Advertisement

ಅರಿವು ಆಚಾರ ಸಂಕಲ್ಪ ಯಾತ್ರೆಗೆ ಚಾಲನೆ

05:32 PM Jan 29, 2021 | Team Udayavani |

ಬಸವಕಲ್ಯಾಣ: ಮನುಷ್ಯನ ಜೀವನದಲ್ಲಿ ಅಂತರಂಗ ಅರಿವು ಜೊತೆಗೆ ಆಚಾರ-ವಿಚಾರಗಳು ಉತ್ತಮ ವಾಗಿರುವುದು ಇಂದಿನ ಕಾಲದಲ್ಲಿ ಬಹಳ ಮುಖ್ಯವಾಗಿದೆ ಎಂದು ಬಸವ ಮಹಾಮನೆ ಶ್ರೀ ಸಿದ್ಧರಾಮ ಶರಣರು ಬೆಲ್ದಾಳ ಹೇಳಿದರು. ನಗರದ ಅರಿವಿನ ಮನೆ ಆವರಣದಲ್ಲಿ ಹಮ್ಮಿಕೊಂಡ ಅರಿವು ಆಚಾರ ಸಂಕಲ್ಪ ಯಾತ್ರೆಯ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಮಠಾಧಿಧೀಶರು ರಚನಾತ್ಮಕ ಕಾರ್ಯದಲ್ಲಿ ತೊಡಗಿಸಿ ಕೊಂಡು ಶಾಂತಿ, ಸುವ್ಯವಸ್ಥೆಯ ಸುಂದರ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಬೇಕು. ಬಸವಪ್ರಭು ಸ್ವಾಮೀಜಿ ಇದಕ್ಕಾಗಿ ಸಂಕಲ್ಪ ಯಾತ್ರೆ ಆರಂಭಿಸಿರುವುದು ಶ್ಲಾಘನೀಯ ಎಂದರು. ಬಸವ ಮಹಾಮನೆ ಬಸವಪ್ರಭು ಸ್ವಾಮೀಜಿ ಯಾತ್ರೆ ನೇತೃತ್ವ ವಹಿಸಿ ಮಾತನಾಡಿ, ಸ್ವಸ್ಥ, ಸದೃಢ ಸಮಾಜದ ಬಗ್ಗೆ, ಸಂವಿಧಾನದ ಹಕ್ಕು-ಕರ್ತವ್ಯಗಳ ಜಾಗೃತಿಗಾಗಿ ಪರಿಸರ ಸಂರಕ್ಷಣೆ ಕುರಿತು ಹಾಗೂ ಭ್ರಷ್ಟಚಾರ ಮುಕ್ತಿಗಾಗಿ ಅರಿವು ಮೂಡಿಸುವುದಕ್ಕಾಗಿ ಯಾತ್ರೆ ಆರಂಭಿಸಲಾಗಿದೆ ಎಂದರು. ಸಂಯೋಜಕ ಗಣೇಶ ಪಾಟೀಲ ಮಾತನಾಡಿ, ತಾಲೂಕಿನ ಪ್ರತಿ ಹಳ್ಳಿಗೂ ಸಂಕಲ್ಪ ಯಾತ್ರೆ ಹೋಗಲಿದೆ ಎಂದರು.

ತ್ರಿಪುರಾಂತನ ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಅರಿವಿನ ಮನೆ ಮೂಲಕ ಶ್ರೀ ಬಸವಪ್ರಭು ಸ್ವಾಮಿಗಳು ಸದುದ್ದೇಶ ಇಟ್ಟುಕೊಂಡು ತಾಲೂಕಿನ ಗ್ರಾಮೀಣ ಭಾಗದ ಜನರಿಗೆ ತಿಳಿವಳಿಕೆ ಮಾಡಲು ಸಂಕಲ್ಪ ಯಾತ್ರೆ ಆರಂಭಿಸಿದ್ದಾರೆ ಎಂದರು. ಈ ವೇಳೆ ಶ್ರೀ ಪಂಚಾಕ್ಷರಿ ಸ್ವಾಮಿ, ಶಿವಲಿಂಗ ಸ್ವಾಮಿ, ಸುಜ್ಞಾನಿದೇವಿ, ಚಿತ್ರಮ್ಮ ತಾಯಿ, ಕಾಂತ ಸ್ವಾಮಿ, ಗಂಗಶೆಟ್ಟಿ ಪಾಟೀಲ್‌, ಸಂಜು ಗಾಯಕವಾಡ, ಶ್ರೀದೇವಿ ಉಜಳಂಬೆ, ಸುಮಿತ್ರಾ ದಾವಣಗಾವೆ, ಗುರುದೇವಿ ಆನಿಮಠ, ಬಸವರಾಜ ಹೊನ್ನಾ, ಸವಿತಾ ಮುರಗೆಪ್ಪ, ಗಿರಿಜಾ ಹಂಗರಗಿ, ಸತ್ಯಮ್ಮ ರಾಜೋಳೆ, ಮಹಾದೇವಿ ರಾಜೋಳೆ, ಗೌರಿ ಸುನಾಳೆ ಇದ್ದರು. ಗುರುಪ್ರಸಾದ ಪಂಡಿತ ನಿರೂಪಿಸಿದರು. ಆಶಾರಾಣಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next