Advertisement

ಉದ್ಯಾನವನ ಸಹಿತ ಕೆರೆ ನಿರ್ಮಾಣಕ್ಕೆ ಚಾಲನೆ

09:47 PM Jan 03, 2022 | Team Udayavani |

ಬಳ್ಳಾರಿ: ನಗರದ ಹೃದಯಭಾಗ ಜಿಲ್ಲಾ ಕ್ರೀಡಾಂಗಣ ಬಳಿ ಉದ್ಯಾನವನಸಹಿತ ಕೆರೆಯೊಂದನ್ನು ನಿರ್ಮಿಸಲಾಗುತ್ತಿದೆ. ಜಿಲ್ಲಾಡಳಿತದಿಂದ ನಿರ್ಮಾಣಗೊಳ್ಳುತ್ತಿರುವ ಈ ಕೆರೆಯಿಂದ ನಗರದ ಸೌಂದರ್ಯ ಹೆಚ್ಚುವುದರ ಜತೆಗೆ ಮಕ್ಕಳೊಂದಿಗೆ ವೀಕೆಂಡ್‌ ಕಳೆಯುವ ಪೋಷಕರಿಗೂ ಅನುಕೂಲವಾಗಲಿದೆ.

Advertisement

ಬಿಸಿಲು ಖ್ಯಾತಿಯ ಬಳ್ಳಾರಿ ನಗರದಲ್ಲಿ ಈಗಾಗಲೇ ಜಿಲ್ಲಾಡಳಿತದಿಂದ ಡಾ| ರಾಜ್‌ಕುಮಾರ್‌ಉದ್ಯಾನವನ, ನಗರೂರು ನಾರಾಯಣರಾವ್‌ ಉದ್ಯಾನವನ (ಕಾಗೆ ಪಾರ್ಕ್‌)ಗಳನ್ನು ನಿರ್ಮಿಸಲಾಗಿದೆ. ಯುವಕ-ಯುವತಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಕಾಣುವಈಉದ್ಯಾನವನಗಳು ಕುಟುಂಬದವರಿಂದ ದೂರ ಉಳಿದಿವೆ. ಡಾ| ರಾಜ್‌ಕುಮಾರ್‌ ಉದ್ಯಾನವನದಲ್ಲೂ ಸ್ವಾಭಾವಿಕವಾಗಿ ಕೆರೆಯಿದ್ದು, ಬೋಟಿಂಗ್‌ ವ್ಯವಸ್ಥೆಯೂ ಇದ್ದರೂ, ನಿರ್ವಹಣೆ ಕೊರತೆಯಿಂದಾಗಿ ಬಳಕೆಯಾಗುತ್ತಿಲ್ಲ. ಹಾಗಾಗಿ ಪೋಷಕರು, ಮಕ್ಕಳೊಂದಿಗೆ ಈ ಉದ್ಯಾನವನಗಳಿಗೆ ಹೋಗುವುದು ಒಂದಷ್ಟು ಕಡಿಮೆಯೇ ಆಗಿದ್ದು, ನಲ್ಲಚೆರವು ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಕೆರೆಯಲ್ಲಿ ವೀಕೆಂಡ್‌ ದಿನಗಳನ್ನು ಮಕ್ಕಳೊಂದಿಗೆ ಕಳೆಯಲು ಅನುಕೂಲವಾಗಲಿದೆ.

