Advertisement

ಬಸ್‌ ತಂಗುದಾಣದಲ್ಲಿ ಕುಡಿಯುವ ನೀರಿನ ಯೋಜನೆಗೆ ಚಾಲನೆ

11:39 AM May 29, 2022 | Team Udayavani |

ಬಂಟ್ಸ್‌ಹಾಸ್ಟೆಲ್: ಬದಲಾಗುತ್ತಿರುವ ಮಂಗಳೂರಿಗೆ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಆಟೋಮೊಬೈಲ್‌ ಆ್ಯಂಡ್‌ ಟಯರ್‌ ಡೀಲರ್ ಅಸೋಸಿಯೇಶನ್‌ ವತಿಯಿಂದ ಮಂಗ ಳೂರು ಪಾಲಿಕೆ ಸಹಕಾರದೊಂದಿಗೆ ನಗರದ ಐದು ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದು ಶಾಸಕ ಡಿ. ವೇದವ್ಯಾಸ ಕಾಮತ್‌ ಹೇಳಿದರು.

Advertisement

ದ.ಕ. ಆಟೋಮೊಬೈಲ್‌ ಆ್ಯಂಡ್‌ ಟಯರ್‌ ಡೀಲರ್ ಅಸೋಸಿಯೇಶನ್‌ ವತಿ ಯಿಂದ ಮಹಾನಗರ ಪಾಲಿಕೆ ಸಹಯೋಗ ದೊಂದಿಗೆ ಬಂಟ್ಸ್‌ಹಾಸ್ಟೆಲ್‌ ಬಸ್‌ ತಂಗು ದಾಣದಲ್ಲಿ ನಿರ್ಮಾಣಗೊಂಡ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ನಗರ ಬೆಳೆಯುತ್ತಿದ್ದು, ದಿನನಿತ್ಯ ನೂರಾರು ಮಂದಿ ಸಿಟಿಗೆ ಆಗಮಿಸುತ್ತಿದ್ದಾರೆ. ಈ ವೇಳೆ ಕುಡಿಯುವ ನೀರಿಗಾಗಿ ಹಣ ಕೊಟ್ಟು ನೀರು ಪಡೆಯಬೇಕಾದ ಪರಿಸ್ಥಿತಿ ಇದೆ. ಹೀಗಿದ್ದಾಗ ನಗರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಆರಂಭ ಉತ್ತಮ ನಿರ್ಧಾರ. ಈ ನಿಟ್ಟಿನಲ್ಲಿ ಅಸೋಸಿಯೇಶನ್‌ ಪ್ರಮುಖರು ಪಾಲಿಕೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಇದೇ ಪ್ರೇರಣೆ ಪಡೆದು ಈ ರೀತಿಯ ಉತ್ತಮ ಕಾರ್ಯಗಳಲ್ಲಿ ಕೈಜೋಡಿಸಲು ಮತ್ತಷ್ಟು ಸಂಘ – ಸಂಸ್ಥೆ ಗಳು ಮುಂದೆ ಬರಬೇಕಾಗಿದೆ. ಮುಂದಿನ ದಿನಗಳಲ್ಲಿ ನಗರದ ಮತ್ತಷ್ಟು ಬಸ್‌ ತಂಗುದಾಣವನ್ನು ಗುರುತಿಸಿ ಪಾಲಿಕೆ ಸಹಕಾರ ದೊಂದಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ನೀರಿನ ಘಟಕ ಸ್ಥಾಪನೆಗೆ ಒತ್ತು

ಮೇಯರ್‌ ಪ್ರೇಮಾನಂದ ಶೆಟ್ಟಿ ಮಾತನಾಡಿ, ಉದಯವಾಣಿ ಸುದಿನದಲ್ಲಿ ಪ್ರಕಟಗೊಂಡ ವರದಿಯಂತೆ ನಗರದ ಬಸ್‌ ತಂಗುದಾಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಒತ್ತು ನೀಡಲಾಗಿದೆ. ಘಟಕ ಸ್ಥಾಪನೆ ಮತ್ತು ನಿರ್ವಹಣೆಯ ಜವಾ ಬ್ದಾರಿಯನ್ನು ದ.ಕ. ಆಟೋಮೊಬೈಲ್‌ ಆ್ಯಂಡ್‌ ಟಯರ್‌ ಡೀಲರ್ ಅಸೋಸಿಯೇಶನ್‌ ಮುಂದೆ ಬಂದಿದ್ದು, ನಗರದ ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದರು.

