ಬೆಂಗಳೂರು: ರಾಜ್ಯಾದ್ಯಂತ ಕೋವಿಡ್ ಲಸಿಕೆ ವಿತರಣೆ ಅಭಿಯಾನಕ್ಕೆ ಚಾಲನೆ ದೊರೆತಿದೆ. ಬೆಳಗ್ಗೆ 10.30ಕ್ಕೆ ರಾಜ್ಯದ 243 ಆರೋಗ್ಯ ಕೇಂದ್ರಗಳಲ್ಲಿ ಅಭಿಯಾನ ಆರಂಭವಾಗಿದೆ.
ಮೊದಲು ಸ್ವಚ್ಛತಾ ಸಿಬ್ಬಂದಿ ಲಸಿಕೆ ಪಡೆದಿದ್ದು, ಬಳಿಕ ಆರೋಗ್ಯ ಸಿಬ್ಬಂದಿ ಪಡೆಯುತ್ತಿದ್ದಾರೆ. ಪ್ರತಿ ಆರೋಗ್ಯ ಕೆಂದ್ರಕ್ಕೆ ತಲಾ 100 ರಂತೆ ಒಟ್ಟು 2,300 ಆರೋಗ್ಯ ಸಿಬ್ಬಂದಿ ಲಸಿಕೆ ಪಡೆಯಲಿದ್ದಾರೆ. ಲಸಿಕೆ ಪಡೆದವರಿಗೆ ಗುಲಾಬಿ ಹೂ ನೀಡಿ ಸಿಎಂ ಶುಭಾಶಯ ತಿಳಿಸಿದರು.
ಲಸಿಕೆ ಅಭಿಯಾನ ಉದ್ಘಾಟನಾ ರಾಜ್ಯಮಟ್ಟದ ಕಾರ್ಯಕ್ರಮ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ನಡೆಯುತ್ತಿದ್ದು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಭಾಗವಹಿಸಿದ್ದಾರೆ.
ಕೇಂದ್ರದ ಕಾರ್ಯಕ್ರಮ ನೇರಪ್ರಸಾರ ಹಿನ್ನೆಲೆ ಪ್ರಧಾನಿ ಮೋದಿ ಭಾಷಣ ಆಲಿಸುತ್ತಿದ್ದು, ಬಳಿಕ ಸಿಬ್ಬಂದಿಗೆ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.
ಈ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಾದ ಮಣಿಪಾಲ್ ಆಸ್ಪತ್ರೆಗಳ ಅಧ್ಯಕ್ಷ ಡಾ.ಸುದರ್ಶನ್ ಬಲ್ಲಾಳ್, ಕೊರೊನಾ ನಿರ್ವಹಣೆ ತಜ್ಞರ ಸಲಹಾ ಸಮಿತಿ ಮುಖ್ಯಸ್ಥ ಡಾ.ಎಂ.ಕೆ. ಸುದರ್ಶನ್ ಸೇರಿದಂತೆ ಹಲವರು ಲಸಿಕೆ ಪಡೆಯಲಿದ್ದಾರೆ. ನಿಮ್ಹಾನ್ಸ್ ನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ವೈರಾಣು ತಜ್ಞ, ತಜ್ಞರ ಸಲಹಾ ಸಮಿತಿ ಸದಸ್ಯ ಡಾ.ವಿ.ರವಿ ಲಸಿಕೆ ಪಡೆಯುತ್ತಿದ್ದಾರೆ.
ಕೆಸಿ ಜನರಲ್ ನಲ್ಲಿ ಲಸಿಕೆ ಅಭಿಯಾನಕ್ಕೆ ಚಾಲನೆ
ಲಸಿಕೆ ವಿತರಣೆ ಅಭಿಯಾನ ಸಂದರ್ಭದಲ್ಲಿ ಕೊಪ್ಪಳದಲ್ಲಿ ಕಂಡುಬಂದ ದೃಶ್ಯ
ಲಸಿಕೆ ಅಭಿಯಾನದಲ್ಲಿ ಸೆಲ್ಫಿ ಸಂಭ್ರಮ
ಬೆಂಗಳೂರು: ಧೈರ್ಯವಾಗಿ ಕೋವಿಡ್ ಲಸಿಕೆ ತೆಗೆದುಕೊಳ್ಳಿ. ನಾನು ಮೊದಲು ಲಸಿಕೆ ತೆಗೆದುಕೊಂಡಿದ್ದು ಹೆಮ್ಮೆಇದೆ. ನಾನು ಲಸಿಕೆ ತೆಗೆದುಕೊಂಡಿದ್ದು ನೋಡಿ ಉಳಿದವರು ಸಹ ಲಸಿಕೆ ತೆಗೆದುಕೊಳ್ಳಲಿದ್ದಾರೆ ನಗರದಲ್ಲಿ ಮೊದಲ ಕೋವಿಡ್ ಲಸಿಕೆ ಪಡೆದ ಚಂದ್ರಶೇಖರ್ ರಾವ್ ಹೇಳಿಕೆ ನೀಡಿದ್ದಾರೆ.
ಅಭಿಯಾನಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