1.85ಕೋಟಿರೂ.ವೆಚ್ಚದಲ್ಲಿನಿರ್ಮಾಣ:ಜಿಲ್ಲಾಡಳಿತವು ಬೆಂಗಳೂರಿನ ಸ್ಯಾಂಕಿ ಟ್ಯಾಂಕಿ ಕೆರೆಮಾದರಿಯಲ್ಲಿ ಜಿಲ್ಲಾ ಖನಿಜ ನಿಧಿ ಯೋಜನೆಯಡಿ 1.85 ಕೋಟಿ ರೂ. ವೆಚ್ಚದಲ್ಲಿ ಉದ್ಯಾನವನ ‌ ಸಹಿತ ಕೆರೆಯನ್ನು ನಿರ್ಮಿಸಲಿದೆ. ನಿರ್ಮಿತಿ ಕೇಂದ್ರವು ಕಾಮಗಾರಿ ಕೈಗೆತ್ತಿಕೊಂಡಿದ್ದು, 1.85 ಕೋಟಿ ರೂ. ವೆಚ್ಚದಲ್ಲಿ 12 ಎಕರೆ ಪ್ರದೇಶದಲ್ಲಿ ಕೆರೆ ನಿರ್ಮಾಣಗೊಳ್ಳಲಿದೆ. ಕೆರೆ ಸುತ್ತಲೂ ಫೆನ್ಸಿಂಗ್‌ ಅಳವಡಿಸಿ, ವಾಕಿಂಗ್‌ ಪಾಥ್‌ ನಿರ್ಮಿಸಲಾಗುತ್ತದೆ.  ಜತೆಗೆ ಸುತ್ತಲೂ ವಿವಿಧ ರೀತಿಯ ಗಿಡಗಳನ್ನುಬೆಳೆಸಿ,ಮಕ್ಕಳಿಗಾಗಿಆಟದಸಲಕರಣೆಗಳನ್ನು ಅಳವಡಿಸಲಾಗುತ್ತದೆ. ಜನರನ್ನು ಆಕರ್ಷಿಸುವ ಕಾರಂಜಿ, ಚಿಕ್ಕದಾದ ಲೈಬ್ರರಿ ವ್ಯವಸ್ಥೆ ಮಾಡಲಾಗುñದೆ. ‌¤ ಈಗಾಗಲೇ ಕಾಮಗಾರಿ ಆರಂಭವಾಗಿದ್ದು, ಕೆರೆ ಬಂಡ್‌ ನಿರ್ಮಾಣ ಕಾರ್ಯ ಚಾಲನೆ ಪಡೆದುಕೊಂಡಿದೆ. ಕೆರೆ ಪ್ರದೇಶ ಎಂತಲೇ ಕರೆಯುವ ಈ ಕಪುಮಣ್ಣಿನ ಪ್ರದೇಶದಲ್ಲಿ ನೀರು ನಿಲ್ಲಲು ‌ ವೈಜಾನಿಕ ವಾಗಿಕ್ರಮಗಳನ್ನು ಕೈಗೊಳ್ಳಲಾಗಿದೆ.

ನಗರದ ಮಧ್ಯೆ ನಿರ್ಮಾಣವಾಗುತ್ತಿರುವಈಕೆರೆಯಿಂದ ನಗರದ ಜನರುಬೆಳಗ್ಗೆಮತ್ತು ಸಂಜೆಹೊತ್ತಲ್ಲಿ ವಾಯು ವಿಹಾರಕ್ಕೆ ಬರಲು ಮತ್ತು ಪೋಷಕರು ಮಕಳೊ‌ಂದಿಗೆ ವೀಕೆಂಡ್‌ ದಿನಗ ‌ಳನ್ನು ಕಳೆಯಲು ಅನುಕೂಲವಾಗಲಿದೆ. ವಿಜ್ಞಾನ ಭವನಕ್ಕೂ ಅನುಕೂಲ: ಕೆರೆ ನಿÊÞ‌ ìಣವಾಗುತ್ತಿರುವ ಪ್ರದೇಶದ ಪಕದಲ್ಲೇ ಉಪ ವಿಜ್ಞಾನ ಕೇಂದ್ರವಿದೆ. ಇದರಲ್ಲಿ ಮಾನವನ ವಿಕಾಸದಿಂದ ಹಿಡಿದು, ವನ್ಯಜೀವಿಗಳು, ಜಲಚರ ಪ್ರಾಣಿಗಳು, ಮಾನವ ದೇಹ ರಚನೆ, ಬೇಸಿಕ್‌ ವಿಜ್ಞಾನ ಸೇರಿ ಇನ್ನಿತರೆ ಮಾದರಿಗಳನ್ನು ಅಳವಡಿಸುವು¨ರ ‌ ಜತೆಗೆ ಮಾಹಿತಿಯೂ ಲಭ್ಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next