Advertisement

ಪ್ರಥಮ ದರ್ಜೆ ಕಾಲೇಜು ಕಟ್ಟಡ ಕಾಮಗಾರಿಗೆ ಚಾಲನೆ

05:06 PM Jul 17, 2021 | Team Udayavani |

ಚಾಮರಾಜನಗರ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿತಾಲೂಕಿನ ಭೋಗಾಪುರ, ಬಸವನಪುರ- ಕೆಲ್ಲಂಬಳ್ಳಿ ಗ್ರಾಮಸಂಪರ್ಕ ರಸ್ತೆಯಲ್ಲಿ26.62 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗುವ ಸರ್ಕಾರಿ ಪ್ರಥಮದರ್ಜೆ ಪದವಿಕಾಲೇಜು ಕಟ್ಟಡ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೂಮಿ ಪೂಜೆನೆರವೇರಿಸಿದರು.

Advertisement

ನಂತರ ಅವರು ಮಾತನಾಡಿ, ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆನೀಡಲಾಗುತ್ತಿದ್ದು, ಈಗಾಗಲೇ ಸರಕಾರಿ ಎಂಜಿನಿಯರಿಂಗ್‌ ಕಾಲೇಜು, ಸರಕಾರಿವೈದ್ಯಕೀಯ ಕಾಲೇಜು, ಸರಕಾರಿ ಪ್ರಥಮದರ್ಜೆ ಕಾಲೇಜು, ಕೃಷಿಕಾಲೇಜು,ಅಂಬೇಡ್ಕರ್‌ ಸ್ನಾತಕೋತ್ತರಕಾಲೇಜು ಸ್ಥಾಪನೆಯಾಗಿ ಗಡಿಜಿಲ್ಲೆಯ ವಿದ್ಯಾರ್ಥಿಗಳುಉನ್ನತ ಶಿಕ್ಷಣಪಡೆಯಲು ಸದವಕಾಶ ದೊರೆತಿದೆ ಎಂದರು.

ಇದೀಗ ಭೋಗಾಪುರದಲ್ಲಿ ಸರ್ವೇ ನಂ 55ರಲ್ಲಿ 4.03 ಎಕರೆ ನಿವೇಶನಲಭ್ಯವಾಗಿದ್ದು, ಭೋಜನಾಲಯ, ಬಾಲಕ, ಬಾಲಕಿಯರ ವಸತಿಕಟ್ಟಡ,ಶೌಚಾಲಯ, ಪ್ರಾಂಶುಪಾಲರ ಕೊಠಡಿ, ಪ್ರಯೋಗಾಲಯ, ಸಮುದಾಯಶೌಚಾಲಯ, ಉಗ್ರಾಣ, ಉಸ್ತುವಾರಿಅಧಿಕಾರಿಗಳಕೊಠಡಿನಿರ್ಮಿಸಲಾಗುವುದುಎಂದರು.

ಭೋಗಾಪುರ ಗ್ರಾಪಂ ಅಧ್ಯಕ್ಷೆ ಮಂಗಳಮ್ಮ, ಸದಸ್ಯರಾದ ಮಹೇಶ್‌,ಸತೀಶ್‌, ಮಾಧು, ಎಪಿಎಂಸಿ ಅಧ್ಯಕ್ಷ ನಾ, ಲೋಕೋಪಯೋಗಿ ಇಲಾಖೆ ಎಇಇನಾಗರಾಜನಾಯ್ಕ, ತಾಪಂ ಮಾಜಿಸದಸ್ಯ ಮಹಾಲಿಂಗು, ಕೆಲ್ಲಂಬಳ್ಳಿಸೋಮಶೇಖರ್‌, ಪ್ರದೀಪ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿ¨ರು.

Advertisement

Udayavani is now on Telegram. Click here to join our channel and stay updated with the latest news.

Next