Advertisement

ನೀರಿಗಾಗಿ ಜಿಲ್ಲಾಧಿಕಾರಿಗೆ ಕೈ ಮುಗಿಯುವ ಜನತೆ!

02:44 PM Apr 10, 2021 | Team Udayavani |

ಹುಳಿಯಾರು: ಜಿಲ್ಲಾಧಿಕಾರಿಗಳೇ, ನಾವು ಹನಿ ನೀರಿಗೂ ಹಾಹಾಕಾರ ಎದುರಿಸುತ್ತಿದ್ದೇವೆ. ಕೈಮುಗಿದು ಕೇಳ್ಕೋತ್ತೀವಿ, ಜೀವ ಉಳಿಸಿಕೊಳ್ಳಲುನೀರು ಕೊಡಿ. ನೀವೇನಾದ್ರೂ ಕೈ ಬಿಟ್ರೆ ನಮಗೆ ಸಾವೇ ಗತಿ…

Advertisement

ಇದು, ಹುಳಿಯಾರು ಹೋಬಳಿ ಹೊಯ್ಸಲಕಟ್ಟೆ ಗ್ರಾಪಂನೀರಿನ ಸಮಸ್ಯೆ ಎದುರಿಸುತ್ತಿರುವ ಐದಾರು ಹಳ್ಳಿಗಳ ನಿವಾಸಿಗಳ ಮನವಿ.

ಮುಂದೇನು ಗತಿ: ಹೊಯ್ಸಲಕಟ್ಟೆ ಗ್ರಾಪಂಕಲ್ಲೇನಹಳ್ಳಿಯಲ್ಲಿ ಮೊದಲು ನೀರಿನ ಸಮಸ್ಯೆ ಆರಂಭವಾಯಿತು.ಸರಿಸುಮಾರು 300 ಮನೆಗಳ ಒಂದೂವರೆ ಸಾವಿರಕ್ಕೂ ಹೆಚ್ಚು ಜನಸಂಖ್ಯೆಯುಳ್ಳ ಇಲ್ಲಿಗೆ ನೀರು ಪೂರೈಸುತ್ತಿದ್ದ 2 ಕೊಳವೆಬಾವಿ ಕಳೆದ 3 ತಿಂಗಳ ಹಿಂದೆ ಬರಿದಾಯಿತು. ಈ ವೇಳೆ ಪಂಚಾಯ್ತಿ ತಕ್ಷಣ ಸ್ಪಂದಿಸಿ ಟ್ಯಾಂಕರ್‌ ನೀರು ಪೂರೈಸಿತು. ಬಳಿಕ, ಆ ಕೊಳವೆ ಬಾವಿಯಲ್ಲೂ ಈಗ ಅಂತರ್ಜಲ ಕಡಿಮೆ ಯಾಗಿದ್ದು ಅಂತರ್ಜಲಬರಿದಾದರೆ ಮುಂದೇನು ಗತಿ ಎನ್ನುವ ಪ್ರಶ್ನೆ ಕಾಡುತ್ತಿದೆ.

ವಾರಕ್ಕೊಮ್ಮೆ ಟ್ಯಾಂಕರ್‌ ನೀರು: ಇದೇ ಪಂಚಾಯ್ತಿಯ 250 ಮನೆಯ ಗ್ರಾಮವಾದ ನುಲೇನೂರಿನಲ್ಲೂ ಕಳೆದ 1 ತಿಂಗಳಿಂದ ನೀರಿಗೆ ಹಾಹಾಕಾರ ಶುರುವಾಗಿದೆ. ಟ್ಯಾಂಕರ್‌ ನೀರು ಪೂರೈಸುತ್ತಿದ್ದು ಪಂಚಾಯ್ತಿಯಲ್ಲಿ ಹಣದ ಸಮಸ್ಯೆಯಿಂದ ವಾರಕ್ಕೊಮ್ಮೆ ಮಾತ್ರ ಟ್ಯಾಂಕರ್‌ ನೀರು ಪೂರೈಸಲಾಗುತ್ತಿದೆ.

