Advertisement

ಲಕ್ಷ್ಮೇಶ್ವರದಲ್ಲಿ ಕುಡಿಯುವ ನೀರಿನ ಸಮಸ್ಯೆ

11:37 AM Dec 05, 2019 | Suhan S |

ಲಕ್ಷ್ಮೇಶ್ವರ: ಪಟ್ಟಣಕ್ಕೆ ತುಂಗಭದ್ರಾ ನದಿಯಿಂದ ಹರಿದು ಬರುವ ಕುಡಿಯುವ ನೀರಿನ ಸರಬರಾಜಿನಲ್ಲಿ ವಿದ್ಯುತ್‌ ಸಮಸ್ಯೆ ಉಂಟಾಗಿ ಕಳೆದ 8-10 ದಿನಗಳಿಂದ ಜನತೆಗೆ ಕುಡಿಯುವ ನೀರು ಸ್ಥಗಿತಗೊಂಡಿದೆ.

Advertisement

ತುಂಗಭದ್ರಾ ನದಿಯ ಪಾತ್ರವೇವುಂಡಿಯಲ್ಲಿನ ಜಾಕ್‌ವೆಲ್‌ ಮೂಲಕ ಮಾರ್ಗದ ಸೂರಣಗಿ ಹತ್ತಿರದ ಶುದ್ಧೀಕರಣಘಟಕದಲ್ಲಿ ನೀರು ಶುದ್ಧೀಕರಣಗೊಳ್ಳುತ್ತದೆ ಶುದ್ಧೀಕರಣ ಘಟಕದಲ್ಲಿನ ಕಿ.ವ್ಯಾ ಸಾಮರ್ಥ್ಯ ಟಿಸಿ ಸುಟ್ಟಿದ್ದರಿಂದ ನೀರು ಪೂರೈಕೆ ಸ್ಥಗಿತಗೊಂಡಿದೆ ಇದರಿಂದ ಪಟ್ಟಣವಷ್ಟೇಅಲ್ಲದೆ ಮಾರ್ಗದ ಐದಾರು ಹಳ್ಳಿಗಳಜನರಿಗೂ ನದಿ ನೀರು ಮರೀಚಿಕೆಯಾಗಿದ್ದು ಜನತೆ ಅನಿವಾರ್ಯವಾಗಿ ಸವುಳು ನೀರಿಗೆ ಮೊರೆ ಹೋಗಿದ್ದಾರೆ.

ಈ ಕುರಿತು ಪುರಸಭೆ ಸದಸ್ಯರಾದ ಪ್ರವೀಣ ಬಾಳಿಕಾಯಿ, ಮಹೇಶ ಹೊಗೆಸೊಪ್ಪಿನ ಪ್ರತಿಕ್ರಿಯಿಸಿ, ನದಿಯಲ್ಲಿ ಅಪಾರ ಪ್ರಮಾಣ ನೀರಿರುವ ಕಾಲದಲ್ಲಿಯೂ ಜನತೆ ಸವುಳುನೀರು ಕುಡಿಯುವ ಪರಿಸ್ಥಿತಿ ನಿರ್ಮಾಣಕ್ಕೆ ಅಧಿಕಾರಿಗಳ ನಡುವಿನ ಶಿಥಲ ಸಮರ ಮತ್ತು ನಿರ್ಲಕ್ಷವೇ ಕಾರಣವಾಗಿದೆ. ನೀರು ಸರಬರಾಜು ಮಾಡುವ ಮೋಟರ್‌ ಟಿಸಿ ದುರಸ್ತಿ ಮಾಡಿಕೊಡುವ ಗುತ್ತಿಗೆದಾರರಿಗೆ ಸರಿಯಾಗಿ ಹಣ ಪಾವತಿಸದಿದ್ದರಿಂದ ಅವರು ದುರಸ್ತಿಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟ ಪ್ರತಿಕ್ರಿಯಿಸಿ ಮೋಟರ್‌ ಟಿಸಿ ದುರಸ್ತಿ ಮಾಡುವ ಗುತ್ತಿಗೆದಾರರ ಪೇಮೆಂಟ್‌ ಮಾಡುವಲ್ಲಿ ಕೆಲ ತಾಂತ್ರಿಕ ತೊಂದರೆಯಾಗಿದೆ ನದಿ ನೀರು ಸ್ಥಗಿತವಾಗಿದ್ದರೂ ಸ್ಥಳೀಯವಾಗಿ ಲಭ್ಯವಿರುವ ಬೋರ್‌ವೆಲ್‌ಗ‌ಳ ಮೂಲಕ ಮನೆ ಮತ್ತು ಸಾರ್ವಜನಿಕ ನಲ್ಲಿಗಳಿಂದನೀರಿನ ವ್ಯವಸ್ಥೆ ಮಾಡಲಾಗುತ್ತಿದೆ ಸುಟ್ಟಿರುವ ಟಿಸಿ ದುರಸ್ತಿಗೆ ಕೊಟ್ಟಿದ್ದು ಇನ್ನೆರಡು ದಿನಗಳಲ್ಲಿ ನದಿ ನೀರು ಸರಬರಾಜಾಗಲಿದೆ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next