Advertisement
ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ ವತಿ ಯಿಂದ ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭ ವನದ ಸಾರಾ ಅಬೂಬಕ್ಕರ್ ವೇದಿಕೆಯಲ್ಲಿ ಶುಕ್ರವಾರ ರಜತ ಸಂಭ್ರಮದ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಕನ್ನಡವನ್ನು ಬೆಳೆಸುವಲ್ಲಿ ಕರಾವಳಿಗರ ಕೊಡುಗೆ ಅಪಾರ. ದಕ್ಷಿಣ ಕನ್ನಡ ಉತ್ತರ ಕನ್ನಡ ಎರಡೂ ಕನ್ನಡವನ್ನು ಹಾಸೊ ದ್ದಿವೆ. ರಾಘವೇಂದ್ರ ತೀರ್ಥರಿಂದ ಕನಕದಾಸರ ವರೆಗೆ ಕನ್ನಡಕ್ಕೆ ಮಹತ್ವ ಸಿಕ್ಕಿದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಡಾ| ಎಂ.ಪಿ. ಶ್ರೀನಾಥ್ ಆಶಯ ನುಡಿಗಳನ್ನಾಡಿದರು. ಪ್ರಧಾನ ಅಭ್ಯಾಗತರಾಗಿ ಸಮ್ಮೇಳನ ಸಂಯೋಜನ ಸಮಿತಿ ಗೌರವಾಧ್ಯಕ್ಷ ಡಿ. ಹರ್ಷೇಂದ್ರ ಕುಮಾರ್, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ| ಎಂ. ಪ್ರಭಾಕರ ಜೋಷಿ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಪ್ರದೀಪ್ ಕುಮಾರ್‌ಕಲ್ಕೂರ, ಉದ್ಯಮಿ ರಘುನಾಥ ಸೋಮ ಯಾಜಿ, ಕಾಸರಗೋಡು ಜಿಲ್ಲಾ ಕಸಾಪ ಅಧ್ಯಕ್ಷ ಎಸ್.ವಿ.ಭಟ್, ಕಸಾಪ ಜಿ. ಗೌ. ಕಾರ್ಯದರ್ಶಿ ರಾಜೇಶ್ವರಿ ಎಂ., ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಡಿ.ಯದುಪತಿ ಗೌಡ, ರಾಜ್ಯ ಕಸಾಪ ಸದಸ್ಯ ಮಾಧವ ಎಂ.ಕೆ., ಉಜಿರೆ ಗ್ರಾ.ಪಂ. ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ, ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಭಟ್, ವಿವಿಧ ತಾಲೂಕಿನ ಅಧ್ಯಕ್ಷರು ಉಪಸ್ಥಿತರಿದ್ದರು.ಸಮ್ಮೇಳನ ಸಂಯೋಜನ ಸಮಿತಿ ಅಧ್ಯಕ್ಷ ಶರತ್‌ಕೃಷ್ಣ ಪಡುವೆಟ್ನಾಯ ಸ್ವಾಗತಿಸಿದರು. ಶಾಸಕ ಹರೀಶ್ ಪೂಂಜಾ ಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸಿ ದರು.
ಪ್ರಾಧ್ಯಾಪಕರಾದ ಡಾ| ಬಿ.ಎ. ಕುಮಾರ ಹೆಗ್ಡೆ, ಅನುರಾಧಾ ಕೆ. ರಾವ್ ನಿರ್ವಹಿಸಿದರು. ವಾಣಿ ಕಾಲೇಜು ವಿದ್ಯಾಥಿಗಳು ನಾಡಗೀತೆ, ಎಸ್‌ಡಿಎಂ ಕಾಲೇಜು ವಿದ್ಯಾರ್ಥಿಗಳು ರೈತಗೀತೆ ಹಾಡಿದರು.ಉಜಿರೆ ಬಸ್ ನಿಲ್ದಾಣದಿಂದ ಸಮ್ಮೇಳನದ ಸರ್ವಾಧ್ಯಕ್ಷರನ್ನು ಮತ್ತು ಗಣ್ಯರನ್ನು ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.
