019ರ ಲೋಕ ಸಭೆ ಚುನಾವಣೆಗೆ ಮೊದಲೇ ರಾಮ ಮಂದಿರ ಆಂದೋಲನವನ್ನು ಪುನರೂರ್ಜಿತಗೊಳಿಸುವ ಉದ್ದೇಶದಿಂದ ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ. ರಾಮಜನ್ಮ ಭೂಮಿ- ಬಾಬರಿ ಮಸೀದಿ ಭೂವಿವಾದದ ವಿಚಾರಣೆಯು ಕೊನೆಯ ಹಂತದಲ್ಲಿ ರುವಾಗಲೇ ಈ ಯಾತ್ರೆ ಆರಂಭವಾಗಿದೆ.

Advertisement

ಅಯೋಧ್ಯೆಯಿಂದ ರಾಮೇಶ್ವರಂವರೆಗೆ ರಥಯಾತ್ರೆ ಸಾಗಲಿದ್ದು, ಕರ್ನಾಟಕ ಸೇರಿದಂತೆ 6 ರಾಜ್ಯಗಳಲ್ಲಿ ಸಂಚರಿಸಲಿವೆ. ಒಟ್ಟು 41 ದಿನಗಳ ಕಾಲ ನಡೆಯಲಿರುವ ಯಾತ್ರೆ ಮಾ.23ಕ್ಕೆ ಸಮಾಪ್ತಿಯಾಗಲಿದೆ. 1990ರ ದಶಕದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬೇಕಾದ ಕಂಬಗಳನ್ನು ಕೆತ್ತಲೆಂದು ವಿಎಚ್‌ಪಿ ಅಯೋಧ್ಯೆಯಲ್ಲಿ ಕರಸೇವಕಪುರಂ ಎಂಬ ವರ್ಕ್‌ಶಾಪ್‌ವೊಂದನ್ನು ತೆರೆದಿದ್ದು, ಅಲ್ಲೇ ಯಾತ್ರೆಗೆ ಚಾಲನೆ ನೀಡಿರುವುದು ವಿಶೇಷ.

6 ರಾಜ್ಯಗಳಲ್ಲಿ ಸಂಚಾರ: ಟಾಟಾ ಮಿನಿ ಟ್ರಕ್‌ಗೆ ಸಿಂಗಾರ ಮಾಡಿ ರಥವಾಗಿ ಮಾರ್ಪಡಿಸಲಾಗಿದೆ. ಇದು ಬಿಜೆಪಿ ಆಡಳಿತದಲ್ಲಿರುವ ಉತ್ತರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ಸಂಚರಿಸಿ, ಅನಂತರ ಕರ್ನಾಟಕ ತಲುಪಲಿದೆ. ಬಳಿಕ ಕೇರಳಕ್ಕೆ ತೆರಳಿ, ಅಲ್ಲಿಂದ ತಮಿಳುನಾಡಿನ ರಾಮೇಶ್ವರಂನಲ್ಲಿ ಯಾತ್ರೆ ಸಮಾಪ್ತಿಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next