Advertisement

“ನದಿ ಮೂಲ ಉಳಿದರೆ ಮನುಕುಲದ ಉಳಿವು’

12:55 AM Oct 24, 2021 | Team Udayavani |

ಮಡಿಕೇರಿ: ಜೀವನದಿ ಕಾವೇರಿಯನ್ನು ತಲಕಾವೇರಿಯಿಂದ ಪೂಂಪ್‌ಹಾರ್‌ ವರೆಗೆ ಸ್ವಚ್ಛವಾಗಿರಿಸಿ ಕೊಳ್ಳುವ ಮೂಲಕ ಸಂರಕ್ಷಿಸುವ ಸಂಕಲ್ಪದೊಂದಿಗೆ 11ನೇ ವರ್ಷದ ಕಾವೇರಿ ನದಿ ಜಾಗೃತಿ ಯಾತ್ರೆ ಶನಿವಾರ ಸಾಧು ಸಂತರ ನೇತೃತ್ವದಲ್ಲಿ ವಿಧ್ಯುಕ್ತವಾಗಿ ಆರಂಭಗೊಂಡಿತು.

Advertisement

ಅಖಿಲ ಭಾರತ ಸಂನ್ಯಾಸಿ ಸಂಘದ ಉಪಾಧ್ಯಕ್ಷ ರಮಾನಂದ ಅವರ ಉಪಸ್ಥಿತಿಯಲ್ಲಿ, ಕಾವೇರಿ ಸ್ವಚ್ಛತಾ ಆಂದೋಲನ ಸಮಿತಿಯ ನೇತೃತ್ವದಲ್ಲಿ ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಯಾತ್ರೆಗೆ ಚಾಲನೆ ನೀಡಿದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ನದಿ ಮೂಲಗಳು ಉಳಿದರೆ ಮನುಕುಲ ಉಳಿದಂತೆ. ನದಿಗಳನ್ನು, ಜಲ ಮೂಲವನ್ನು ನಮ್ಮ ಪೂರ್ವಜರು ಧಾರ್ಮಿಕ ಭಾವನೆಯಿಂದ ಕಾಣುತ್ತಿದ್ದು, ಇದನ್ನು ಇಂದಿನ ಯುವ ಪೀಳಿಗೆ ಮನಗಾಣಬೇಕೆಂದು ಕಿವಿ ಮಾತು ಹೇಳಿದರು. ನದಿ ಸ್ವಚ್ಛತೆ ಬಗ್ಗೆ ವಿಧಾನ ಸಭೆ ಅಧಿವೇಶನದಲ್ಲಿ ಪ್ರಸ್ತಾವ ಮಾಡಿದ್ದು ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಮತ್ತೂಮ್ಮೆ ಸರಕಾರದ ಗಮನ ಸೆಳೆದು ನದಿ ಸ್ವತ್ಛತೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ರಥಕ್ಕೆ ಚಾಲನೆ ನೀಡಿ, ಗಂಗಾನದಿಯ ಸ್ವಚ್ಛತೆ ಮಾದರಿಯಲ್ಲಿ ಕಾವೇರಿ ನದಿ ಸ್ವತ್ಛತಾ ಕಾರ್ಯವಾಗಬೇಕಿದ್ದು, ನದಿಗಳ ಎರಡು ಬದಿ ಒತ್ತುವರಿ ತೆರವು ಮಾಡಿ ಗಿಡ ನೆಟ್ಟು ಬೆಳೆಸುವ ಕಾರ್ಯವಾಗಬೇಕು ಎಂದು ತಿಳಿಸಿದರು.

ಇದನ್ನೂ ಓದಿ:ನಮ್ಮ ಅವಧಿಯಲ್ಲಿ ಹಾನಗಲ್ಲ ಕ್ಷೇತ್ರಕ್ಕೆ 2400 ಕೋಟಿ ಕೊಟ್ಟಿದ್ದೇನೆ

Advertisement

ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕಾವೇರಿ ಸ್ವಚ್ಛತಾ ಆಂದೋಲನದ ಪ್ರಮುಖರಾದ ಎಂ.ಎನ್‌. ಚಂದ್ರಮೋಹನ್‌, ನಮಾಮಿ ಗಂಗೆ ಸಂಚಾಲಕರಾದ ರೀನಾ ಪ್ರಕಾಶ್‌ ರೀನಾ ಪ್ರಕಾಶ್‌, ಚೆಯ್ಯಂಡ ಸತ್ಯ, ತಲಕಾವೇರಿ ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ, ವಿವಿಧ ಮಠಾಧೀಶರು, ಮುಡಾ ಅಧ್ಯಕ್ಷ ರಮೇಶ್‌ ಹೊಳ್ಳ ಉಪಸ್ಥಿತರಿದ್ದರು.

ಕುಶಾಲನಗರದಲ್ಲಿ ಸಂಜೆ ಕಾವೇರಿಗೆ ವಿಶೇಷ ಆರತಿ ಕಾರ್ಯಕ್ರಮ ನಡೆಯಿತು.

ನ. 11ರಂದು ಸಮಾರೋಪ
ಯಾತ್ರೆಯು ಕೂಡಿಗೆ, ಕಣಿವೆ ಮೂಲಕ ಜಿಲ್ಲೆಯ ಗಡಿ ದಾಟಿ ರಾಮನಾಥಪುರದತ್ತ ಸಾಗಲಿದೆ. ತಂಡವು ರಾಮನಾಥಪುರದಲ್ಲಿ ವಾಸ್ತವ್ಯ ಹೂಡಿ ಅ. 24ರಂದು ಬೆಳಗ್ಗೆ ಶ್ರೀರಂಗಪಟ್ಟಣ ತಲುಪಿ ರಾಮನಗರ ಮಾರ್ಗವಾಗಿ ತಮಿಳುನಾಡಿನ ಕಡೆಗೆ ಸಾಗಿ ನವೆಂಬರ್‌ 11ರಂದು ಪೂಂಪ್‌ಹಾರ್‌ನಲ್ಲಿ ಕಾವೇರಿ ತೀರ್ಥವನ್ನು ಬಂಗಾಲ ಕೊಲ್ಲಿಗೆ ವಿಸರ್ಜಿಸುವ ಮೂಲಕ ಸಂಪನ್ನಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next