Advertisement

ಕುಡಿವ ನೀರಿಗಾಗಿ ಪಕ್ಕದ ಊರಿಗೆ ದಂಡಯಾತ್ರೆ

05:59 PM Nov 06, 2020 | Suhan S |

ಬಾಗೇಪಲ್ಲಿ: ತಾಲೂಕಿನ ತಿಮ್ಮಂಪಲ್ಲಿ ಗ್ರಾಪಂನ ಚಂಚುರಾಯನಪಲ್ಲಿ ದಲಿತ ಕೇರಿಯಲ್ಲಿ ಸುಮಾರು 110 ಕುಟುಂಬಗಳು ವಾಸವಿದ್ದು, ಈ ದಲಿತ ಕಾಲೋನಿಯಲ್ಲಿ 540 ಜನಸಂಖ್ಯೆ ಇದೆ. ಕಳೆದ 3-4 ವರ್ಷಗಳಿಂದ ಕುಡಿಯುವ ನೀರಿನ ಇವರನ್ನು ನಿತ್ಯ ಬೆಳಗಾದರೇ ಕಾಡುತ್ತಿದೆ.

Advertisement

ಕುಡಿಯುವ ನೀರಿಗಾಗಿ ಹಲವು ಬಾರಿ ಮನವಿ ಸಲ್ಲಿಸಿ ಹೋರಾಟ ಮಾಡುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಮನವಿಗೆ ಸ್ಪಂದಿಸದಿರುವುದು ದಲಿತ ಕೇರಿಯ ನಿವಾಸಿಗಳ ಆಕ್ರೋಶಕ್ಕೆಕಾರಣವಾಗಿದೆ.

ಪಕ್ಕದ ಗ್ರಾಮಗಳಿಗೆ ಅಲೆದಾಟ: ಗ್ರಾಮದ ಮಹಿಳೆಯರು, ಮಕ್ಕಳು, ವೃದ್ಧರು, ಬಿಂದಿಗೆ ಹಿಡಿದು ನೀರಿಗಾಗಿ ಅಕ್ಕಪಕ್ಕದಲ್ಲಿರುವ ಹತ್ತಿರದ ಬೊಮ್ಮಯ್ಯಗಾರಿಪಲ್ಲಿ, ಮರಸನಪಲ್ಲಿ, ಗುಂಡ್ಲಪಲ್ಲಿ ಗ್ರಾಮಗಳಿಗೆ ಹೋಗಿ ನೀರು ತರಬೇಕಾದ ದುಸ್ಥಿತಿ ಇದೆ.

ಪಿಡಿಒ ಸಿಗಲ್ಲ: ಚಂಚುರಾಯನಪಲ್ಲಿ ಕಾಲೋನಿಯಲ್ಲಿ ನೀರಿನ ಸಮಸ್ಯೆ ಜಟಿಲವಾಗಿದ್ದು, ಸಮಸ್ಯೆ ಬಗ್ಗೆ ಮನವಿ ಮಾಡಲು ಬರುವ ಸಾರ್ವಜನಿಕರಿಗೆ ತಿಮ್ಮಂಪಲ್ಲಿ ಗ್ರಾಪಂ ಪಿಡಿಒ ನಾರಾಯಣಸ್ವಾಮಿಯ ದರ್ಶನ ಭಾಗ್ಯ ಸಿಗುವುದಿಲ್ಲ ಎನ್ನಲಾಗಿದೆ.

ಅನುದಾನ ದುರ್ಬಳಕೆ: 2018-19 ನೇ ಸಾಲಿನ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಸುಮಾರು 70 ಲಕ್ಷಕ್ಕೂ ಹೆಚ್ಚು ಅನುದಾನ ಗ್ರಾಮದ ಅಭಿವೃದ್ಧಿಗೆ ಬಿಡುಗಡೆಯಾಗಿ ಹಣ ಖರ್ಚಾಗಿದ್ದರೂ, ಗ್ರಾಮದಲ್ಲಿ ಮಾತ್ರ ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥವಾಗಿಲ್ಲ.ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಯಾರೊಬ್ಬರೂ ಮುಂದಾಗಿಲ್ಲ.

