Advertisement
ಓಡಂತರ್ಯದಲ್ಲಿ ಹರಿಯುತ್ತಿರುವ ಗೌರಿಹೊಳೆಯಲ್ಲಿ ಇಲ್ಲಿನ ನಿವಾಸಿಗಳಿಗೆ ಕೃಷಿ ಹಾಗೂ ಕುಡಿಯುವ ನೀರಿನ ಉದ್ದೇಶಕ್ಕಾಗಿ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಜಾಕ್‌ವೆಲ್ ನಿರ್ಮಾಣ ಮಾಡಲಾಗಿದೆ. ಈ ಜಾಕ್‌ವೆಲ್ನಲ್ಲಿ ಮಾರ್ಚ್ ಅಂತ್ಯದಲ್ಲೇ ನೀರು ಬತ್ತಿ ಹೋಗಿದೆ. ಹೊಳೆಯಲ್ಲಿಯೂ ನೀರು ಬತ್ತಿ ಹೋಗಿದೆ.
ಹೊಳೆಯಲ್ಲಿ ನಿರ್ಮಿಸಿದ ಜಾಕ್‌ವೆಲ್ ನಂಬಿ 30 ಸಾವಿರಕ್ಕೂ ಹೆಚ್ಚು ಖರ್ಚು ಮಾಡಿ ಪೈಪ್ ಇನ್ನಿತರ ಅಗತ್ಯ ವಸ್ತುಗಳನ್ನು ಹಾಕಿದ್ದೇವೆ. ಈಗ ನೀರಿಲ್ಲದೆ ಪರಿತಪಿಸುವಂತಾಗಿದೆ ಎನ್ನುತ್ತಾರೆ ಬಳಕೆದಾರರು.
Related Articles
Advertisement
ಎಂಜಿನಿಯರ್ ನಿರ್ಲಕ್ಷ್ಯಗುತ್ತಿಗೆದಾರರು ಜಾಕ್‌ವೆಲ್ ನಿರ್ಮಾಣ ಕಾಮಗಾರಿ ಮಾಡುವ ಸಮಯದಲ್ಲಿ ಸರಿಯಾಗಿ ಆಳ ಮಾಡಿಲ್ಲ. ಕಲ್ಲನ್ನು ಒಡೆಯದೆ ಹಾಗೇ ಬಿಟ್ಟಿದ್ದಾರೆ. ಇದರಿಂದ ಭವಿಷ್ಯದಲ್ಲಿ ಸಮಸ್ಯೆಯಾಗಲಿದೆ ಎನ್ನುವುದನ್ನು ಇಲಾಖೆ ಎಂಜಿನಿಯರ್ ಗಮನಕ್ಕೆ ತಂದಿದ್ದೇವೆ. ಆದರೆ ಅವರು ಕಾಮಗಾರಿ ಸ್ಥಳಕ್ಕೆ ಬಾರದೇ ನಿರ್ಲಕ್ಷ್ಯ ವಹಿಸಿದ್ದರಿಂದ ಈ ಸಮಸ್ಯೆಯಾಗಿದೆ.
– ನಾಗೇಶ್ ಓಡಂತರ್ಯ ಗ್ರಾ.ಪಂ. ಸದಸ್ಯ
ಪ್ರವೀಣ್ ಚೆನ್ನಾವರ