ಶಿರ್ವ: ಹಡಿಲು ಭೂಮಿಯಲ್ಲಿ ಬೆಳೆದ ಫಸಲನ್ನು ಚರ್ಚ್‌ವ್ಯಾಪ್ತಿಯ ಆರ್ಥಿಕ ಸಂಕಷ್ಟದಲ್ಲಿರುವವರಿಗೆ ವಿತರಿಸುವ ಸಲುವಾಗಿ ಕೆಥೋಲಿಕ್ ಸಭಾ ಉಡುಪಿಯ ಶಿರ್ವ ಘಟಕ ಮತ್ತು ಸ್ತ್ರಿಸಂಘಟನೆ,ಶಿರ್ವದ ವತಿಯಿಂದ ಭತ್ತದ ಕೃಷಿ ನಾಟಿ ಕಾರ್ಯಕ್ರಮವು ಶಿರ್ವ ನ್ಯಾರ್ಮ ಬೈಲಿನಲ್ಲಿ ಶನಿವಾರ ನಡೆಯಿತು.
ಹಡಿಲು ಭೂಮಿ ಭತ್ತದ ಕೃಷಿ ನಾಟಿ ಕಾರ್ಯಕ್ಕೆ ಶಿರ್ವ ಗ್ರಾ.ಪಂ. ಅಧ್ಯಕ್ಷ ಕೆ.ಆರ್. ಪಾಟ್ಕರ್ ಚಾಲನೆ ನೀಡಿ ಮಾತನಾಡಿ ಮಕ್ಕಳು ಭತ್ತದ ನೇಜಿ ನಡುವ ಕಾರ್ಯಕ್ರಮವನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡುವಂತಾಗಿದ್ದು, ಶಿರ್ವ ಪರಿಸರದಲ್ಲಿ ಹಡಿಲು ಭೂಮಿಯಲ್ಲಿ ಭತ್ತದ ಕೃಷಿ ಮಾಡಿ ಬೆಳೆದ ಫಸಲನ್ನು ಬಡಬಗ್ಗರಿಗೆ ವಿತರಿಸುವ ಕೆಥೋಲಿಕ್ ಸಭಾ ಶಿರ್ವ ಘಟಕದ ಮಾದರಿ ಕಾರ್ಯ ಇತರರಿಗೆ ಪ್ರೇರಣೆಯಾಗಲಿ ಎಂದು ಹೇಳಿದರು.
ಶಿರ್ವ ಆರೋಗ್ಯ ಮಾತಾ ದೇವಾಲಯದ ಸಹಾಯಕ ಧರ್ಮಗುರು ರೆ|ಫಾ| ರೊಲ್ವಿನ್ ಅರಾನ್ಹಾ ಪ್ರಾರ್ಥನಾ ವಿಧಿ ನೆರವೇರಿಸಿದರು. ಕೆಥೋಲಿಕ್ ಸಭಾ ಉಡುಪಿ ಕೇಂದ್ರ ಘಟಕದ ಅಧ್ಯಕ್ಷೆ ಮೇರಿ ಡಿ‡ ಸೋಜಾ ಶುಭ ಹಾರೈಸಿದರು.
ಶಿರ್ವ ಆರೋಗ್ಯ ಮಾತಾ ದೇವಾಲಯದ ಸಹಾಯಕ ಧರ್ಮಗುರು ರೆ|ಫಾ| ರೋಹನ್ ಡಯಾಸ್, ಶಿರ್ವ ಗ್ರಾ.ಪಂ. ಉಪಾಧ್ಯಕ್ಷೆ ಗ್ರೇಸಿ ಕಾಡೋìಜಾ,ಮಾಜಿ ಜಿ.ಪಂ. ಸದಸ್ಯ ವಿಲ್ಸನ್ ರೊಡ್ರಿಗಸ್,ಸ್ವಾಕ್ ಸಂಘಟನೆಯ ಶಿರ್ವ ಪ್ರತಿನಿಧಿ ಮೆಲ್ವಿನ್ ಅರಾನ್ಹಾ,ಚರ್ಚ್ ಆರ್ಥಿಕ ಮಂಡಳಿಯ ಸದಸ್ಯರು,ಶಿರ್ವ ಗ್ರಾ.ಪಂ. ಸದಸ್ಯರು, ಕೆಥೋಲಿಕ್ ಸಭಾ ಶಿರ್ವ ಘಟಕ ಮತ್ತು ಸ್ತ್ರಿಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.
ಕೆಥೋಲಿಕ್ ಸಭಾ ಶಿರ್ವ ಘಟಕದ ಅಧ್ಯಕ್ಷ ಜೆರಾಲ್ಡ್ ರೊಡ್ರಿಗಸ್ ಸ್ವಾಗತಿಸಿದರು. ಶಿಕ್ಷಕ ಗಿಲ್ಬರ್ಟ್ ಪಿಂಟೋ ನಿರೂಪಿಸಿ, ಕಾರ್ಯದರ್ಶಿ ಅಲ್ಫೋನ್ಸ್ ಫೆರ್ನಾಂಡಿಸ್ ವಂದಿಸಿದರು.