ಪರದಾಟ: ಇನ್ನು ಈ ಪಂಚಾಯ್ತಿಯ ಬೆಂಚಿಹಟ್ಟಿ ಗ್ರಾಮದಲ್ಲೂ ನೀರಿನ ಸಮಸ್ಯೆ ಇದ್ದು ಒಂದೂವರೆ ಕಿ.ಮೀ ದೂರದಿಂದ ನೀರನ್ನು ಹೊತ್ತು ತರಬೇಕಿದೆ. ಅಲ್ಲದೆ ತಿಮ್ಮಪ್ಪನಹಟ್ಟಿ ಹಾಗೂ ಜಯಚಂದ್ರನಗರದಲ್ಲೂ ನೀರಿನ ಅಭಾವವಿದ್ದು ಟ್ಯಾಂಕರ್‌ ಮೂಲಕ ನೀರು ಪೂರೈಕೆ ಅನಿವಾರ್ಯವಾಗಿದೆ.ಪಂಚಾಯ್ತಿಯಲ್ಲಿ ಹಣದ ಸಮಸ್ಯೆಯಿಂದ ಟ್ಯಾಂಕರ್‌ ನೀರು ಸರಬರಾಜು ಆಗದೆ ಜನ ನೀರಿಗೆ ಪರದಾಡುವಂತಾಗಿದೆ.

Advertisement

15ನೇ ಹಣಕಾಸಿನ ಹಣ ಬಳಸಿ :

ನೀರಿನ ಸಮಸ್ಯೆ ನಿವಾರಣೆಗೆ ಟಾಸ್ಕ್ ಫೋರ್ಸ್‌ಗೆ ಇನ್ನೂ ಹಣ ಬಿಡುಗಡೆಯಾಗಿಲ್ಲ. ಹೀಗಾಗಿ 15ನೇ ಹಣಕಾಸಿನಲ್ಲಿ ಲಭ್ಯವಿರುವ ಹಣದಲ್ಲಿ ಶೇ.50 ಹಣ ಬಳಕೆಗೆ ಪಂಚಾಯ್ತಿಗಳಿಗೆ ಸೂಚನೆ ನೀಡಲಾಗಿದೆ. ನುಲೇನೂರು ಹಾಗೂ ಬೆಂಚಿಹಟ್ಟಿ ಗ್ರಾಮಗಳಿಗೆ ಹೊಸ ಬೋರ್‌ ಕೊರೆಸಲು ಪಾಯಿಂಟ್‌ ಮಾಡಲಾಗಿದೆ. ಆದರೆ, ಪಿಡಿಒ ಮತ್ತು ಸದಸ್ಯರ ಸಾಮರಸ್ಯ ಕೊರತೆಯಿದೆ.ಇನ್ನು ಕಲ್ಲೇನಹಳ್ಳಿ ಗುತ್ತಿಗೆದಾರರಿಗೆ ಟ್ಯಾಂಕರ್‌ ನೀರು ಸರಬರಾಜು ನಿಲ್ಲಿಸದಂತೆಖುದ್ದು ನಾನೇ ಮನವಿ ಮಾಡಿದ್ದೇನೆ ಎಂದು ಚಿಕ್ಕನಾಯಕನಹಳ್ಳಿ ಪ್ರಭಾರ ಇಒ ಡಿ.ಆರ್‌.ಹನುಮಂತರಾಜು ಮಾಹಿತಿ ನೀಡಿದ್ದಾರೆ.