ಸಮ್ಮಾನಕಸಪಾ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಹಿರಿಯ ನೃತ್ಯ ಗುರು ಪಿ.ಕಮಲಾಕ್ಷ ಆಚಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ. ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್. ಮಂಜುನಾಥ್, ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ, ಹಿರಿಯ ರಂಗ ಕಲಾವಿದ ದೇವದಾಸ್ ಕಾಪಿಕಾಡ್ ಅವರನ್ನು ಸಮ್ಮಾನಿಸಲಾಯಿತು. ವಿದೇಶಿಯರಿಂದಲೂ ಸಿಕ್ಕಿದೆ ಕನ್ನಡಕ್ಕೆ ಕೊಡುಗೆ
ಜಗತ್ತಿನ ಪರಿಪೂರ್ಣ ಭಾಷೆಗಳಲ್ಲಿ ಕನ್ನಡವೂ ಒಂದು. ಉಳಿದವು ಸಂಸ್ಕೃತ ಮತ್ತು ಗ್ರೀಕ್. ಕನ್ನಡ ನಾಡಿನಲ್ಲಿ ಹುಟ್ಟಿದವರು ಪುಣ್ಯಮಾಡಿದವರು. ಹರ್ಮನ್ ಮೋಗ್ಲಿ ಕನ್ನಡ ಪತ್ರಿಕೋಧ್ಯಮಕ್ಕೆ ಭದ್ರ ಬುನಾದಿ ಹಾಕಿದವರು. ಕರಾವಳಿಯಲ್ಲಿ ತುಳು, ಕೊಂಕಣಿ, ಬ್ಯಾರಿ ಭಾಷೆ ಮಾತಾಡುವ ಸಾಹಿತಿಗಳಿರುವ ಭಾವೈಕ್ಯತೆಯ ಧ್ಯೇಯವಿರುವ ನಾಡು. ಎಲ್ಲರೂ ಒಂದೇ ಕುಟುಂಬ ಎಂಬಂತೆ ಬದುಕುವ ಸಾಮರಸ್ಯವಿರುವ ನಾಡಿಗೆ ಬಂದಿರುವುದು ಹರ್ಷ ತಂದಿದೆ ಎಂದು ಡಾ| ಮಹೇಶ್ ಜೋಷಿ ಹೇಳಿದರು. ಕನ್ನಡ ನುಡಿಗೆ ಸಾರ್ವಭೌಮ ಸ್ಥಾನ
ನವೀನ ಕಾಲಕ್ಕೆ ಅನುಗುಣವಾಗಿ ತಂತ್ರಜ್ಞಾನದ ಮೂಲಕ ಮಕ್ಕಳಿಗೆ ಸಾಹಿತ್ಯ ತಲುಪಿಸಬೇಕಿದೆ. ಕನ್ನಡವನ್ನು ಉಳಿಸುವ ಹೊಣೆ ಕೇವಲ ಸರಕಾರದ್ದು, ಸಾಹಿತ್ಯ ಪರಿಷತ್ ನದ್ದಾಗದೇ ನಮ್ಮೆಲ್ಲರದ್ದೂ ಆಗಬೇಕು. ಲಕ್ಷಾಂತರ ರೂ. ಖರ್ಚುಮಾಡಿ ಕಟ್ಟುವ ಮನೆಯಲ್ಲಿ ಪುಟ್ಟ ಗ್ರಂಥಾಲಯಕ್ಕೆ ಜಾಗ ನೀಡಿ. ನಾಡಿನಲ್ಲಿ ಕನ್ನಡ ನುಡಿಗೆ ಸಾರ್ವಭೌಮ ಸ್ಥಾನ ಸಿಗಲಿ ಎಂದು ಸರ್ವಾಧ್ಯಕ್ಷೆ ಹೇಮಾವತಿ ವೀ.ಹೆಗ್ಗಡೆ ಆಶಿಸಿದರು.