Advertisement

ಕುತ್ಯಾರು ಕೇಂಜ ಬಗ್ಗತೋಟ ಕೆರೆ ಅಭಿವೃದ್ಧಿಗೆ ಚಾಲನೆ

08:41 PM May 21, 2020 | Sriram |

ಶಿರ್ವ: ಕೋವಿಡ್ -19 ಲಾಕ್‌ಡೌನ್‌ ಸಂದರ್ಭದಲ್ಲಿ ಉದ್ಯೋಗವಿಲ್ಲದೆ ಮನೆಯಲ್ಲಿದ್ದ ಗ್ರಾಮೀಣ ಭಾಗದ ಕೂಲಿ ಕಾರ್ಮಿಕ ರಿಗೆ ಕುಟುಂಬ ನಿರ್ವಹಣೆಗೆ ತೊಂದರೆ ಯಾಗಿರುವುದರಿಂದ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕುತ್ಯಾರು ಗ್ರಾ.ಪಂ. ವ್ಯಾಪ್ತಿಯ ಕೇಂಜ ಬಗ್ಗತೋಟ ಕೆರೆ ಅಭಿವೃದ್ಧಿಗೆ ಚಾಲನೆ ನೀಡಲಾಯಿತು.

Advertisement

ಕುತ್ಯಾರು ಗ್ರಾ. ಪಂ. ಪಿಡಿಒ ರಜನಿ ಭಟ್‌ ಕೆರೆ ದುರಸ್ತಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಗ್ರಾಮದಲ್ಲಿ ಕೂಲಿಯನ್ನೇ ನಂಬಿಕೊಂಡು ಜೀವನ ನಡೆಸುವ ಮಹಿಳೆಯರು ಮತ್ತು ಯುವಕರು ಹೆಚ್ಚಿನ ಸಂಖ್ಯೆಯಲ್ಲಿದ್ದು ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮಸ್ಥರು ಸೇರಿ ಕೆರೆಯ ಹೂಳೆತ್ತಲು ನಿರ್ಧರಿಸಿರುವುದು ಶ್ಲಾಘನೀಯ ಎಂದು ಹೇಳಿದರು.

ಪಿಡಿಒ ನೇತೃತ್ವದಲ್ಲಿ ಪಂಚಾಯತ್‌ ಸಿಬಂದಿ ಸುರೇಖಾ ಶೆಟ್ಟಿ ಮತ್ತು ದೀಪಾ ಸಾಮಾಜಿಕ ಅಂತರ ಕಾಪಾಡಿ ಕೆಲಸ ಮಾಡುವುದು, ಜ್ವರ ಕೆಮ್ಮು ಇರುವವರು ಗ್ರಾ.ಪಂ.ಗೆ
ತಿಳಿಸಿ, ಆರೋಗ್ಯವಂತರು ಮಾತ್ರ ಕೆಲಸದಲ್ಲಿ ಪಾಲ್ಗೊಳ್ಳುವುದರ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಸ್ಥಳೀಯ ಗ್ರಾ.ಪಂ. ಸದಸ್ಯರಾದ ರಾಜ ಶೆಟ್ಟಿ, ಪದ್ಮಾವತಿ ಪೂಜಾರ್ತಿ ಉಪಸ್ಥಿತರಿದ್ದರು.

ಮಾಜಿ ಗ್ರಾ.ಪಂ. ಸದಸ್ಯ ಕೇಂಜ ಸಂಪತ್‌ ಕುಮಾರ್‌ ನೇತೃತ್ವದಲ್ಲಿ ಸುಭಾಷ್‌ ಅಂಚನ್‌, ಪ್ರಶಾಂತ್‌ ಸುವರ್ಣ, ಭಾಸ್ಕರ ಪೂಜಾರಿ, ನಿತಿನ್‌ ಪೂಜಾರಿ, ಶರತ್‌ ಬಗ್ಗತೋಟ, ಗೀತಾ ಬಗ್ಗತೋಟ, ಆಶಾ, ಜಯಶ್ರೀ, ಸರಸ್ವತಿ, ಮಾಲಿನಿ ಮೊದಲಾದವರು ಉತ್ಸಾಹದಿಂದ ಪಾಲ್ಗೊಂಡಿದ್ದು,ಅಂತರ್ಜಲ ಮಟ್ಟ ವೃದ್ಧಿಸಲು ಗ್ರಾಮಸ್ಥರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next