Advertisement

ದಿನಕ್ಕೆ ಮೂರಕ್ಕಿಂತ ಹೆಚ್ಚು ಕಪ್‌ ಕಾಫಿ ಕುಡಿದರೆ ಮೈಗ್ರೇನ್‌!

09:17 AM Aug 11, 2019 | Nagendra Trasi |

ಬಿಸಿ ಬಿಸಿ ಕಾಫಿ.. ಎಷ್ಟೇ ಬಾರಿಯಾದ್ರೂ ಕುಡಿಯೋಣ ಅನ್ನಿಸುತ್ತೆ. ಆದರೆ ಹೀಗೆ ಕಾಫಿ ಕುಡಿಯುವುದು ಒಳ್ಳೇದಲ್ಲ. ದಿನಕ್ಕೆ ಮೂರು ಕಪ್‌ಗಿಂತ ಹೆಚ್ಚು ಬಾರಿ ಕಾಫಿ ಕುಡಿದರೆ ಮೈಗ್ರೇನ್‌ (ತಲೆಶೂಲೆ) ಬರುವ ಅಪಾಯವಿದೆಯಂತೆ.

Advertisement

ಈ ಬಗ್ಗೆ ಅಮೆರಿಕನ್‌ ಜರ್ನಲ್ ಆಫ್ ಮೆಡಿಸಿನ್‌ ಹೆಸರಿನ ನಿಯತಕಾಲಿಕೆಯಲ್ಲಿ ಸಂಶೋಧನ ಲೇಖನವೊಂದು ಪ್ರಕಟವಾಗಿದೆ. ಕಾಫಿ ಅಂಶವಿರುವ ಯಾವುದೇ ಪಾನೀಯವನ್ನು ಕುಡಿಯವುದರಿಂದ ಸಮಸ್ಯೆಯಾಗಬಹುದು ಎಂದು ಸಂಶೋಧಕರು ಹೇಳಿದ್ದಾರೆ.

ಇದಕ್ಕೆ ಅತಿ ಹೆಚ್ಚು ಕಾಫಿ ಕುಡಿಯುವ ಮತ್ತು ಮೈಗ್ರೇನ್‌ ಇರುವ ಜನರನ್ನು ಅವರು ಸಮೀಕ್ಷೆಗೊಳಪಡಿಸಿದ್ದು, ಹೆಚ್ಚು ಕಾಫಿ ಕುಡಿಯದ ದಿನ ಅವರಿಗೆ ತಲೆಶೂಲೆ ಸಮಸ್ಯೆಯೂ ಕಡಿಮೆ ಇದ್ದದ್ದು ಗೊತ್ತಾಗಿದೆ. ಜತೆಗೆ ಕೆಲವರಿಗೆ ಕಾಫಿ ಹೆಚ್ಚು ಕುಡಿದು ಆ ದಿನ ಹೆಚ್ಚು ತಲೆಶೂಲೆ ಇದ್ದಿದ್ದೂ ಅಲ್ಲದೆ ಮರುದಿನವೂ ಅದರ ಪರಿಣಾಮ ಇದ್ದದ್ದು ಗೋಚರವಾಗಿದೆ.

ಕೆಫೈನ್‌ ಅಂಶ ನಮ್ಮಲ್ಲಿ ಹೆಚ್ಚಾದಂತೆ ಈ ಸಮಸ್ಯೆ ಹೆಚ್ಚಲು ಕಾರಣವಾಗುತ್ತದೆ ಎಂದು ಹೇಳಲಾಗಿದೆ. ವೈದ್ಯಕೀಯ ಸಮೀಕ್ಷೆಗೆ 90 ಮಂದಿಯನ್ನು ಬಳಸಿಕೊಳ್ಳಲಾಗಿದ್ದು, ಕಾಫಿಯ ಪರಿಣಾಮ ಇತ್ಯಾದಿಗಳನ್ನು ಗಮನಿಸಲಾಗಿದೆ. ಒಂದೆರಡು ಬಾರಿ ಕುಡಿದಿದ್ದರಿಂದ ಹೆಚ್ಚು ಸಮಸ್ಯೆ ಗೋಚರಿಸಿಲ್ಲ. ಆದರೆ ಮೂರಕ್ಕೂ ಹೆಚ್ಚು ಬಾರಿ ಕಾಫಿ ಕುಡಿದವರಲ್ಲಿ ಸಮಸ್ಯೆ ಗೋಚರಿಸಿದೆ ಎಂ ಸಂಶೋಧಕರು ಬೊಟ್ಟು ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next