Advertisement

ಕುಡಿವ ನೀರಿನ ಸಮಸ್ಯೆ ಶೀಘ್ರ ಇತ್ಯರ್ಥ : ಸಮರೋಪಾದಿಯಲ್ಲಿ ನಡೆಯುವ ಕೆಲಸಕ್ಕೆ ಮೆಚ್ಚುಗೆ

06:14 PM Jan 30, 2022 | Team Udayavani |

ಸುರಪುರ: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ, ಶಾಸಕ ರಾಜುಗೌಡ ಶನಿವಾರ ನಗರಸಭೆ ವ್ಯಾಪ್ತಿಯ ರಂಗಂಪೇಟೆಗೆ ಭೇಟಿ ನೀಡಿ, ಮಂಡಳಿಯಿಂದ ನಡೆದಿರುವ ಕುಡಿಯವ ನೀರಿನ ಪೈಪ್‌ಲೈನ್‌ ಕಾಮಗಾರಿ ಪರಿಶೀಲಿಸಿದರು.

Advertisement

ನಿರ್ಮಾಣ ಹಂತದಲ್ಲಿರುವ 7 ಟ್ಯಾಂಕ್‌ಗಳ ಮತ್ತು ಪೈಪ್‌ಲೈನ್‌ ಕಾಮಗಾರಿ ಸಮರೋಪಾದಿಯಲ್ಲಿ ನಡೆಯುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಇದು ನನ್ನ ಬಹುದಿನ ಕನಸಿನ ಯೋಜನೆ ಅನುಷ್ಠಾನಕ್ಕಾಗಿ ಸಾಕಷ್ಟು ಶ್ರಮಿಸಿದ್ದೇನೆ. ಕಾಮಗಾರಿ ಕಳಪೆ ಆಗದಂತೆ ಜಾಗೃತಿ ವಹಿಸಿ, ನೀವು ಮಾಡಿದ ಕೆಲಸ ಬಹುಕಾಲ ಬಾಳಿಕೆ ಬರಬೇಕು. ಜನಮಾನಸದಲ್ಲಿ ಸ್ಥರವಾಗಿ ಉಳಿಯಬೇಕು ಎಂದು ಸ್ಥಳದಲ್ಲಿದ್ದ ಕುಡಿಯುವ ನೀರು ಸರಬರಾಜು ಇಲಾಖೆಯ ಇಂಜನಿಯರ್‌ ಮತ್ತು ಗುತ್ತಿಗೆದಾರರಿಗೆ ತಾಕೀತು ಮಾಡಿದರು.

ನಂತರ ರಂಗಂಪೇಟೆ-ತಿಮ್ಮಾಪುರದ ರಸ್ತೆ ಅಗಲೀಕರಣ ಕಾಮಗಾರಿ ಪರಿಶೀಲಿಸಿದರು. ಅಗಲೀಕರಣದಲ್ಲಿ ಮನೆ ಕಳೆದುಕೊಂಡಿರುವ ಅನೇಕರು ಶಾಸಕರನ್ನು ಭೇಟಿ ಮಾಡಿ, ಇರುವ ಮನೆ
ಕಳೆದುಕೊಂಡು ಬೀದಿಗೆ ಬಿದ್ದಿದ್ದೇವೆ. ದಯವಿಟ್ಟು ಮನೆ ಒದಗಿಸಿಕೊಡುವಂತೆ ಮನವಿ ಮಾಡಿದರು. ಮನೆ ಕಳೆದುಕೊಂಡ ಬಡವರ ಕೈ ಬಿಡುವುದಿಲ್ಲ. ಕೊಳಚೆ ನಿರ್ಮೂಲನಾ ನಿಗಮದಿಂದ
ಮನೆಗಳು ಮಂಜೂರಿಯಾಗಿವೆ. ಮನೆ ಕಳೆದುಕೊಂಡವರಿಗೆ ಮತ್ತು ವಸತಿ ರಹಿತ ಅರ್ಹ ಬಡವರಿಗೆ ಮನೆ ಕಲ್ಪಿಸಿಕೊಡುವುದಾಗಿ ಶಾಸಕರು ಭರವಸೆ ನೀಡಿದರು. ಮನೆ ಕಳೆದುಕೊಂಡವರ
ಪಟ್ಟಿ ಮಾಡಿ ಕೊಡುವಂತೆ ಸ್ಥಳದಲ್ಲಿದ್ದ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ಅವರಿಗೆ ಸೂಚಿಸಿದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಳೆದ ಬಾರಿ ಚುನಾವಣೆಯಲ್ಲಿ ನಿರಂತರ ನೀರು ಕೊಡುವುದಾಗಿ ಭರವಸೆ ನೀಡಿದ್ದೆ. ನುಡಿದಂತೆ ನಡೆದುಕೊಂಡಿದ್ದೇನೆ ಕುಡಿಯುವ ನೀರಿನ ಕಾಮಗಾರಿ ತ್ವರಿತಗತಿಯಲ್ಲಿ ಸಾಗಿದೆ. ಆದಷ್ಟು ಬೇಗ ಕಾಮಗಾರಿ ಮುಗಿಯಲಿದ್ದು, ದಿನದ 24 ಗಂಟೆಯೂ ನೀರು ಸಿಗಲಿದೆ ಎಂದು ತಿಳಿಸಿದರು. ನಗರಸಭೆ ಉಪಾಧ್ಯಕ್ಷ ಮಹೇಶ ಪಾಟೀಲ್‌,
ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ, ಎಇ ಶಂಕರಗೌಡ, ನಗರಸಭೆ ಸದಸ್ಯ ನರಸಿಂಹಕಾಂತ ಪಂಚಮಗಿರಿ, ಮುಖಂಡರಾದ ರಾಜಾ ಹನುಮಪ್ಪ ನಾಯಕ (ತಾತಾ),
ವೇಣುಗೋಪಾಲನಾಯಕ ಜೇವರ್ಗಿ, ಭೀಮಾಶಂಕರ ಬಿಲ್ಲವ್‌, ರಾಜು ಪುಲ್ಸೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next