Advertisement

ರೈತನಿಗೆ ವರದಾನ ಹನಿ ನೀರಾವರಿ

04:56 PM Nov 15, 2020 | Suhan S |

ಸಿಂದಗಿ: ತಾಲೂಕಿನಲ್ಲಿ ಹನಿ ನೀರಾವರಿ  ಪದ್ಧತಿ ಅಳವಡಿಸಿಕೊಳ್ಳುವ ರೈತರ ಸಂಖ್ಯೆ ಹೆಚ್ಚುತ್ತಿದ್ದೆ. ತೋಟಗಾರಿಕೆ ಕೃಷಿಯಲ್ಲಿ ತೊಡಗಿಸಿಕೊಂಡಿರುವ ರೈತರುಇಲಾಖೆಯ ಸಹಾಯ ಧನದ ಸೌಲಭ್ಯ ಪಡೆದು ಹನಿ ನೀರಾವರಿ ಪದ್ಧತಿಯ ಲಾಭ ಪಡೆಯುತ್ತಿದ್ದಾರೆ.

Advertisement

ಸಿಂದಗಿ ಮತ್ತು ದೇವರಹಿಪ್ಪರಗಿ ತಾಲೂಕಿನ ಫಲಾನುಭವಿ ರೈತರು2018-19ನೇ ಸಾಲಿನಲ್ಲಿ 626.1 ಹೆಕ್ಟೇರ್‌, 2019-2020ರಲ್ಲಿ 507.5 ಹೆಕ್ಟೇರ್‌ ತೋಟಗಾರಿಕಾ ಪ್ರದೇಶದಲ್ಲಿರೈತರು ಹನಿ ನೀರಾವರಿ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಪ್ರತಿ 2 ಹೆಕ್ಟೇರ್‌ (5ಎಕರೆ) ತೋಟಗಾರಿಕೆ ಭೂಮಿಯಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲು ಸರ್ಕಾರ ಶೇ. 90 ಸಹಾಯ ಧನ ಹಾಗೂ2 ಹೆಕ್ಟೇರ್‌ಗಿಂತ ಹೆಚ್ಚಿನ ಭೂಮಿಗೆ ಶೇ. 50 ಸಹಾಯ ಧನ ಸೌಲಭ್ಯ ನೀಡುತ್ತಿರುವುದು ರೈತರಿಗೆ ಅನುಕೂಲವಾಗಿದೆ.

ಈ ಬಾರಿ ಉತ್ತಮ ಮಳೆಯಾಗಿದ್ದರೂ ಕೂಡ 2020-21ನೇ ಸಾಲಿಗೆ ಹನಿ ನೀರಾವರಿ ಸೌಲಭ್ಯ ಪಡೆಯಲು ಆನ್‌ಲೈನ್‌ ಅರ್ಜಿ ಕರೆಯಲಾಗಿದೆ. ಇಲ್ಲಿವರೆಗೆ ಸಿಂದಗಿ ವಲಯದಿಂದ 125 ರೈತರು,ದೇವರಹಿಪ್ಪರಗಿ ವಲಯದಿಂದ 85ರೈತರು ಮತ್ತು ಆಲಮೇಲ ವಲಯದಿಂದ 65 ರೈತರು ಒಟ್ಟು ಸಿಂದಗಿ ಮತ್ತುದೇವರಹಿಪಪ್ರಗಿ ತಾಲೂಕಿನ 275 ರೈತರುಹನಿ ನೀರಾವರಿ ಪದ್ಧತಿಯ ಸಹಾಯ ಧನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

ದೇವರಹಿಪ್ಪರಗಿ ಮತ್ತು ನೂತನವಾಗಿರಚಿಸಲಾಗಿರುವ ಆಲಮೇಲತಾಲೂಕುಗಳ ವ್ಯಾಪ್ತಿಯಲ್ಲಿನ ಗ್ರಾಮಗಳುಇನ್ನೂ ತೋಟಗಾರಿಕೆ ಇಲಾಖೆಯ ಸಿಂದಗಿ ಕಚೇರಿ ವ್ಯಾಪ್ತಿಯಿಂದ ಬೇರ್ಪಟ್ಟಿಲ್ಲ. ಸಿಂದಗಿ ತಾಲೂಕಿನಲ್ಲಿ ಕಳೆದ ಎರಡು ವರ್ಷಗಳಿಂದ ಹೆಚ್ಚಿನ ಸಂಖ್ಯೆಯ ರೈತರು ತೋಟಗಾರಿಕೆ ಬೇಸಾಯದತ್ತ ಗಮನ ಹರಿಸಿದ್ದಾರೆ. ಹನಿ ನೀರಾವರಿ ಪದ್ಧತಿ ರೈತರಿಗೆ ನೀರಿನ ಕೊರತೆಯನ್ನು ನಿವಾರಿಸಿದೆ. ಕಡಿಮೆ ಪ್ರಮಾಣದ ನೀರಿನಲ್ಲಿ ಉತ್ತಮ ಇಳುವರಿಯ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಸಹಕಾರಿಯಾಗಿದೆ. ನರೇಗಾ ಯೋಜನೆ ಅಡಿಯಲ್ಲಿ ಹಣ್ಣು ಗಿಡಗಳನ್ನು ನೆಡಲು ಸಹಾಯ ಧನದ ಸೌಲಭ್ಯ ಇದೆ. ಕಾರಣ ರೈತರು ಹೆಚ್ಚಿನ ಸಂಖ್ಯೆಯಲ್ಲಿ ತೋಟಗಾರಿಕೆ ಬೆಳೆಗಳತ್ತ ಆಕರ್ಷಿತರಾಗುತ್ತಿದ್ದಾರೆ.

