Advertisement

ಸಾರಿಗೇತರ ಸೇವೆ ಅಗತ್ಯ: ಮುಖ್ಯಮಂತ್ರಿ

11:14 PM Feb 26, 2021 | Team Udayavani |

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮಗಳು ಆರ್ಥಿಕ ಸಂಕಷ್ಟಗಳಿಂದ ಹೊರಬರಲು ಸಾರಿಗೆಯೊಂದಿಗೆ ಇತರ ಸೇವೆಗಳ ಕಡೆಗೂ ಗಮನ ಹರಿಸಬೇಕು ಎಂದು ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಹೇಳಿದರು.

Advertisement

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ದ “ನಮ್ಮ ಕಾರ್ಗೊ ಸೇವೆ’ಗೆ ಶುಕ್ರವಾರ  ವಿಧಾನಸೌಧದ ಎದುರು  ಚಾಲನೆ ನೀಡಿ ಅವರು ಮಾತನಾಡಿದರು.

ಕೋವಿಡ್ ದಿಂದ ಸಾರಿಗೆ ನಿಗಮ ಗಳು ತೀವ್ರ ಸಂಕಷ್ಟ ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲಿ ಸರಕು ಸಾಗಣೆ ಸೇವೆ ಆರಂಭಿಸಿರುವುದು  ಔಚಿತ್ಯಪೂರ್ಣವಾಗಿದೆ. ಇದು ಸಾರ್ವಜನಿಕ ಸ್ನೇಹಿಯಾಗಿದ್ದು, ದಕ್ಷಿಣ ಭಾರತದ ಬಹುತೇಕ ರಾಜ್ಯಗಳಿಗೂ ಈ ಸೇವೆ ಲಭ್ಯವಾಗಲಿದೆ. ಇಂತಹ  ಪರ್ಯಾಯ ಸೇವೆಗಳತ್ತ ಉಳಿದ ಸಾರಿಗೆ ನಿಗಮಗಳೂ ಗಮನ ಹರಿಸಬೇಕು ಎಂದರು.

“ನಮ್ಮ ಕಾರ್ಗೊ’ ಸೇವೆಯನ್ನು ಮೊದಲ ಹಂತದಲ್ಲಿ ರಾಜ್ಯದ 88 ಹಾಗೂ ಹೊರ ರಾಜ್ಯಗಳ 21 ಸೇರಿ 109 ನಿಲ್ದಾಣಗಳಲ್ಲಿ ಪರಿಚಯಿ

ಸಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ನಿಲ್ದಾಣಗಳಿಗೂ ವಿಸ್ತರಿಸಲಾ ಗುವುದು. ಜತೆಗೆ ಆಯ್ದ ನಗರಗಳಲ್ಲಿ “ಗ್ರಾಹಕರ ಮನೆ ಬಾಗಿಲಿಗೆ’ ಸೇವೆ ಕಲ್ಪಿಸಲಾಗುವುದು. ಇದರಿಂದ ವಾರ್ಷಿಕ 70ರಿಂದ 80 ಕೋ. ರೂ. ಆದಾಯ ನಿರೀಕ್ಷಿಸಲಾಗಿದೆ ಎಂದರು.

Advertisement

ಪರಿಹಾರ ವಿತರಣೆ :

ಕರ್ತವ್ಯದ ವೇಳೆ ಕೋವಿಡ್ ಗೆ ಬಲಿಯಾದ ನಿಗಮದ ನೌಕರರ  ಕುಟುಂಬಗಳಿಗೆ ಸಾಂಕೇತಿಕವಾಗಿ 30 ಲ.ರೂ. ಪರಿಹಾರದ ಚೆಕ್‌  ವಿತರಿಸಲಾಯಿತು.

ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ನೂತನವಾಗಿ ಆರಂಭಿಸಿರುವ “ನಮ್ಮ ಕಾರ್ಗೊ ಕೌಂಟರ್‌’ ಮತ್ತು ನವೀಕೃತ ಮುಂಗಡ ಟಿಕೆಟ್‌ ಕಾಯ್ದಿರಿಸುವ ಕೌಂಟರ್‌ಗಳನ್ನು ಉದ್ಘಾಟಿಸಿದರು.

ಲಾಜಿಸ್ಟಿಕ್‌ ಕ್ಷೇತ್ರಕ್ಕೆ ರಾಜ್ಯ ರಸ್ತೆ ಸಾರಿಗೆ ನಿಗಮ ಶುಕ್ರವಾರದಿಂದ ಅಧಿಕೃತವಾಗಿ ಪ್ರವೇಶ ಪಡೆಯಿತು. ಒಂದೆರಡು ದಿನಗಳಲ್ಲಿ ನಿಗದಿಪಡಿಸಿದ 109 ನಿಲ್ದಾಣಗಳಲ್ಲಿನ ಕೌಂಟರ್‌ಗಳಲ್ಲಿ ಏಕಕಾಲದಲ್ಲಿ ಸೇವೆ ಆರಂಭಗೊಳ್ಳಲಿದೆ. ರಾಜ್ಯದ ಯಾವುದೇ ಮೂಲೆಯಲ್ಲಿ ಪಾರ್ಸೆಲ್‌ಗ‌ಳು 24 ಗಂಟೆಯಲ್ಲಿ ನಿಗದಿತ ಸ್ಥಳ ತಲುಪಲಿವೆ. ಮುಂಬಯಿ, ಹೈದರಾಬಾದ್‌, ಚೆನ್ನೈ ಸಹಿತ ಹೊರ ರಾಜ್ಯದ ನಗರಗಳಿಗೂ 24ರಿಂದ 48 ಗಂಟೆಗಳಲ್ಲಿ ಪಾರ್ಸೆಲ್‌ ತಲುಪಲಿವೆ.

Advertisement

Udayavani is now on Telegram. Click here to join our channel and stay updated with the latest news.

Next