ಮೊಬೈಲ್ ಕ್ಲಿನಿಕ್ ಸೇವೆಗೆ ಬುಧವಾರ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಸಚಿವರು, ಈಗಾಗಲೇ ನಂಜನಗೂಡಿನಲ್ಲಿ ಈ ಮೊಬೈಲ್ ಕ್ಲಿನಿಕ್ ಸೇವೆ ಪ್ರಾರಂಭಿಸಲಾಗಿದೆ. ವೈದ್ಯರು ಕೋವಿಡ್ ಹಾಟ್ ಸ್ಪಾಟ್‌ಗಳಿಗೆ ತೆರಳಿ ಪ್ರತಿಯೊಬ್ಬರನ್ನು ವೈದ್ಯಕೀಯ ತಪಾಸಣೆ ನಡೆಸುತ್ತಿದ್ದಾರೆ. ಅದರಂತೆ ಮೈಸೂರಿನಲ್ಲೂ ಸುಮಾರು 10 ಮೊಬೈಲ್ ಕ್ಲಿನಿಕ್ ಸೇವೆಗೆ ಚಾಲನೆ ನೀಡಿದ್ದು, ಇದು ಪಾಲಿಕೆ ಅಧಿಕಾರಿಗಳು ತಿಳಿ ಸುವ ಪ್ರದೇಶಗಳಿಗೆ ತೆರಳಿ ಅಲ್ಲಿನ ಜನರಿಗೆ ತಪಾಸಣೆ ಮಾಡಲಿದೆ, ಇದರಿಂದ ಜನರಿಗೆ ಉಪಯೋಗವಾಗಲಿದೆ ಎಂದು ಹೇಳಿದರು.
Advertisement
ಕೋವಿಡ್ ಈಗಾಗಲೇ ಮೈಸೂರಿನಲ್ಲಿ ನಿಯಂತ್ರಣಕ್ಕೆ ಬಂದಿದೆ. ಪಾಸಿಟಿವ್ ಇರುವವರು ಗುಣಮುಖರಾಗುತ್ತಿರುವುದು ಮೈಸೂರು ಜನತೆಗೆ ನೆಮ್ಮದಿ ತಂದಿದೆ. ಇದೇ ಪರಿಸ್ಥಿತಿ ಮುಂದುವರಿಯಲು ಈ ಮೊಬೈಲ್ ಕ್ಲಿನಿಕ್ ಸೇವೆ ಇನ್ನೂ ಅನುಕೂಲವಾಗಲಿದೆ. ಜನರ ಬಳಿಯೇ ವೈದ್ಯರು ಹೋಗುವುದರಿಂದ ಅಲ್ಲಿನ ಜನತೆ ತಪಾಸಣೆ ಮಾಡಿಸಿಕೊಂಡು, ಅವರಿಗೆ ಬೇಕಾದ ಉಚಿತ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ತಪಾಸಣೆ ನಡೆಸಲಾಯಿತು. ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಪಾಲಿಕೆ ಆರೋಗ್ಯಾ ಧಿಕಾರಿ ಡಾ.ನಾಗರಾಜು ಮಾತನಾಡಿದರು. ಮೇಯರ್ ತಸ್ನೀಂ, ಶಾಸಕರಾದ ಎಸ್. ಎ. ರಾಮದಾಸ್, ಎಲ್. ನಾಗೇಂದ್ರ, ಡೀಸಿ ಅಭಿ ರಾಮ್ ಜಿ.ಶಂಕರ್ ಹಾಜರಿದ್ದರು.