Advertisement

ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಕ್ಷಾಮ ಪರಿಹಾರ ಕ್ರಮ: ಡಾ|ಸಜಿತ್‌ಬಾಬ

01:00 AM Mar 14, 2019 | Harsha Rao |

ಕುಂಬಳೆ : ಕಾಸರಗೋಡು ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಕ್ಷಾಮ ತಲೆದೋರಿದ್ದು ಇದರ ಪರಿಹಾರಕ್ಕೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್‌ಬಾಬು ಅವರು ಪರಿಹಾರ ಕ್ರಮಕ್ಕೆ ಮುಂದಾಗಿದ್ದಾರೆ.

Advertisement

ಇದರಂತೆ ಮಂಜೇಶ್ವರ ಮತ್ತು ಕಾಸರಗೋಡು ಬ್ಲಾಕ್‌ಗಳಲ್ಲಿ ಹರಿಯುವ ಹೊಳೆಗಳಾದ ಉಪ್ಪಳ, ಶಿರಿಯ,ಮೊಗ್ರಾಲ್‌ಪುತ್ತೂರು ಮೊದಲಾದೆಡೆಗಳಲ್ಲಿ ಕುಡಿಯುವ ನೀರಿಗೆ ಪಂಪ್‌ ನಡೆಸುವ ಸ್ಥಳದ 500 ಮೀ.ಪ್ರದೇಶದ ಕೆಳಗೆ ಮತ್ತು ಮೇಲಿನ ಭಾಗದಲ್ಲಿರುವ ಕೃಷಿ ನೀರಾವರಿ ಪಂಪ್‌ಗ್ಳ ವಿದ್ಯುತ್‌ ಸಂಪರ್ಕವನ್ನು ತತ್‌ಕ್ಷಣ ಬೇರ್ಪಡಿಸಲು ಸಲು ಜಿಲ್ಲಾಧಿಕಾರಿಯವರು ಆಯಾ ವಿದ್ಯುತ್‌ ಇಲಾಖೆಯ ಅಧಿಕಾರಿಗಳಿಗೆ ಆದೇಶ ನೀಡಿರುವರು.

ಉಚಿತ ವಿದ್ಯುತ್‌ ದುರುಪಯೋಗ 
 ರಾಜ್ಯ ಸರಕಾರ ಕೃಷಿಗೆ ನೀಡಿದ ಉಚಿತ ವಿದ್ಯುತ್‌ ಯೋಜನೆಯಂತೆ ಹೆಚ್ಚಿನ ಕೃಷಿಕರು ಲಂಗುಲಗಾಮಿಲ್ಲದೆ ಇದರ ದುರುಪಯೋಗ ನಡೆಸುತ್ತಿರುವುದಾಗಿ ಜಿಲ್ಲಾಧಿಕಾರಿ ಆರೋಪಿಸಿದ್ದಾರೆ.ಹೊಳೆಗಳಲ್ಲಿ ಕಂದಾಯ ಇಲಾಖೆಯ ಪರವಾನಿಗೆ ಪಡೆಯದೆ ಬಾವಿ ತೋಡಿ ಇದರೊಳಗೆ ಕಾಂಕೀÅಟ್‌ ರಿಂಗ್‌ ಹಾಕಿ ಕಾಣದಂತೆ ಮುಚ್ಚಿ ತೋಟಗಳಿಗೆ ಅನಿಯಂತ್ರಿತವಾಗಿ ನೀರು ಬಳಸುತ್ತಿರುವುದರಿಂದ ವರ್ಷದಿಂದ ವರ್ಷಕ್ಕೆ ನೀರಿನ ಕ್ಷಾಮ ತಲೆದೋರುತ್ತಿದೆ.
.ಒಂದು ಕಂಗಿಗೆ ಕೇವಲ 80 ಲೀಟರ್‌ ನೀರು ಮೂರು ದಿನಗಳ ತನಕ ಸಾಕಾಗುತ್ತಿದ್ದು ಕೆಲವು ಕೃಷಿಕರು ಹೊಳೆಯ ನೀರನ್ನು ನಿತ್ಯ ರಾತ್ರಿ ಹಗಲೆನ್ನದೆ ತೋಟಕ್ಕೆ ಹರಿಯಬಿಟ್ಟು ನೀರಿನ ಕ್ಷಾಮಕ್ಕೆ ಕಾರಣವಾಗುತ್ತಿದೆ.

ನೀರಿನ ಬರಕ್ಕೆ ಕಾರಣವಾಗಿದೆ.ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಕ್ಷಾಮ ತೀವ್ರವಾಗಲಿದ್ದು ಅನಗತ್ಯ ನೀರು ಹರಿಸಿ ಪೋಲು ಮಾಡುವವರ ವಿರದ್ಧ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವೆಂಬುದಾಗಿ ಜಿಲ್ಲಾಧಿಕಾರಿ ಯವರು ಎಚ್ಚರಿಸಿದ್ದಾರೆ.ಜಿಲ್ಲಾಧಿಕಾರಿಯವರು ಉಪ್ಪಳ,ಶಿರಿಯ,ಮೊಗ್ರಾಲ್‌ ಹೊಳೆಗಳಿಗೆ ಭೇಟಿ ನೀಡಿ ಅನಧಿಕೃತ ನೀರಾವರಿ ಪಂಪ್‌ ಶೆಡ್ಡ್ಗಳನ್ನು ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next