ಶಿರ್ವ : ರಿಲಯೆನ್ಸ್ ಫೌಂಡೇಶನ್ ಹಾಗೂ ಶಿರ್ವ ಸಂತ ಮೇರಿ ಕಾಲೇಜಿನ ಘಟಕಗಳಾದ ಎನ್ ಸಿಸಿ, ಎನ್ನೆಸ್ಸೆಸ್, ಯೂತ್ ರೆಡ್ ಕ್ರಾಸ್, ರೋವರ್ಸ್ -ರೇಂಜರ್ಸ್‌ಮತ್ತು ಸ್ನಾತಕೋತ್ತರ ವಿಭಾಗದ ವತಿಯಿಂದ 10000 ಮಾಸ್ಕ್ ವಿತರಣೆ ಕಾರ್ಯಕ್ರಮದ ಚಾಲನೆ ಮತ್ತು ಗ್ರಾ.ಪಂ.ಗೆ ಮಾಸ್ಕ್ ಹಸ್ತಾಂತರ ಕಾರ್ಯಕ್ರಮವು ಶಿರ್ವ ಗ್ರಾ.ಪಂ. ವಠಾರದಲ್ಲಿ ಜು. 2 ರಂದು ನಡೆಯಿತು.
ಮಾಸ್ಕ್ ವಿತರಣೆಗೆ ಚಾಲನೆ ನೀಡಿದ ಶಿರ್ವ ಗ್ರಾ.ಪಂ. ಅಧ್ಯಕ್ಷ ಕೆ.ಆರ್.ಪಾಟ್ಕರ್ ಮಾತನಾಡಿ ಕೊರೊನಾ ಅನ್ ಲಾಕ್ ಆದ ಬಳಿಕ ಸಾರ್ವಜನಿಕ ವಲಯದಲ್ಲಿ ಮಾಸ್ಕ್ ಕಡಿಮೆಯಾಗುತ್ತಿದ್ದು, ನಾಗರಿಕರು ತಮ್ಮ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಮಾಸ್ಕ್ ಧರಿಸುವುದನ್ನು ಮರೆಯಬಾರದು. ಈ ನಿಟ್ಟಿನಲ್ಲಿ ಕಾಲೇಜು ವಿದ್ಯಾರ್ಥಿಗಳು ಜನರಲ್ಲಿ ಜಾಗೃತಿ ಮೂಡಿಸಿ ಶಿರ್ವ ಗ್ರಾಮವನ್ನು ಕೊರೊನಾ ಮುಕ್ತ ಗ್ರಾಮವನ್ನಾಗಿ ಮಾಡಲು ಪ್ರಯತ್ನಿಸಬೇಕಾಗಿದೆ ಎಂದರು.
ಕಾಲೇಜಿನ ಪರವಾಗಿ ಮಾಸ್ಕ್ ಅನ್ನು ಶಿರ್ವ ಗ್ರಾ.ಪಂ.ಗೆ ಹಸ್ತಾಂತರಿಸಿದ ಶಿರ್ವ ಆರೋಗ್ಯ ಮಾತಾ ದೇವಾಲಯದ ಸಹಾಯಕ ಧರ್ಮಗುರು ರೆ|ಫಾ| ರೊಲ್ವಿನ್ ಅರಾನ್ಹಾ ಮಾತನಾಡಿ ಕೊರೊನಾ ಸಂದಿಗ್ಧ ಸಮಯದಲ್ಲಿ ರಿಲಯೆನ್ಸ್ ಫೌಂಡೇಶನ್ 10000 ಮಾಸ್ಕ್ ಗಳನ್ನು ನೀಡಿದ್ದು, ವಿದ್ಯಾರ್ಥಿಗಳು ಮಾಸ್ಕ್ ಧರಿಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಕೊರೊನಾ ಹೊಡೆದೊಡಿಸುವಲ್ಲಿ ಶ್ರಮಿಸಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ನಾಯಕ್, ಗ್ರಾ.ಪಂ.ಸದಸ್ಯ ಹಸನಬ್ಬ ಶೇಖ್, ಕಾಲೇಜಿನ ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ಕೆ . ಪ್ರವೀಣ್ ಕುಮಾರ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿರ್ದೇಶಕಿ ಯಶೋದಾ, ಎನ್‌ಎಸ್‌ಎಸ್ ಅಧಿಕಾರಿ ಪ್ರೇಮನಾಥ್,ಯೂತ್ ರೆಡ್ ಕ್ರಾಸ್ ಸಂಯೋಜಕ ಮುರಳಿ, ರೋವರ್ಸ್-ರೇಂಜರ್ಸ್ ಲೀಡರ್ ಗಳಾದ ಪ್ರಕಾಶ್,ಸಂಗೀತಾ ಪೂಜಾರಿ,ಬೋಧಕ,ಬೋಧಕೇತರ ಸಿಬಂದಿ,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸ್ನಾತಕೋತ್ತರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಲಕ್ಷ್ಮೀ ಆಚಾರ್ಯ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸ್ ವಂದಿಸಿದರು. ಬಳಿಕ ಕಾಲೇಜಿನ ವಿವಿಧ ಘಟಕಗಳ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕ ವೃಂದ ಪರಿಸರದ ಮಸೀದಿ,ದೇವಸ್ಥಾನಗಳು,ಅಂಚೆ ಕಚೇರಿ, ಶಿರ್ವ ಸಮುದಾಯ ಆರೋಗ್ಯ ಕೇಂದ್ರ,ಸಂತ ಮೇರಿ ಸಮೂಹ ವಿದ್ಯಾ ಸಂಸ್ಥೆಗಳು,ಪೊಲೀಸ್ ಠಾಣೆ ಮತ್ತು ಸಾರ್ವಜನಿಕರಿಗೆ ಮಾಸ್ಕ್ಗಳನ್ನು ವಿತರಿಸಿದರು.