Advertisement

ಕನಕಗಿರಿಯ 22 ಹಳ್ಳಿಗಳಲ್ಲಿ ಹಾಹಾಕಾರ

12:27 PM Apr 13, 2021 | Team Udayavani |

ಕನಕಗಿರಿ: ಸ್ಥಳೀಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕನಕಗಿರಿ ತಾಲೂಕು ಒಣ ಬೇಸಾಯ ಪ್ರದೇಶವಾಗಿದ್ದು,22 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆತಾಂಡವವಾಡುತ್ತಿದೆ. ಇನ್ನು ಕಾರಟಗಿ ತಾಲೂಕು ನೀರಾವರಿ ಪ್ರದೇಶವಾದ ಕಾರಣ ಅಲ್ಲಿ ನೀರಿನ ಸಮಸ್ಯೆ ಕಂಡುಬಂದಿಲ್ಲ.

Advertisement

ಕನಕಗಿರಿ ತಾಲೂಕಿನ 22 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಈ ವರ್ಷವೂ ಮುಂದುವರಿದಿದೆ. ಇನ್ನೂ ಕಾರಟಗಿ ತಾಲೂಕಿನ ಗುಡೂರು ಮತ್ತು ಬೇವಿನಾಳ ಗ್ರಾಮಗಳಲ್ಲಿ ಕಳೆದ ವರ್ಷ ಕುಡಿಯುವ ನೀರಿನ ಸಮಸ್ಯೆ ಯಾಗಿತ್ತು. ಆಗ ಖಾಸಗಿ ಬೋರ್‌ವೆಲ್‌ ಮೂಲಕ ನೀರು ಪೂರೈಕೆ ಮಾಡಲಾಗಿತ್ತು. ಆದರೆ ಈ ಎರಡು ಗ್ರಾಮಗಳಲ್ಲಿ ಸರ್ಕಾರದ ಅನುದಾನದಲ್ಲಿ ಬೋರ್‌ವೆಲ್‌ ಕೊರೆಸಲಾಗಿದ್ದು, ಈ ವರ್ಷ ನೀರಿನ ಸಮಸ್ಯೆ ಇಲ್ಲದಂತಾಗಿದೆ.

ಕನಕಗಿರಿ ಮತ್ತು ಕಾರಟಗಿ ತಾಲೂಕಿನಲ್ಲಿ ಯಾವುದೇ ಗ್ರಾಮಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಪರಿಸ್ಥಿತಿ ಎದುರಾಗಿಲ್ಲ.ತಾಲೂಕಿನಲ್ಲಿ ಹುಲಸನಹಟ್ಟಿ, ಚಿಕ್ಕಮಾದಿನಾಳ,ನಾಗಲಾಪುರ, ಬಂಕಾಪುರ, ಕರಡಿಗುಡ್ಡ, ಗೌರಿಪುರ, ದೇವಲಾಪುರ, ಅಡವಿಬಾವಿ, ಚಿಕ್ಕತಾಂಡಾ, ಚಿಕ್ಕಖೇಡಾ, ಹುಲಿಹೈದರ್‌, ಲಾಯದುಣಿಸಿ,ಕನಕಾಪುರ, ವರ್ಣಖೇಡಾ, ಉಮಳಿ ಕಾಟಾಪುರ,ವಡಕಿ, ಓಬಳಬಂಡಿ, ಬೊಮ್ಮಸಾಗರ, ಮುಸಲಾಪುರ,ಸುಳೇಕಲ್‌, ಕಲಕೇರಾ, ಬೆನಕನಾಳ, ಗೋಡಿನಾಳಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂಬ ಮಾಹಿತಿಯನ್ನು ತಾಲೂಕು ಆಡಳಿತ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿದೆ.

ಕೆರೆ ತುಂಬಿಸುವ ಯೋಜನೆ ವರದಾನ: ಕನಕಗಿರಿ ತಾಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ 8 ಕೆರೆಗಳನ್ನು ತುಂಗಭದ್ರ ನದಿಯಿಂದ ತುಂಬಿಸಲಾಗಿದೆ. ಇದರಿಂದ ಕೆರೆಯ ಅಕ್ಕಪಕ್ಕದಲ್ಲಿರುವ ಗ್ರಾಮಗಳಲ್ಲಿ ಅಂತರ್ಜಲಮಟ್ಟ ಹೆಚ್ಚಾಗಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿಲ್ಲ. ಕನಕಗಿರಿಯ ಬಹುತೇಕ ಗ್ರಾಮಗಳಲ್ಲಿ ಕೆರೆ ತುಂಬಿಸುವ ಯೋಜನೆವರದಾನವಾಗಿದೆ. ಕಾರಟಗಿ ತಾಲೂಕು ನೀರಾವರಿ ಪ್ರದೇಶವಾಗಿದ್ದು, ಅಂತರ್ಜಲಮಟ್ಟ ಉತ್ತಮವಾಗಿದೆ.ಇನ್ನು ಕೆಲ ಗ್ರಾಮಗಳಲ್ಲಿ ಕಾಲುವೆ ನೀರನ್ನೇ ಹೆಚ್ಚಾಗಿ ಬಳಸಲಾಗುತ್ತಿದೆ.