ನೀರಿಗೆ ಹೋದರೆ ಕೂಲಿ ಸಿಗಲ್ಲ ನೀರಿನ ಸಮಸ್ಯೆಗಳಿರುವ ಗ್ರಾಮದ ನಿವಾಸಿಗಳು ರೈತರು ಮತ್ತು ಕೂಲಿ ಕಾರ್ಮಿಕರು. ಟ್ಯಾಂಕರ್‌ ನೀರು ಸರಬರಾಜು ಸ್ಥಗಿತವಾದರೆ ಅಕ್ಕಪಕ್ಕದ ಜಮೀನುಗಳ ಮಾಲಿಕರಿಂದ ಕಾಡಿಬೇಡಿ ನೀರು ತರಬೇಕಿದೆ. ಹಗಲಿನ ವೇಳೆ ನೀರು ತರಲು ಹೋದರೆಕೂಲಿ ಇಲ್ಲ, ಕೂಲಿ ಗೋದರೆ ನೀರಿಲ್ಲ ಎನ್ನುವ ಪರಿ ಸ್ಥಿತಿ ಎದುರಿಸ ಬೇಕಿದೆ. ಇನ್ನು ತ್ರಿಫೇಸ್‌ ಕರೆಂಟ್‌ಮಧ್ಯರಾತ್ರಿ ಇದ್ದಾಗ ವಿಷಜಂತುಗಳ, ಕಾಡುಪ್ರಾಣಿಗಳ ಭಯದಲ್ಲಿ ನಲುಗುವಂತಾಗಿದೆ. ಬೇಸಿಗೆಆರಂಭದ ದಿನಗಳಲ್ಲೇ ಸಮಸ್ಯೆ ಮಿತಿ ಮೀರಿದ್ದು ಮುಂದಿನ ದಿನಗಳನ್ನು ಹೇಗೆ ಎದರಿಸುವುದು ಎನ್ನುವ ಆತಂಕ ಇಲ್ಲಿನ ನಿವಾಸಿಗಳದ್ದಾಗಿದೆ.

ಪಂಚಾಯ್ತಿಯಲ್ಲಿ ಹಣವಿಲ್ಲ :

ನುಲೇನೂರು ಗ್ರಾಮದ ನೀರಿನ ಸಮಸ್ಯೆ ನಿವಾರಣೆಗೆ ಶಕ್ತಿ ಮೀರಿ ಪಂಚಾಯ್ತಿ ಯಿಂದ ಸ್ಪಂದಿ ಸುತ್ತಿದ್ದೇವೆ. ಆದರೆ, ಎಲ್ಲಾ ಹಳ್ಳಿಗೂ ಟ್ಯಾಂಕರ್‌ ನೀರುಪೂರೈ ಸಲು ಪಂಚಾಯ್ತಿಯಲ್ಲಿ ಹಣವಿಲ್ಲ. ಅಧ್ಯಕ್ಷ ಚಿಕ್ಕಣ್ಣ ಅವರ ಸ್ಪಂದನೆಯಿಂದ ಈಗ ವಾರಕ್ಕೊಮ್ಮೆಯಾದರೂ ನೀರುಬರುತ್ತಿದೆ. ಕೊಳವೆಬಾವಿಗೆ ವಿಶೇಷ ಅನುದಾನಬಿಡುಗಡೆ ಮಾಡಬೇಕಿದೆ ಎಂದು ನುಲೇನೂರು ಗ್ರಾಪಂ ಸದಸ್ಯ ಸುಧಾಕರ್‌ ತಿಳಿಸಿದ್ದಾರೆ.

ಕಲ್ಲೇನಹಳ್ಳಿ ನೀರಿನ ಸಮಸ್ಯೆ  ಹೆಚ್ಚಾದಾಗ ಮಾಸಿಕ 25ಸಾವಿರ ರೂ.ನಂತೆ ಟ್ಯಾಂಕರ್‌ ನೀರುಸರಬರಾಜಿಗೆ ಪಂಚಾಯ್ತಿಯಿಂದ ಖಾಸಗಿ ಗುತ್ತಿಗೆ ನೀಡಲಾಗಿತ್ತು.ಇನ್ನೂ 2 ತಿಂಗಳ ಹಣ ಬಾಕಿಯಿದೆ. ಇಂತಹ ಪರಿಸ್ಥಿತಿಯಲ್ಲಿ ನೀರಿನ ಸಮಸ್ಯೆ ಪರಿಹರಿಸುವುದು ಹೇಗೆಂದು ತಿಳಿಯದಾಗಿದೆ. ಮಂಜುನಾಥ್‌, ಕಲ್ಲೇನಹಳ್ಳಿ ಗ್ರಾಪಂ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next