Advertisement
ಪ್ರಸ್ತುತ ಬೆಂಗಳೂರು ನಗರ , ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳ ಹದಿನೈದು ಗ್ರಾಮಗಳಲ್ಲಿ ಕುಡಿಯುವನೀರಿನ ತೀವ್ರತರ ಸಮಸ್ಯೆ ಎದುರಾಗಿದೆ.ಈ ಮಾಸಾಂತ್ಯಕ್ಕೆ ಚಿತ್ರದುರ್ಗ, ಬಳ್ಳಾರಿ, ಬೀದರ್, ಕಲಬುರಗಿ,ಕೊಪ್ಪಳ, ಚಾಮರಾಜನಗರ ಸೇರಿ ಹದಿನೈದು ಜಿಲ್ಲೆಗಳಲ್ಲಿ ನೂರಕ್ಕೂಹೆಚ್ಚು ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರುವ ಅಂದಾಜು ಮಾಡಲಾಗಿದೆ.
Related Articles
Advertisement
ಬತ್ತಿ ಹೋಗಿರುವ ಜಲಮೂಲಪುನಶ್ಚೇತನಗೊಳಿಸುವ ಹಾಗೂ ಅಗತ್ಯ ಇರುವ ಕಡೆ ಹೊಸದಾಗಿಕೊಳವೆ ಬಾವಿ ಕೊರೆಸುವ ಕಾಮಗಾರಿಗಳಿಗೆ ಮೊದಲ ಆದ್ಯತೆ ನೀಡುವಂತೆ ಸುತ್ತೋಲೆ ಹೊರಡಿಸಲಾಗಿದೆ.
ಮಹತ್ವದ ಸಭೆ:ಇದೇ ರೀತಿ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನಸಮಸ್ಯೆ ನೀಗಿಸಲು ಕಂದಾಯ ಇಲಾಖೆಯು ನಗರ ಸ್ಥಳೀಯ ಸಂಸ್ಥೆಗಳಜತೆಗೂಡಿ ಕ್ರಿಯಾ ಯೋಜನೆ ರೂಪಿಸಲು ತೀರ್ಮಾನಿಸಿದೆ.ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಿಗೆ ಹಾಗೂ ತಹಸೀಲ್ದಾರ್‌ಗಳಿಗೆ ಕುಡಿಯುವ ನೀರಿನ ಸಮಸ್ಯೆ ಇರುವ ಪ್ರದೇಶಗಳ ಮಾಹಿತಿ ಸಂಗ್ರಹಿಸಲುಸೂಚನೆ ನೀಡಲಾಗಿದ್ದು ಮುಂದಿನ ವಾರ ಮಹತ್ವದ ಸಭೆ ನಡೆಯಲಿದೆ.
ಕುಡಿಯುವ ನೀರಿನ ಜತೆಗೆ ಕೋರೊನಾ ನಿಯಂತ್ರಣ ವಿಚಾರವನ್ನೂಪ್ರಮುಖವಾಗಿ ತೆಗೆದುಕೊಳ್ಳಲು ತೀರ್ಮಾನಿಸಲಾಗಿದ್ದು, ಕಂದಾಯ,ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಆರೋಗ್ಯ ಇಲಾಖೆಯ ಸಚಿವರು ಹಾಗೂ ಉನ್ನತ ಅಧಿಕಾರಿಗಳ ಸಭೆ ನಡೆಯಲಿದೆ.ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಸಹ ನಡೆಸಿ ಹಲವುನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ಕಂದಾಯ ಇಲಾಖೆಯಿಂದಲೂ ಪ್ರತಿ ವಿಧಾನಸಭೆ ಕ್ಷೇತ್ರ ಅಥವಾತಾಲೂಕಿಗೆ 50 ಲಕ್ಷ ರೂ.ವರೆಗೆ ನಗರ ಪ್ರದೇಶಗಳಲ್ಲಿ ಕುಡಿಯುವನೀರು ಪೂರೈಕೆಗೆ ತುರ್ತು ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುವನಿರೀಕ್ಷೆಯಿದೆ.ಈ ನಡುವೆ, ಕುಡಿಯುವ ನೀರು ಸಮಸ್ಯೆ ಇರುವ ಕಡೆ ಪ್ರತಿವಿಧಾನಸಭೆ ಕ್ಷೇತ್ರಕ್ಕೆ ಕನಿಷ್ಠ ಎರಡು ಕೋಟಿ ರೂ.ವರೆಗೆ ಹಣ ಆದ್ಯತೆಮೇಲೆ ಒದಗಿಸಬೇಕು ಎಂದು ಪಕ್ಷಾತೀತವಾಗಿ ಶಾಸಕರು ಬೇಡಿಕೆಸಲ್ಲಿಸಿದ್ದಾರೆ. ಆದರೆ, ಆರ್ಥಿಕ ಸಂಕಷ್ಟ ಕಾರಣ ಕನಿಷ್ಠ ಒಂದು ಕೋಟಿರೂ.ವರೆಗೆ ಒದಗಿಸಲು ಆರ್ಥಿಕ ಇಲಾಖೆ ಅಧಿಕಾರಿಗಳ ಜತೆ ಚರ್ಚೆನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಎಸ್. ಲಕ್ಷ್ಮಿನಾರಾಯಣ