Advertisement

ಸ್ಥಳೀಯ ಮನಪಾ ಸದಸ್ಯ ಕದ್ರಿ ಮನೋಹರ ಶೆಟ್ಟಿ, ದ.ಕ. ಆಟೋಮೊಬೈಲ್‌ ಆ್ಯಂಡ್‌ ಟಯರ್‌ ಡೀಲರ್‌ ಅಸೋಸಿಯೇಶನ್‌ ಅಧ್ಯಕ್ಷ ಕಸ್ತೂರಿ ಪ್ರಭಾಕರ ಪೈ, ಕೋಶಾಧಿಕಾರಿ ಶಶಿಧರ ಪೈ ಮಾರೂರು, ಕಾರ್ಯದರ್ಶಿ ವಿಲಾಸ್‌ ಕುಮಾರ್‌, ಸಹ ಕಾರ್ಯದರ್ಶಿ ಆತ್ಮಿಕಾ ಅಮೀನ್‌, ಪದಾಧಿಕಾರಿಗಳಾದ ರತ್ನಾಕರ ಪೈ, ಲಕ್ಷ್ಮೀನಾರಾಯಣ ನಾಯಕ್‌, ಕಿಶೋರ್‌ ರಾವ್‌ ಆರೂರು, ಸಂತೋಷ್‌ ರೋಡ್ರಿಗಸ್‌ ಮತ್ತಿತರರಿದ್ದರು.

ಸುದಿನ ವರದಿಗೆ ಸ್ಪಂದನೆ

‘ಬಸ್‌ ತಂಗುದಾಣಗಳಲ್ಲಿ ನೆರಳಿದೆ- ನೀರಿರಲಿ’ ಎಂಬ ಶೀರ್ಷಿಕೆಯೊಂದಿಗೆ ಉದಯವಾಣಿ ‘ಸುದಿನ’ ಎ. 8ರಂದು ವಿಶೇಷ ವರದಿಯನ್ನು ಪ್ರಕಟಿಸಿತ್ತು. ನಗರದ ವಿವಿಧ ಬಸ್‌ ತಂಗುದಾಣಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಅಳವಡಿಸಬೇಕು ಎಂಬ ನೆಲೆಯಲ್ಲಿ ವರದಿ ಪ್ರಕಟವಾಗಿತ್ತು. ದ.ಕ. ಆಟೋಮೊಬೈಲ್‌ ಆ್ಯಂಡ್‌ ಟಯರ್‌ ಡೀಲರ್ ಅಸೋಸಿಯೇಶನ್‌ ನೇತೃತ್ವದಲ್ಲಿ ಮಹಾನಗರ ಪಾಲಿಕೆಯ ಸಹಕಾರದಿಂದ ಲೇಡಿಗೋಶನ್‌ ಮುಂಭಾಗದ ಬಸ್‌ನಿಲ್ದಾಣ, ಹಂಪನಕಟ್ಟೆ ವಿ.ವಿ. ಕಾಲೇಜಿನ ಮುಂಭಾಗ, ಬಂಟ್ಸ್‌ಹಾಸ್ಟೆಲ್‌ ಬಸ್‌ ನಿಲ್ದಾಣ, ಎಂ.ಜಿ. ರಸ್ತೆಯ ಟಿಎಂಎ ಪೈ ಸಭಾಂಗಣ ಮುಂಭಾಗ, ಪಾಲಿಕೆ ಕಚೇರಿ ಮುಂಭಾಗ ಈ ವ್ಯವಸ್ಥೆಯನ್ನು ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next