ನಾಮಪತ್ರ ಸಲ್ಲಿಸಲು ಮಾ.27 ಕೊನೆಯ ದಿನವಾಗಿದೆ. ನಾಮ ಪತ್ರ ಪರಿಶೀಲನೆ ಮಾ.28ಕ್ಕೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಮಾ.30 ಕೊನೆಯ ದಿನವಾಗಿದೆ. ಆದರೆ ಹಬ್ಬದ ಹಿನ್ನೆಲೆಯಲ್ಲಿ ಬಿಹಾರದಲ್ಲಿ ದಿನಾಂಕಗಳು ಪರಿಷ್ಕೃತ ಗೊಂಡಿವೆ. ನಾಮಪತ್ರ ಸಲ್ಲಿಸಲು ಮಾ.28 ಕೊನೆಯ ದಿನವಾಗಿದ್ದರೆ, ನಾಮಪತ್ರ ಪರಿಶೀಲನೆ ಮಾ.30ರಂದು ನಡೆಯಲಿದೆ. ನಾಮ ಪತ್ರ ವಾಪಸ್ ಪಡೆಯಲು ಎಪ್ರಿಲ್ 2 ಕೊನೆಯ ದಿನವಾಗಿದೆ.
Advertisement
ಎಲ್ಲೆಲ್ಲಿ ಚುನಾವಣೆ?ಮೊದಲ ಹಂತದಲ್ಲಿ ಅರುಣಾಚಲ(2), ಅಸ್ಸಾಂ(5), ಬಿಹಾರ(4), ಛತ್ತೀಸ್‌ಗಢ(1), ಮಧ್ಯ ಪ್ರದೇಶ(2), ಮಿಜೋರಾಂ (1), ನಾಗಾಲ್ಯಾಂಡ್(1), ರಾಜಸ್ಥಾನ(12), ಸಿಕ್ಕಿಂ(1), ತಮಿಳುನಾಡು(39), ತ್ರಿಪುರಾ(1), ಉತ್ತರ ಪ್ರದೇಶ(8), ಉತ್ತರಾಖಂಡ(5), ಪಶ್ಚಿಮ ಬಂಗಾಲ(3) ರಾಜ್ಯಗಳಲ್ಲಿ ಮತದಾನ ನಡೆಯಲಿದೆ.
ಇದೇ ವೇಳೆ, ಅರುಣಾಚಲ ಮತ್ತು ಸಿಕ್ಕಿಂ ವಿಧಾನಸಭೆ ಚುನಾವಣೆಗಾಗಿ ರಾಜ್ಯ ಚುನಾವಣ ಕಚೇರಿಯು ಪ್ರತ್ಯೇಕ ಅಧಿಸೂಚನೆ ಹೊರಡಿಸಿದೆ. ಅರುಣಾಚಲ ಪ್ರದೇಶ 60 ವಿಧಾನಸಭೆ ಕ್ಷೇತ್ರಗಳು ಮತ್ತು 2 ಲೋಕಸಭೆ ಹಾಗೂ ಸಿಕ್ಕಿಂನ 32 ವಿಧಾನಸಭೆ ಕ್ಷೇತ್ರಗಳಿಗೆ ಎ.19ರಂದು ಮತದಾನ ನಡೆಯಲಿದೆ.