ಸಿಂದಗಿ ಮತ್ತು ದೇವರಹಿಪ್ಪರಗಿ ತಾಲೂಕಿನಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿರುವು ತೋಟಗಳನ್ನು ವಿಕ್ಷಣೆಮಾಡಿದ ತೋಟಗಾರಿಕೆ ಉಪನಿರ್ದೇಶಕ ಎಸ್‌.ಎಂ. ಬರಗಿಮಠ ಅವರು ಸಿಂದಗಿ ತಾಲೂಕಿನ ತೋಟಗಾರಿಕೆ ಇಲಾಖೆಯ ಕಾರ್ಯವನ್ನು ಮೇಚ್ಚುಗೆ ವ್ಯಕ್ತ ಪಡೆಸಿದ್ದಾರೆ.

Advertisement

ರೈತರು ತೋಟಗಾರಿಕೆಗೆ ಹೆಚ್ಚಿನ ಒಲವು ವ್ಯಕ್ತಪಡಿಸುತ್ತಿದ್ದಾರೆ. ತಾಲೂಕಿನಲ್ಲಿ ರೈತರಿಗೆ ಹನಿನೀರಾವರಿ ಪದ್ಧತಿ ಸೇರಿದಂತೆ ವಿವಿಧ ಸೌಲಭ್ಯಗಳ ಕುರಿತು ತಿಳಿವಳಿಕೆ ಮೂಡಿಸಲಾಗಿದೆ. ಇದರಿಂದ ವರ್ಷ ವರ್ಷಕ್ಕೆ ರೈತರು ತೋಟಗಾರಿಕೆ ಬೆಳೆಗಳತ್ತ ಆಕರ್ಷಿತರಾಗುತ್ತಿದ್ದಾರೆ.  –ಅಮೋಘಿ ಹಿರೇಕುರಬರ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ, ಸಿಂದಗಿ

ಸಿಂದಗಿ ಮತ್ತು ದೇವರಹಿಪ್ಪರಗಿ ತಾಲೂಕಿನ ವ್ಯಾಪ್ತಿಯ ಗ್ರಾಮಗಳಲ್ಲಿ ತೋಟಗಾರಿಕೆಯ ರೈತರಿಗೆ ಪ್ರತ್ಯೇಕವಾಗಿ ವಾರ್ಷಿಕ ಗುರಿ ನಿಗದಿ ಪಡೆಸಬೇಕು. ಎರಡು ತಾಲೂಕಿಗೆ ಪ್ರತ್ಯೇಕವಾಗಿ ಸಹಾಯಧನ ಸೌಲಭ್ಯ ಮಂಜೂರು ಮಾಡಿದಲ್ಲಿ ಹೆಚ್ಚಿನಸಂಖ್ಯೆಯಲ್ಲಿ ರೈತರು ಹನಿ ನೀರಾವರಿ ಪದ್ಧತಿಯ ಲಾಭ ಪಡೆಯಲು ಸಾಧ್ಯ. ಅನುದಾನದ ಕೊರತೆಯಿಂದ ಸಾಕಷ್ಟು ರೈತರ ಫೈಲ್ ಗ‌ಳು ಕಚೇರಿಯಲ್ಲಿಯೇ ಕುಳತಿವೆ. ಪ್ರವೀಣ ಬೈರಿ, ವಿತರಕ, ನೆಟಾಫ್ರಿಮ್‌ ಹನಿ ನೀರಾವರಿ, ಸಿಂದಗಿ

ಮೊದಲು ನಾವು ಹೊಲದಲ್ಲಿ ಜೋಳ, ತೊಗರಿ ಬಿತ್ತುತ್ತಿದ್ದೇವು. ಈಗ ಹೊಲದಲ್ಲಿ ನೀರಾವರಿ ಮಾಡಿಕೊಂಡು ತೋಟಗಾರಿಕೆ ಅಧಿಕಾರಿಗಳು ಹೇಳಿದಂಗ ಹೊಲದಲ್ಲಿ ದ್ರಾಕ್ಷಿ, ನಿಂಬೆ ಗಿಡ ಬೆಳೆದಿದ್ದೇವೆ. ದ್ರಾಕ್ಷಿ ಮತ್ತು ನಿಂಬೆ ಗಿಡಗಳಿಗೆ ನೀರು ಕಡಿಮೆ ಬಿಳುತ್ತಿದ್ದ ಸಂದರ್ಭದಲ್ಲಿ ಡ್ರಿಪ್‌ ಪೈಪ್‌  ಮೂಲಕ ನೀರು ಬಿಡುತ್ತಿದ್ದೇವೆ. ಬೆಳೆಗಳಿಗೆ ನೀರು ಕಡಿಮೆ ಬಿಳುತ್ತಿಲ್ಲ. ದ್ರಾಕ್ಷಿ ಮತ್ತು ನಿಂಬೆಯಿಂದ ಆದಾಯ ಹೆಚ್ಚಾಗಿದೆ. –ಕಸ್ತೂರಿಬಾಯಿ ಹೂಗಾರ, ರೈತ ಮಹಿಳೆ, ಅಂತರಗಂಗಿ

 

ರಮೇಶ ಪೂಜಾರ

Advertisement

Udayavani is now on Telegram. Click here to join our channel and stay updated with the latest news.

Next