Advertisement

ಪಕ್ಕದ ಗ್ರಾಮಗಳಿಗೆ ತೆರಳಿ ನೀರು ತರಬೇಕಿದೆ’ :  ಕೂಲಿ ನಾಲಿ ಮಾಡಿ ಜೀವನ ನಡೆಸುತ್ತಿದ್ದೇವೆ. ಪ್ರತಿ ದಿನ ಕೂಲಿಗೆ ಹೋಗುವ ಮುನ್ನ ಅಕ್ಕಪಕ್ಕದ ಹಳ್ಳಿಗಳಿಂದ ನೀರು ತರಬೇಕಾಗಿದೆ. ನಮ್ಮ ಗ್ರಾಮಕ್ಕೆ ಅಧಿಕಾರಿಗಳು ಬರುತ್ತಾರೆ ಹೋಗುತ್ತಾರೆ ಆದರೂ ನೀರಿನ ಸಮಸ್ಯೆ ಹೇಳಿದರೆ ತಾತ್ಕಾಲಿಕವಾಗಿ ಇತ್ಯರ್ಥಗೊಳಿಸಿ ಹೋಗುತ್ತಾರೆ. ನಂತರ ಯಥಾಸ್ಥಿತಿ. ನಮ್ಮ ಪರಿಸ್ಥಿತಿ ಯಾರಿಗೆ ಹೇಳಬೇಕು, ನೀರು ಕೊಡಲಿಕ್ಕೆ ಆಗುತ್ತಿಲ್ಲವಾದರೆ ವಿಷವಾದರೂ ಕೊಡಿ ಎಂದು ಸ್ಥಳೀಯ ನಿವಾಸಿ ಮಂಜುಳಾ ಅಳಲು ತೋಡಿಕೊಂಡರು.

ಟ್ಯಾಂಕರ್‌ ನೀರು ಸರಬರಾಜು ಸ್ಥಗಿತ :  ನೀರಿನ ಸಮಸ್ಯೆ ನೀಗಿಸುವಂತೆ ಮನವಿ ಮಾಡಿದಾಗ ಅಧಿಕಾರಿಗಳು ನಾಮ್‌ಕಾವಸ್ಥೆಗೆ ಖಾಸಗಿ ಟ್ಯಾಂಕರ್‌ನಿಂದ ನೀರನ್ನು ಹಾಗಾಗ ಗ್ರಾಮಕ್ಕೆ ಸರಬರಾಜು ಮಾಡುತ್ತಿದ್ದರೂ, ಆದರೆ ನೀರು ಸರಬರಾಜು ಮಾಡುವ ಟ್ಯಾಂಕರ್‌ ಮಾಲೀಕನಿಗೆ ಹಣ ನೀಡಿಲ್ಲ ಎಂದು ಇತ್ತೀಚೆಗೆ ಟ್ಯಾಂಕರ್‌ನಿಂದ ನೀರು ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸಿದ್ದಾರೆ.

ಚಂಚುರಾಯನಪಲ್ಲಿ ಗ್ರಾಮದಲ್ಲಿ ಸಿಆರ್‌ಎಫ್ ಅನುದಾನದಲ್ಲಿಖಾಸಗಿ ಟ್ಯಾಂಕರ್‌ ಮೂಲಕ ಜನರಿಗೆ ನೀರು ಸರಬರಾಜು ಮಾಡಲಾಗುತ್ತಿತ್ತು. ಸ್ಥಗಿತಗೊಂಡಿರುವುದು ಗಮನಕ್ಕೆ ಬಂದಿಲ್ಲ. ಇತ್ತೀಚೆಗೆ ಒಂದು ಕೊಳವೆ ಬಾಕೊರೆಯಲಾಗಿದೆ ಆದರೂ ನೀರು ಸಿಗಲಿಲ್ಲ.ಖಾಸಗಿ ಕೊಳವೆಬಾ ಮಾಲೀಕರೊಂದಿಗೆ ಪಿಡಿಒ ಒಮ್ಮೆ ಚರ್ಚಿಸಿ ಸಮಸ್ಯೆ ಇತ್ಯರ್ಥಗೊಳಿಸಬೇಕು. ರಾಮ ಲಿಂಗಾರೆಡ್ಡಿ, ಎಇಇ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ. ಬಾಗೇಪಲ್ಲಿ

ತಾಲೂಕಿನ ಚಂಚಯರಾಯನಪಲ್ಲಿ ಗ್ರಾಮದಲ್ಲಿ ನೀರಿನ ಸಮಸ್ಯೆ ಬಗ್ಗೆನನಗೆ ಮಾಹಿತಿ ಇಲ್ಲ. ಪಿಡಿಒ ಅವರ ಬಳಿ ಚರ್ಚೆ ಮಾಡಿ ಕೂಡಲೇ ನೀರು ಸರಬರಾಜು ಮಾಡುವಂತೆ ಸೂಚಿಸುತ್ತೇನೆ. ಎಚ್‌.ಎನ್‌.ಮಂಜುನಾಥ ಸ್ವಾಮಿ, ಇಒ, ತಾಪಂ ಬಾಗೇಪಲ್ಲಿ

 

ಪಿ.ಮಂಜುನಾಥರೆಡ್ಡಿ

Advertisement

Udayavani is now on Telegram. Click here to join our channel and stay updated with the latest news.

Next