ವಿಫಲ: ತಾಲೂಕಿನ ತಿಪ್ಪನಾಳ ಗ್ರಾಮದ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಸರಿಯಾಗಿ ಕಾರ್ಯ ನಿರ್ವಹಿಸದೇ ಇರುವುದರಿಂದ ಈ ಯೋಜನೆ ವ್ಯಾಪ್ತಿಯ ಗ್ರಾಮಗಳಲ್ಲಿ ಕೆಲವು ಸಲ ನೀರಿನ ಸಮಸ್ಯೆ ಯಾಗುತ್ತದೆ. ಈಗಾಗಲೇ ತಿಪ್ಪನಾಳ ಕೆರೆ ಭರ್ತಿ ಮಾಡಲಾಗುತ್ತಿದೆ. ಕಾರಟಗಿ ತಾಲೂಕಿನ ಮೈಲಾಪುರ ಹತ್ತಿರ ಇರುವ ಬಹುಗ್ರಾಮ ಕುಡಿಯುವ ನೀರಿನ ಸರಬರಾಜು ಯೋಜನೆ ಕೂಡ ಸರಿಯಾಗಿ ನಿರ್ವಹಣೆಮಾಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

Advertisement

ಕ್ರಿಯಾ ಯೋಜನೆ ಸಿದ್ಧ: ಕನಕಗಿರಿ ವಿಧಾನಸಭಾ ಕ್ಷೇತ್ರದ ಕನಕಗಿರಿ ಮತ್ತು ಕಾರಟಗಿ ತಾಲೂಕಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಎರಡು ತಾಲೂಕು ಆಡಳಿತದಿಂದ ಕ್ರಿಯಾ ಯೋಜನೆ ತಯಾರಿಸಿ ಡಿಸಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಕಾರಟಗಿ ತಾಲೂಕಿನಲ್ಲಿ ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಮುಂಜಾಗ್ರತಾ ಕ್ರಮವಾಗಿ ಪ್ರತಿಹಳ್ಳಿಗೆ 2 ಖಾಸಗಿ ಬೋರ್‌ವೆಲ್‌ಗ‌ಳನ್ನು ಗುರುತಿಸುವ ಕಾರ್ಯ ನಡೆದಿದೆ. ಕಳೆದ ವರ್ಷ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ನಿರ್ವಹಣೆಗಾಗಿ 15 ಲಕ್ಷ ರೂ. ಅನುದಾನ ಬಂದಿದ್ದು, ಈ ಅನುದಾನ ಬಳಕೆ ಮಾಡಿಲ್ಲ. ಮುಂದಿನ ದಿನಮಾನಗಳಲ್ಲಿ ಬರುವ ಪರಿಸ್ಥಿತಿ ಗಮನಿಸಿ ಕ್ರಮ ಕೈಗೊಳ್ಳಲಾಗುವುದು.-ಶಿವಶಂಕರಪ್ಪ ಕೆ., ತಹಶೀಲ್ದಾರ್‌ ಕಾರಟಗಿ

ರಾಜ್ಯ ಸರ್ಕಾರ ತಾಲೂಕನ್ನು ಬರಪೀಡಿತತಾಲೂಕೆಂದು ಘೋಷಣೆ ಮಾಡಿದಾಗ ಮಾತ್ರ ತಾಲೂಕು ಆಡಳಿತಕ್ಕೆ ಅನುದಾನ ಬರುತ್ತದೆ. ಈಗಾಗಲೇ ತಾಲೂಕಿನ 22 ಗ್ರಾಮಗಳಲ್ಲಿರುವ ಕುಡಿಯುವ ನೀರಿನಸಮಸ್ಯೆಯ ವರದಿ ತಯಾರಿಸಿ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. – ರವಿ ಅಂಗಡಿ, ಕನಕಗಿರಿ ತಹಶೀಲ್ದಾರ್‌

 

-ಶರಣಪ್ಪ ಗೋಡಿನಾಳ

Advertisement

Udayavani is now on Telegram. Click here to join our channel and stay updated with the latest news.

Next