ಅಜೆಕಾರು: ಮರ್ಣೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದ್ದು ಪಂಚಾಯತ್ ವತಿಯಿಂದ ಎ. 6ರಿಂದ ಟ್ಯಾಂಕರ್ ಮೂಲಕ ನೀರು ಪೂರೈಕೆ ಪ್ರಾರಂಭವಾಗಲಿದೆ.
ಗ್ರಾ.ಪಂ. ವ್ಯಾಪ್ತಿಯ ದೆಪುತ್ತೆ, ಕಿರೆಂಚಿಬೈಲು, ಗುಡ್ಡೆಯಂಗಡಿ, ಕಾಡುಹೊಳೆ, ಹೆರ್ಮುಂಡೆ, ನೇಲ್‌ನೆಕ್ಕರೆ, ಎಣ್ಣೆಹೊಳೆ, ಬೊಂಡುಕುಮೇರಿ, ಕೈಕಂಬ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗಿದೆ.
ಈ ಹಿಂದಿನ ವರ್ಷಗಳಿಗೆ ಹೋಲಿಸಿದಲ್ಲಿ ಈ ಬಾರಿ ಬಹುಬೇಗನೆ ನೀರಿನ ಸಮಸ್ಯೆ ಉದ್ಭವಿಸಿದ್ದು ಕುಡಿಯುವ ನೀರಿಗೂ ತತ್ವಾರವಾಗಿದೆ. ಕಳೆದ ಮಾರ್ಚ್ ತಿಂಗಳಿ ನಿಂದಲೇ ಈ ಪ್ರದೇಶಗಳ ತೆರೆದ ಬಾವಿ ಗಳಲ್ಲಿ ಜಲಮಟ್ಟ ತೀವ್ರ ಕುಸಿತಗೊಂಡಿದು,ª ಮಾರ್ಚ್ ತಿಂಗಳ ಕೊನೆಯಲ್ಲಿ ತೆರೆದ ಬಾವಿಗಳಲ್ಲಿ ಸಂಪೂರ್ಣ ಜಲ ಬತ್ತಿ ಹೋಗಿದೆ.
ಈ ಪ್ರದೇಶಗಳಲ್ಲಿರುವ ಒಂದೆರಡು ಖಾಸಗಿ ಬಾವಿಗಳ ತಳಮಟ್ಟದಲ್ಲಿ ಅಲ್ಪಸ್ವಲ್ಪ ನೀರು ವಠಾರದ ಪ್ರತಿಯೊಂದು ಮನೆಗೂ ಆಸರೆಯಾಗಿದೆ. ಪ್ರತೀ ವರ್ಷವು ಎಪ್ರಿಲ್ ಮಧ್ಯ ಭಾಗದಿಂದ ಮೇ ತಿಂಗಳಿನವರೆಗೆ ಈ ಭಾಗಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸುತ್ತಿದ್ದು, ಸುಮಾರು 250 ಮನೆಗಳು ಸಮಸ್ಯೆಗೆ ಒಳಗಾಗಿವೆ.
ವರ್ಷದಿಂದ ವರ್ಷಕ್ಕೆ ಅಂತರ್ಜಲವು ಕುಸಿಯುತ್ತಿರುವುದರಿಂದ ಪಂಚಾಯತ್ ವ್ಯಾಪ್ತಿಯಲ್ಲಿರುವ ಕೊಳವೆ ಬಾವಿಗಳಲ್ಲಿಯೂ ಬೇಸಗೆಯಲ್ಲಿ ನೀರಿನ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದು ಕುಡಿಯುವ ನೀರು ಒದಗಿಸುವುದು ಪಂಚಾಯತ್ ಆಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ.
ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿರುವ ಪ್ರದೇಶಗಳಲ್ಲಿ 2 ದಿಕ್ಕೊಮ್ಮೆ ಟ್ಯಾಂಕರ್ ನೀರು ಪೂರೈಕೆ ಮಾಡಲು ಪಂಚಾಯತ್ ಆಡಳಿತ ಕ್ರಮ ಕೈಗೊಂಡಿದೆ. ನೀರಿನ ಸಮಸ್ಯೆ ಇರುವ ಪ್ರತೀ ಮನೆಗೆ ಕನಿಷ್ಠ 200ಲೀ. ನೀರನ್ನು ದಿನಕ್ಕೆR ಪೂರೈಸಲು ನಿರ್ಣಯ ತೆಗೆದುಕೊಳ್ಳಲಾಗಿದೆ.
ಕ್ರಮ ಕೈಗೊಳ್ಳಲಾಗಿದೆ
ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತೀ ವರ್ಷದಂತೆ ಈ ಬಾರಿಯೂ ನೀರಿನ ಸಮಸ್ಯೆ ಉಲ್ಬಣಿಸಿದ್ದು ಎ. 6ರಿಂದ ಟ್ಯಾಂಕರ್ ಮೂಲಕ ಕುಡಿಯುವ ನೀರು ಒದಗಿಸಲಾಗುವುದು. ಮಳೆಗಾಲ ಪ್ರಾರಂಭವಾಗುವವರೆಗೆ ಪ್ರತೀ 2 ದಿನಕ್ಕೊಮ್ಮೆ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ.
-ತಿಲಕ್‌ರಾಜ್, ಪಿಡಿಒ, ಮರ್ಣೆ ಗ್ರಾ.ಪಂ.