Advertisement

ಬಾಂದ್ರಾದ ಪುರುಷೋತ್ತಮ ಹೈಸ್ಕೂಲ್‌ ರಜತ ಮಹೋತ್ಸವ ಸಮಾರಂಭಕ್ಕೆ ಚಾಲನೆ

03:30 PM Apr 04, 2019 | Team Udayavani |

ಮುಂಬಯಿ: ತುಳು-ಕನ್ನಡಿಗರ ಸ್ಥಾಪಕತ್ವದ ಬಾಂದ್ರಾದ ಪುರುಷೋತ್ತಮ ಹೈಸ್ಕೂಲ್‌ ಇದರ ರಜತ ಮಹೋತ್ಸವ ಸಮಾರಂಭಕ್ಕೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಎ. 1ರಂದು ಚಾಲನೆ ನೀಡಲಾಯಿತು. ಶಾಲೆಯ ಸಂಸ್ಥಾಪಕ ಹಾಗೂ ಶಿಕ್ಷಣ ತಜ್ಞ ದಿ| ಲಯನ್‌ ಕೆ. ಬಿ. ಕೋಟ್ಯಾನ್‌ ಅವರ ಹುಟ್ಟುಹಬ್ಬದ ಅಂಗವಾಗಿ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆಯನ್ನು ಇದೇ ಸಂದರ್ಭದಲ್ಲಿ ಆಚರಿಸಲಾಯಿತು. ಸಂಸ್ಥೆಯ ಸಂಸ್ಥಾಪಕರು ಹಾಗೂ ಅತಿಥಿ-ಗಣ್ಯರು ದೀಪ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು.

Advertisement

ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರನ್ನು ಮತ್ತು ವಿವಿಧ ಕ್ಷೇತ್ರಗಳ ಸಾಧಕರನ್ನು ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು. ಅತಿಥಿಗಳಾಗಿ ಅನುಯೋಗ್‌ ವಿದ್ಯಾಲಯದ ಸಂಸ್ಥಾಪಕ ಸತೀಶ್‌ ಚಿಂದಾRರ್‌, ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ ಹುಸೇನ್‌ ದಾಲ್ವಾಯಿ, ಸಂಸ್ಥೆಯ ಹಳೆ ವಿದ್ಯಾರ್ಥಿ, ಶಿವಸೇನೆ ನಗರ ಸೇವಕ ಹಲೀಮ್‌ ಖಾನ್‌, ಬಿಜೆಪಿ ನಾರ್ಥ್ ಮುಂಬಯಿ ಜಿಲ್ಲಾಧ್ಯಕ್ಷ ಸುಹಾಸ್‌ ಆದಿವರ್ಕರ್‌, ಮಾಜಿ ನಗರ ಸೇವಕ ತ್ತೈಂಬಾಕ್‌ ಸರ್‌, ಶಿವಸೇನಾ ವಿಭಾಗೀಯ ಪ್ರಮುಖ ಪುಂಡಾಲಿಕ್‌ ಸಾವಮ್‌¤, ಸಿದ್ಧಿವಿನಾಯಕ ಮಂದಿರದ ಕೋಶಾಧಿಕಾರಿ ಸುಮನ್‌ ಗುವಾಸಿಸ್‌, ಜನ ಕಲ್ಯಾಣ್‌ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಸಂತೋಷ್‌ ಕೆಲ್ಕಾರ್‌ ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಸಂಸ್ಥೆಯ ವತಿಯಿಂದ ಅತಿಥಿ-ಗಣ್ಯರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಿ ಗೌರವಿಸಲಾಯಿತು. ಸಮಾರಂಭದಲ್ಲಿ ದಿ| ಕೆ. ಬಿ. ಕೋಟ್ಯಾನ್‌ ಅವರ ಪರಿವಾರ ಸದಸ್ಯರು, ಹಳೆ ವಿದ್ಯಾರ್ಥಿ ಸಂಘ, ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಪ್ರಾರಂಭದಲ್ಲಿ ವಿದ್ಯಾರ್ಥಿಗಳಿಂದ ಭಜನೆ, ಸಂಗೀತ, ನೃತ್ಯ ಇನ್ನಿತರ ವಿವಿಧ ವಿನೋದಾವಳಿಗಳು ಪ್ರದರ್ಶನಗೊಂಡಿತು. ಸಂಸ್ಥೆಯ ವಿದ್ಯಾರ್ಥಿಗಳು-ಪಾಲಕರು, ಶಿಕ್ಷಣ ಪ್ರೇಮಿಗಳು, ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next