Advertisement

“ಕುಡಿಯುವ ನೀರು ಒದಗಿಸುವ ಯೋಜನೆ ಪ್ರಗತಿಯಲ್ಲಿದೆ’

09:30 PM Feb 18, 2021 | Team Udayavani |

ಮೋರ್ಗನ್ಸ್‌ ಗೇಟ್‌: ಮಹಾ ನಗರ ಪಾಲಿಕೆ ವ್ಯಾಪ್ತಿಯ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಒದಗಿಸುವ ಜಲಸಿರಿ ಯೋಜನೆಯ ಭಾಗವಾಗಿ ವಿತರಣೆ ಜಾಲವನ್ನು ಬಲಪಡಿಸುವ ನಿಟ್ಟಿನಲ್ಲಿ ಮೋರ್ಗನ್ಸ್‌ ಗೇಟ್‌ನಲ್ಲಿ 6.25 ಕೋ.ರೂ. ವೆಚ್ಚದ ನೀರು ಸಂಗ್ರಹಣೆ ಟ್ಯಾಂಕ್‌ ನಿರ್ಮಾಣ ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್‌ ಅವರು ಗುದ್ದಲಿಪೂಜೆ ನೆರವೇರಿಸಿದರು.
ಶಾಸಕ ಕಾಮತ್‌ ಮಾತನಾಡಿ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆಯು ಪ್ರಗತಿಯ ಹಂತದಲ್ಲಿದೆ ಎಂದರು. ಹೊಗೆಬಜಾರ್‌, ಪೋರ್ಟ್‌ ವಾರ್ಡ್‌, ಜಪ್ಪಿನಮೊಗರು, ಅತ್ತಾವರ, ಮಂಗಳಾದೇವಿ, ಬೋಳಾರ ಹಾಗೂ ಜಪ್ಪು ವಾರ್ಡಿಗೆ ಈ ಟ್ಯಾಂಕ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ ಎಂದು ಅವರು ವಿವರಿಸಿದರು.

Advertisement

ಮೇಯರ್‌ ದಿವಾಕರ್‌ ಪಾಂಡೇಶ್ವರ, ಪಾಲಿಕೆ ಮುಖ್ಯಸಚೇತಕ ಪ್ರೇಮಾನಂದ ಶೆಟ್ಟಿ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್‌ ಶೆಟ್ಟಿ ಬೋಳೂರು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅದ್ಯಕ್ಷರಾದ ರವಿಶಂಕರ್‌ ಮಿಜಾರ್‌, ಪಾಲಿಕೆ ಸದಸ್ಯರಾದ ಭಾನುಮತಿ, ರೇವತಿ, ವೀಣಾ ಮಂಗಳ, ಶೈಲೇಶ್‌ ಶೆಟ್ಟಿ ಅತ್ತಾವರ, ಭರತ್‌ ಕುಮಾರ್‌, ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ್‌ ಚಂದ್ರ ಶೆಟ್ಟಿ, ಬಿಜೆಪಿ ಮುಖಂಡರಾದ ದೀಪಕ್‌ ಪೈ, ಕಿರಣ್‌ ರೈ ಬಜಾಲ್‌, ಯೋಗಿಶ್‌ ಜೆಪ್ಪು , ಪ್ರಶಾಂತ್‌ ರಾವ್‌, ಶಿವಪ್ರಸಾದ್‌ ಬೋಳಾರ್‌, ದಿನೇಶ್‌ ಕರ್ಕೆರ,ಸುಧೀಂದ್ರ, ಅಜಿತ್‌ ಡಿ. ಸಿಲ್ವಾ, ಪ್ರಶಾಂತ್‌, ಪ್ರಶಾಂತ್‌ ರಾವ್‌, ರಾಜೇಂದ್ರ ಬಿ., ವಸಂತ್‌ ಜೆ. ಪೂಜಾರಿ, ವಸಂತ್‌, ಸುಜಾತಾ ಆಳ್ವ, ಸುರೇಶ್‌ ಪಾಂಡೇಶ್ವರ, ಬಿಜೆಪಿ ಪ್ರಮುಖರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

6.25 ಕೋ.ರೂ. ವೆಚ್ಚದ ಕಾಮಗಾರಿ
ಪ್ರತಿ ಮನೆಗೂ ದಿನದ 24 ಗಂಟೆಯೂ ಕುಡಿಯುವ ನೀರು ಒದಗಿಸಲು ವಿತರಣ ಜಾಲಗಳನ್ನು ಬಲಪಡಿಸುವುದು ಅತೀ ಅಗತ್ಯ. ಈ ನಿಟ್ಟಿನಲ್ಲಿ 6.25 ಕೋ.ರೂ. ವೆಚ್ಚದ 25 ಲಕ್ಷ ಲೀಟರ್‌ ನೀರು ಸಂಗ್ರಹಣ ಸಾಮರ್ಥ್ಯದ ಟ್ಯಾಂಕ್‌ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ್ದೇವೆ ಎಂದು ಶಾಸಕ ವೇದವ್ಯಾಸ ಕಾಮತ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next