Advertisement

ಕುಡಿವ ನೀರು ಯೋಜನೆ ಅನುಷ್ಠಾನ

05:17 AM May 21, 2020 | Lakshmi GovindaRaj |

ಹುಣಸೂರು: ನಗರಕ್ಕೆ ಮುಂದಿನ 20 ವರ್ಷಗಳ ಅವಧಿಯ ದೂರದೃಷ್ಟಿಯಿಂದ ನಗರೋತ್ಥಾನ ಯೋಜನೆಯಡಿ 3ನೇ ಹಂತದ 5.50 ಕೋಟಿ ರೂ, ನಗರಸಭೆ 14ನೇ ಹಣಕಾಸು ಯೋಜನೆಯಡಿ 2 ಕೋಟಿ, ಎಸ್‌ಎಫ್‌ಸಿ ವಿಶೇಷ  ಅನುದಾನ 1.50  ಕೋಟಿ ಸೇರಿದಂತೆ ಒಟ್ಟು 9 ಕೋಟಿ ವೆಚ್ಚದಲ್ಲಿ ಸಮಗ್ರ ಯೋಜನೆ ಇದಾಗಿದ್ದು, ಸುಮಾರು ಒಂದು ಲಕ್ಷ ಮಂದಿಗೆ ಸಮರ್ಪಕ ನೀರು ಪೂರೈಸಲು ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಮಂಜುನಾಥ್‌ ಹೇಳಿದರು.

Advertisement

ನಗರಸಭೆ ಸಭಾಂಗಣದಲ್ಲಿ ಯೋಜನೆ ಅನುಷ್ಠಾನ ಸಂಬಂಧ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ, ನಗರಸಭೆ ಅಧಿಕಾರಿಗಳು ಮತ್ತು ಇಂಜಿನಿಯರ್‌ಗಳ ಸಭೆ ನಂತರ ಮಾತನಾಡಿ, ನೀರು ಪೂರೈಸುವ ಕಾವೇರಿ ನೀರು ಸರಬರಾಜು ಯೋಜನೆಯ ಹಾಲಿ 270 ಎಚ್‌ .ಪಿಯಿಂದ 350 ಎಚ್‌.ಪಿಯ ಎರಡು ಮೋಟಾರ್‌ ಅಳವಡಿಸುವುದು. ನೂತನವಾಗಿ ನಿರ್ಮಿಸಿರುವ ಟ್ಯಾಂಕ್‌ಗಳಿಗೆ ಹೊಸ ಪೈಪ್‌ಲೈನ್‌ ಸಂಪರ್ಕ ಕಲ್ಪಿಸುವ  ಕಾಮಗಾರಿ ಕೈಗೊಳ್ಳಲಾಗುವುದು  ಎಂದರು.

ಟ್ಯಾಂಕ್‌ ನಿರ್ಮಾಣ: ನಗರೋತ್ಥಾನ ಯೋಜನೆಯಡಿ ನಗರದ ಕಲ್ಕುಣಿಕೆ ಅಯ್ಯಪ್ಪಸ್ವಾಮಿ ಬೆಟ್ಟ, ನರಸಿಂಹಸ್ವಾಮಿ ತಿಟ್ಟಿನ ದೇವಾಲಯದ ಬಳಿ ಹಾಗೂ ಶಬ್ಬೀರ್‌ ನಗರದಲ್ಲಿ 5 ಲಕ್ಷ ಲೀಟರ್‌ ಸಾಮರ್ಥ್ಯದ ದೊಡ್ಡ ಟ್ಯಾಂಕ್‌  ನಿರ್ಮಿಸಲಾಗುವುದು. ಈಗಾಗಲೇ ಕಾಮಗಾರಿಗೆ ಅನುಮೋದನೆ ಸಿಕ್ಕಿದೆ. 2021ರ ಮಾರ್ಚ್‌ ಒಳಗೆ ಕಾಮಗಾರಿ ಮುಗಿಸಿ ನೀರು ಪೂರೈಸಬೇಕು ಎಂದು ಹೇಳಿದರು. ನಗರಸಭಾ ಪೌರಾಯುಕ್ತ ಮಂಜುನಾಥ್‌, ಎಇಇ ಮಂಜುನಾಥ್‌, ಎಂಜಿನಿಯರ್‌ಗಳಾದ ಸದಾಶಿವಪ್ಪ, ಅನುಪಮ, ರೂಪ, ದೀಪಕ್‌, ಸಮನ್ವಯಾಧಿಕಾರಿ ಸುದರ್ಶನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next